Viral: ಉಬರ್ ಆಟೋ ರೈಡ್ ಕೇವಲ ರೂ 6, ಏನಿದು ಬೆಂಗಳೂರಿನಲ್ಲಿ ಮ್ಯಾಜಿಕ್?

|

Updated on: Aug 17, 2023 | 12:14 PM

Bengaluru : ಬೆಂಗಳೂರಿನ ಆಟೋ ಕ್ಯಾಬ್​​ನವರು ಡಬಲ್, ತ್ರಿಬಲ್​ ಕೇಳಿದ್ದು ನಿಮ್ಮ ಅನುಭವಕ್ಕೆ ಬಂದಿರುತ್ತದೆ. ಇತ್ತೀಚೆಗಂತೂ ಸರಣಿಯಂತೆ ಈ ಕುರಿತು ಟ್ವೀಟ್​​ಗಳನ್ನು ಓದುತ್ತಿರುತ್ತೀರಿ. ಹೀಗಿರುವಾಗ ಕೇವಲ ರೂ. 6ಕ್ಕೆ ಉಬರ್ ರೈಡ್ ಬುಕ್ ಆದರೆ ಹೇಗನ್ನಿಸಬೇಡ? ಇದು ನಿಜವೋ ಸುಳ್ಳೋ, ಅಥವಾ ಏನಾದರೂ ಗೋಲ್​ಮಾಲ್ ಇದೆಯೋ ಎಂದು ಅನುಮಾನ ಬರುತ್ತದೆ ತಾನೆ?

Viral: ಉಬರ್ ಆಟೋ ರೈಡ್ ಕೇವಲ ರೂ 6, ಏನಿದು ಬೆಂಗಳೂರಿನಲ್ಲಿ ಮ್ಯಾಜಿಕ್?
ಮಹಿಮಾ ಚಂದಕ್​ ಅವರ ಟ್ವೀಟ್
Follow us on

Uber : ಬೆಂಗಳೂರು! ಎಂದಾಕ್ಷಣ ಇತರೇ ಮಹಾನಗರಗಳಿಗಿಂತ ಖರ್ಚಿನಲ್ಲಿ ಇದು ಹೆಚ್ಚು ಎನ್ನುವ ಆರೋಪವಿದೆ. ಹೀಗಾಗಿ ಆಟೋ, ಕ್ಯಾಬ್​ ರೈಡ್​ನ (Cab ride) ಸುಲಿಗೆಯ ಬಗ್ಗೆಯಂತೂ ದಿನವೂ ಓದುತ್ತೀರಿ ಅನುಭವಿಸುತ್ತೀರಿ. ಆದರೆ ಇದೀಗ ವೈರಲ್ ಆಗಿರುವ ಪೋಸ್ಟ್​ ಮಾತ್ರ ಮಜಾ ಇದೆ. ಏಕೆಂದರೆ ಉಬರ್ ಆಟೋ ರೈಡ್​ವೊಂದರಲ್ಲಿ ಪ್ರಯಾಣಿಕರೊಬ್ಬರಿಗೆ ಕೇವಲ ರೂ 6 ಎಂದು ತೋರಿಸಿದೆ. ಈ ಘಟನೆಯನ್ನು ಓದಿದ ಜಾಲತಾಣಿಗರು ಏನಾದರೂ ತಪ್ಪು ತೋರಿಸಿದೆಯೇ? ಅಥವಾ ನಿಜವೇ? ಅಚ್ಚರಿ ಪಡುತ್ತಿದ್ದಾರೆ ಮತ್ತು ತಮಾಷೆಯನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ : Viral Video: ಅಟ್ಟಾವೇರ್; ಈ ತಟ್ಟೆಯಲ್ಲಿ ತಿನ್ನಿ ಅದರೊಂದಿಗೆ ಲೋಟ, ಚಮಚ, ಬಟ್ಟಲನ್ನೂ ತಿಂದುಬಿಡಿ

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮಹಿಮಾ ಚಂದಕ್​ ಎನ್ನುವವರು X (ಟ್ವಿಟ್ಟರ್) ನಲ್ಲಿ ಇದಕ್ಕೆ ಸಂಬಂಧಿಸಿದ ಸ್ಕ್ರೀನ್ ಶಾಟ್ ಪೋಸ್ಟ್ ಮಾಡಿದ್ದಾರೆ.  ಅದರಲ್ಲಿ ಪ್ರಯಾಣದ ವೆಚ್ಚ ಕೇವಲ ರೂ. 6 ಎಂದು ತೋರಿಸಿದೆ. ಅಂದರೆ ರೂ. 46 ರ ಬದಲಾಗಿ ಕೇವಲ ರೂ. 6 ಯಲ್ಲಿ ಪ್ರಯಾಣಿಸಿ ಎಂದು. ಇದು ಯಾರಿಗೂ ಅಚ್ಚರಿಯಾಗುವ ಸಂಗತಿಯೇ, ಅಷ್ಟೇ ಅಲ್ಲ ಏನಾದರೂ ವ್ಯತ್ಯಾಸವಾಗಿದೆಯೇ ಎಂದು ಅನುಮಾನಕ್ಕೂ ಇದು ಈಡುಮಾಡುವಂಥದ್ದೇ.

ಮಹಿಮಾ ಚಂದಕ್ ಟ್ವೀಟ್​ ಗಮನಿಸಿ


ಆ. 16ಕ್ಕೆ ಇದನ್ನು ಚಂದನಾ ಎನ್ನುವವರು ಟ್ವೀಟ್ ಮಾಡಿದ್ದಾರೆ. ಈತನಕ ಸುಮಾರು 40,000 ಜನರು ಇದನ್ನು ನೋಡಿದ್ದಾರೆ. 50 ಜನರು ರೀಟ್ವೀಟ್ ಮಾಡಿದ್ದು 300ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಇದರಲ್ಲಿ ಏನೋ ತಪ್ಪು ಉಂಟಾಗಿದೆ ಎಂದಿದ್ದಾರೆ ಒಬ್ಬರು. ಅಬ್ಬಾ ಇದು ಅನಿರೀಕ್ಷಿತವಾಗಿದೆ ಎಂದಿದ್ದಾರೆ ಮತ್ತೊಬ್ಬರು. ನನಗೆ ನಿನ್ನೆಯಷ್ಟೇ ಶೇ 35 ರಿಯಾಯ್ತಿಯಿಂದಾಗಿ ರೂ. 0 ತೋರಿಸಿತ್ತು. ಆದರೆ ಯಾವ ಡ್ರೈವರ್ ಕೂಡ ರೈಡ್​ ಸ್ವೀಕರಿಸಲಿಲ್ಲ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ಇಂಜೆಕ್ಷನ್​ ಕೊಟ್ಟರೂ ನಗುತ್ತವೆ ಈ ಮಕ್ಕಳು; ಹೈಫೈ ಡಾಕ್ಟರ್ ಮ್ಯಾಜಿಕ್

ನಾನೂ ಕೂಡ ಇಂಥದ್ದನ್ನು ಎರಡು ಸಲ ಅನುಭವಿಸಿದ್ದೀನಿ. ಲಾಟರಿ ಗೆದ್ದಂತೆ ಅನ್ನಿಸಿದೆ ಆಗೆಲ್ಲಾ ಎಂದಿದ್ದಾರೆ ಇನ್ನೊಬ್ಬರು. ಕೆಲ ತಿಂಗಳುಗಳ ಹಿಂದೆ ಮುಂಬೈ ಕಂಪೆನಿಯೊಂದರ ಸಿಇಒ ಅರ್ಧ ಕಿ.ಮೀ. ಆಟೋ ಪ್ರಯಾಣಕ್ಕೆ ರೂ. 100 ಬಿಲ್ ಮಾಡಿದ ಪ್ರಸಂಗ ಇಲ್ಲಿ ನೆನಪಾಗುತ್ತಿದೆ.

ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ