ಆಶಾ ಭೋಸ್ಲೆಯ ‘ಆಂಖೋ ಕೀ ಮಸ್ತಿ’ ಹಾಡಿದ ಗಿಲ್ಗಿಟ್ ಬಲ್ಟಿಸ್ತಾನ್​ನ ತರುಣಿ

Pakistan : ಬೆಟ್ಟದ ಹುಡುಗಿಯ ಈ ಕಂಠಮಾಧುರ್ಯಕ್ಕೆ ಮಿಲಿಯನ್​ಗಟ್ಟಲೆ ಜನರು ಫಿದಾ. ಮಾಶಾ ಅಲ್ಲಾಹ್​, ಅದ್ಭುತ! ಈಕೆ ಭಾರತೀಯ ಹಾಡನ್ನು ಹಾಡುತ್ತಿದ್ದಾಳೆ ಎಂದು ಅಚ್ಚರಿಪಟ್ಟಿದ್ದಾರೆ ಅನೇಕರು.

ಆಶಾ ಭೋಸ್ಲೆಯ ‘ಆಂಖೋ ಕೀ ಮಸ್ತಿ’ ಹಾಡಿದ ಗಿಲ್ಗಿಟ್ ಬಲ್ಟಿಸ್ತಾನ್​ನ ತರುಣಿ
ಗಿಲ್ಗಿಟ್​ ಬಲ್ತಿಸ್ತಾನ್​ನ ಯುವಗಾಯಕಿ
Updated By: ಶ್ರೀದೇವಿ ಕಳಸದ

Updated on: Feb 01, 2023 | 5:46 PM

Viral Video : ನಮ್ಮ ಬಾಲಿವುಡ್​ ಗೀತೆಗಳು ಜಗತ್ತಿನ ಎಲ್ಲ ಸಂಗೀತಪ್ರಿಯರಿಗೂ ಅಚ್ಚುಮೆಚ್ಚು. ಸಾಮಾಜಿಕ ಜಾಲತಾಣಗಳಲ್ಲಿ ವಿದೇಶಿಯರು ಹಾಡಿರುವ ಮತ್ತು ಹಾಡುತ್ತಿರುವ ರೀಲ್​ಗಳೂ ಇದಕ್ಕೆ ಸಾಕ್ಷಿ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಗಿಲ್ಗಿಟ್​ ಬಾಲ್ಟಿಸ್ತಾನ್​ನ ಈ ಯುವಗಾಯಕಿ ಆಶಾ ಭೋಸ್ಲೆಯವರು ಹಾಡಿದ ಆಂಖೋ ಕೀ ಮಸ್ತಿ ನೆಟ್ಟಿಗರ ಮನಸೂರೆಗೊಳ್ಳುತ್ತಿದೆ.

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

1.8 ಮಿಲಿಯನ್​ಗಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಗಿಲ್ಗಿಟ್​ ಎಂಬ ಇನ್ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ನೋಡಬಹುದಾಗಿದೆ. ಗುಂಗುರುಗೂದಲಿನ ಈ ತರುಣಿ ಭಾವಪೂರ್ಣವಾಗಿ ಹಾಡಿರುವ ಈ ಹಾಡು ಉಮ್ರಾವ್​ ಜಾನ್​ ಸಿನೆಮಾದ್ದು. ಈ ಸಿನೆಮಾ 1964ರಲ್ಲಿ ಬಿಡುಗಡೆಯಾಗಿತ್ತು. ಅನೇಕರು ಈ ಹಾಡನ್ನು ಕೇಳಿ ಪ್ರತಿಕ್ರಿಯಿಸಿದ್ಧಾರೆ.

ಇದನ್ನೂ ಓದಿ : ವೃದ್ಧರೊಬ್ಬರು ಕೋತಿಗೆ ರೊಟ್ಟಿ ಕೊಡಲು ಪ್ರಯತ್ನಿಸುತ್ತಿರುವ ಆಪ್ತವಾದ ವಿಡಿಯೋ ವೈರಲ್

ಬೆಟ್ಟದ ಹುಡುಗಿಯ ಈ ಗಾಯನ ಬಹಳ ಹಿತವಾಗಿದೆ ಎಂದಿದ್ದಾರೆ ಅನೇಕರು. ಸುರೀಲಿಯಾದ ಈ ಕಂಠಸಿರಿಯನ್ನು ಮತ್ತೆ ಮತ್ತೆ ಕೇಳಬೇಕು ಎನ್ನಿಸುತ್ತಿದೆ ಎಂದಿದ್ದಾರೆ ಮತ್ತೂ ಕೆಲವರು. ಸಂಗೀತ ಸ್ಪರ್ಧೆಯಲ್ಲಿ ಹಾಡಲು ಮುಂಬೈಗೆ ಬನ್ನಿ ಎಂದು ಕರೆದಿದ್ದಾರೆ ಒಬ್ಬರು. ನಮ್ಮ ಪಾಕಿಸ್ತಾನದ ಹೆಮ್ಮೆ ಎಂದು ಕೆಲವರು ಹೇಳಿದ್ದಾರೆ. ಯಾರಾದರೂ ಈಕೆಯ ವಿಳಾಸವನ್ನು ಹಂಚಿಕೊಳ್ಳಬಹುದೆ ಎಂದು ಒಬ್ಬರು ಕೇಳಿದ್ಧಾರೆ. ಇನ್ನೊಬ್ಬರು ವಿಳಾಸವನ್ನು ಹಂಚಿಕೊಂಡಿದ್ಧಾರೆ. ಆಹಾ ಗುಂಗುರು ಕೂದಲು ಮತ್ತು ಆಕೆಯ ಧ್ವನಿ ಎಂಥ ಚೆಂದ ಎಂದಿದ್ದಾರೆ ಅನೇಕರು.

ಇದನ್ನೂ ಓದಿ : 16 ದೋಸೆ ಪ್ಲೇಟ್​ ಒಂದೇ ಕೈಯಲ್ಲಿ; ವಿದ್ಯಾರ್ಥಿ ಭವನದ ಸರ್ವರ್ ಕೌಶಲಕ್ಕೆ ಆನಂದ ಮಹೀಂದ್ರಾ ಮೆಚ್ಚುಗೆ

ಮಾಶಾ ಅಲ್ಲಾಹ್​, ಅದ್ಭುತ! ಈಕೆ ಭಾರತೀಯ ಹಾಡನ್ನು ಹಾಡುತ್ತಿದ್ದಾಳೆ ಎಂದು ಕೆಲವರು ಹೇಳಿದ್ದಾರೆ. ಭಾರತ ಇಂಥ ಅನೇಕ ಪ್ರತಿಭಾವಂತರನ್ನು ಹೊಂದಿದೆ ಎಂದು ಒಬ್ಬರು ಹೇಳಿದ್ದಕ್ಕೆ 25 ಜನ ಮುಗಿಬಿದ್ದು, ಈಕೆ ಪಾಕಿಸ್ತಾನದವಳು ಎಂದಿದ್ದಾರೆ.

ಯಾವ ದೇಶವಾದರೇನು? ಈಕೆ ಮಿಲಿಯನ್​ಗಟ್ಟಲೆ ಜನರ ಮನಸ್ಸನ್ನು ಕದ್ದಿರುವುದು ಸಂಗೀತದಿಂದ. ನೀವೇನಂತೀರಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ