Viral Video: ಹೈದರಾಬಾದಿನಲ್ಲಿ ತೇಲಿಬಂದ ಈ ಪಾತ್ರೆಗಳಲ್ಲಿ ಬಿರಿಯಾನಿ ಇರಲು ಸಾಧ್ಯವೆ?

Biriyani Vessel : ಹೈದರಾಬಾದಿನಲ್ಲಿ ಬಿದ್ದ ಮಹಾಮಳೆಯಿಂದಾಗಿ ಬೀದಿಗಳೆಲ್ಲಾ ನೀರಿನಲ್ಲಿ ಮುಳುಗಿವೆ. ಡೆಗ್ಚಿ ಎಂದು ಕರೆಯುವ ಬಿರಿಯಾನಿಯ ಪಾತ್ರೆಗಳು ಬೀದಿಯಲ್ಲಿ ತೇಲಿಕೊಂಡು ಹೋಗುತ್ತಿರುವ ವಿಡಿಯೋ ಅನೇಕರ ಕುತೂಹಲಕ್ಕೆ ಕಾರಣವಾಗಿದೆ.

Viral Video: ಹೈದರಾಬಾದಿನಲ್ಲಿ ತೇಲಿಬಂದ ಈ ಪಾತ್ರೆಗಳಲ್ಲಿ ಬಿರಿಯಾನಿ ಇರಲು ಸಾಧ್ಯವೆ?
ತೇಲುವ ಬಿರಿಯಾನಿ ಪಾತ್ರೆಗಳು
Follow us
TV9 Web
| Updated By: ಶ್ರೀದೇವಿ ಕಳಸದ

Updated on: Aug 02, 2022 | 3:40 PM

ಹೈದರಾಬಾದ್ : ಹೈದರಾಬಾದ್ ಎಂದರೆ ನಿಜಾಮರ ಆಳ್ವಿಕೆಗೆ, ಕೆಲ ತಿಂಡಿಗಳಿಗೆ ಖ್ಯಾತಿ. ಅದರಲ್ಲೂ ಬಿರಿಯಾನಿ ಎಂದರೆ ಹೈದರಾಬಾದ್, ಹೈದರಾಬಾದ್ ಎಂದರೆ ಬಿರಿಯಾನಿ ಎಂಬಂಥ ಪದಗಳು ಹೊಂದಿಕೊಂಡೇ ಪ್ರಸಿದ್ಧಿಯಾಗಿರುವಂಥವು. ಪ್ರವಾಹದಿಂದ ಜನರು ಸ್ಥಳೀಯ ಆಹಾರ ಮಳಿಗೆಗಳಲ್ಲಿ ಆಶ್ರಯ ಪಡೆದರೆ ಖಾಲೀ ಪಾತ್ರೆಗಳು ದೋಣಿಯಂತೆ ಮನಬಂದತ್ತ ಬೀದಿನೀರಿನಲ್ಲಿ ತೇಲಿಕೊಂಡು ಹೋಗಿರುವ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆದಿದೆ. ಈ ತೇಲುವಿಕೆಯನ್ನು ಯಾರೂ ತಡೆಯುವ ಪ್ರಯತ್ನವನ್ನೇ ಮಾಡಿಲ್ಲ. ಬಹುಶಃ ಈ ಮಜಾದೃಶ್ಯವನ್ನು ನೋಡುವುದರಲ್ಲೇ ಮೈಮರೆತಿದ್ದರೋ ಅಥವಾ ಯಾರದೋ ಏನೋ ನಾವ್ಯಾಕೆ ಸಂಕಷ್ಟಕ್ಕೆ ಸಿಲುಕಿಕೊಳ್ಳುವುದು ಎಂಬ ಭಯವೋ! ಪಾತ್ರೆ ಕಳೆದುಕೊಂಡವರು ಅಳುತ್ತಿರುವವರೋ ನಗುತ್ತಿರುವವರೋ ಯಾರಿಗೆ ಗೊತ್ತು? ನೆಟ್ಟಿಗರಂತೂ ಮಳೆಯಲ್ಲಿ ಒಳಗೆ ಕುಳಿತು ಈ ದೃಶ್ಯವನ್ನು ನೋಡಿ ನಗುತ್ತಿರುವುದು ಖಾತ್ರಿ.

ಹೈದರಾಬಾದಿನಲ್ಲಿ ಬಿದ್ದ ಮಹಾಮಳೆಯಿಂದಾಗಿ ಬೀದಿಗಳೆಲ್ಲಾ ನೀರಿನಲ್ಲಿ ಮುಳುಗಿವೆ. ಡೆಗ್ಚಿ ಎಂದು ಕರೆಯುವ ಬಿರಿಯಾನಿಯ ಪಾತ್ರೆಗಳು ಬೀದಿಯಲ್ಲಿ ತೇಲಿಕೊಂಡು ಹೋಗುತ್ತಿರುವ ವಿಡಿಯೋ ಅನೇಕರ ಕುತೂಹಲಕ್ಕೆ ಕಾರಣವಾಗಿದೆ. ಈ ವಿಡಿಯೋ ಮಾಡಲು ಸಾಧ್ಯವಾಗಿರುವುದು ಹೈದರಾಬಾದಿನ ಶಾಸ್ತ್ರೀಪುರಂ ಬಳಿ ಇರುವ ಅದಿಬಾ ಹೋಟೆಲಿನೆದುರು. ತೇಲುವ ಡೆಗ್ಚಿಯನ್ನು ನೋಡಿದ ಯಾರಿಗೂ ಅರೆಕ್ಷಣ ನಗು ಬಾರದೆ ಇರದು.

ಆದರೆ ನಿಮ್ಮ ಮನಸ್ಸು ನೆನಪುಗಳಿಗೆ ಜಾರಿದಾಗ, ಕೆಲವರಿಗೆ ಈ ದೃಶ್ಯ ಬಾಲ್ಯದ ಆಟ, ಆಟಿಕೆಗಳ ತೇಲುವಿಕೆ ಮತ್ತು ಮಳೆಗಾಲವನ್ನು ಕಣ್ಮುಂದೆ ತರಬಹುದು. ಇನ್ನೂ ಕೆಲವರಿಗೆ, ನೆರೆಹಾವಳಿಗೆ ತುತ್ತಾಗಿ ಮನೆಯ ಪಾತ್ರೆಪಗಡಿಗಳು ನೀರಿನಲ್ಲಿ ತೇಲಿಹೋಗುವಾಗ ಅಸಹಾಯಕರಾಗಿ ನಿಂತ ಕ್ಷಣಗಳು ಒತ್ತರಿಸಿ ದುಃಖವನ್ನೂ ತರಬಹುದು. ಇನ್ನೂ ಹಲವರಿಗೆ ಮಳೆಗಾಲದಲ್ಲಿ ಹೈದರಾಬಾದಿನಲ್ಲಿ ಬಿರಿಯಾನಿ ತಿಂದ ನೆನಪು ಉಕ್ಕುತ್ತಿರಬಹುದು.

ಯಾವ ಹೋಟೆಲಿನ ಡೆಗ್ಚಿಯೋ? ಒಡಲಲ್ಲಿ ಬಿರಿಯಾನಿ ಇತ್ತೋ ಎಂಬ ಪ್ರಶ್ನೆಗೆ ನಿಮ್ಮಲ್ಲೇ ಉತ್ತರವಿದೆ.