Viral Video : ಅಮ್ಮಾ ಟೆನ್ಷನ್​ ಆಗ್ತಿದೆ! ಈ ಜಗತ್ತಿನಿಂದಲೇ ನಾನು ಹೊರಟು ಹೋಗಬೇಕು

Homework : ಹೋಮ್​ವರ್ಕ್ ಹೋಮ್​ವರ್ಕ್​​ ಹೋಮ್​ವರ್ಕ್​! ಕಂಗೆಟ್ಟ ಮಗು ತನ್ನ ಅಮ್ಮನಿಗೆ ಏನೆಲ್ಲ ಹೇಳಿದೆ. ಓದಿ, ನೋಡಿ.

Viral Video : ಅಮ್ಮಾ ಟೆನ್ಷನ್​ ಆಗ್ತಿದೆ! ಈ ಜಗತ್ತಿನಿಂದಲೇ ನಾನು ಹೊರಟು ಹೋಗಬೇಕು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 02, 2022 | 1:26 PM

Viral Video: ಯಾರಿಗಿಷ್ಟರೀ ಹೋಮ್​ ವರ್ಕ್ ಮಾಡೋದು? ಈ ಮಗುವೂ ತನಗೆ ಹೋಮ್​ವರ್ಕ್​ ಮಾಡಲು ಮನಸಿಲ್ಲ ಎನ್ನುವುದನ್ನು ವ್ಯಕ್ತಪಡಿಸಿದ ರೀತಿ ಮೊದಲಿಗೆ ನಗು ತರಿಸುತ್ತದೆಯಾದರೂ ಕ್ರಮೇಣ ಗಂಭೀರವಾಗಿ ಯೋಚಿಸುವಂತೆ ಮಾಡುತ್ತದೆ. ಈ ವಿಡಿಯೋ ಈಗ ವೈರಲ್ ಆಗಿದೆ. ಹೋಮ್​ವರ್ಕ್​ನಿಂದ ಕಂಗಾಲಾದ ಮಗು, ನನಗೆ ಈ ಜಗತ್ತಿನಿಂದಲೇ ಬಿಡುಗಡೆ ಬೇಕು ಎಂದು ತನ್ನ ಅಮ್ಮನೊಂದಿಗೆ ಹೇಳಿದೆ. ಮಗು ಹೀಗೆ ಎಂದಾದರೂ ಮಾತನಾಡಿದ್ದು ಕೇಳಿದ್ದೀರಾ? ಮೊದಲು ಹಿಂದಿ ನೋಟ್​ಬುಕ್​ ಎದುರಿಗಿಟ್ಟುಕೊಂಡ ಈ ಮಗು ಪರಿಪರಿಯಾಗಿ ಹೇಳಿದೆ, ತನಗೆ ಹೋಮ್​ವರ್ಕ್ ಮಾಡಲು ಇಷ್ಟವಿಲ್ಲವೆಂದು. ಕೊನೆಗೆ ರೋಸಿಹೋಗಿ, ‘ಅಮ್ಮಾ ನನಗೆ ಟೆನ್ಶನ್ ಆಗ್ತಿದೆ. ನಾನ್ಯಾಕೆ ಈ ಜಗತ್ತಿನಲ್ಲಿದ್ದೇನೆ? ಈ ಜಗತ್ತಿನಿಂದಲೇ ನಾನು ಹೊರಟು ಹೋಗಬೇಕು, ಹೊರಟು ಹೋಗಬೇಕು’ ಪೆನ್ಸಿಲ್ ಕುಟ್ಟುತ್ತಾ ಹೇಳಿದೆ. ಯಾಕೆ ಹೋಗ್ತಿದ್ದೀಯಾ ಅಂತ ಅಮ್ಮ ಪ್ರಶ್ನಿಸಿದ್ದಕ್ಕೆ, ‘ನನಗೆ ಯಾಕೋ ಈ ಜಗತ್ತಿನಲ್ಲಿರಲು ಮನಸ್ಸಾಗುತ್ತಿಲ್ಲ ಏಕೆಂದರೆ ನೀ ಬಹಳ ಅಸಹ್ಯವಾಗಿ ಆಡುತ್ತಿದ್ದೀಯಾ’ ಎಂದಿದೆ. ಇದನ್ನು ಕೇಳಿದ ಮಗುವಿನ ಅಮ್ಮ ಜೋರಾಗಿ ನಕ್ಕಿದ್ದಾಳೆ.

ಈ ವಿಡಿಯೋ ಇನ್​ಸ್ಟಾಗ್ರಾಂನ ಎಮೊಬಾಯಿಸ್ ಇಂಡಿಯಾ ಪುಟದಲ್ಲಿ (Monday motivation) ಪ್ರಕಟವಾಗಿದ್ದು, ‘ಹೋಮ್​ವರ್ಕ್​ ಮುಗಿಸು ಎಂದು ಅಮ್ಮ ಹೇಳಿದಾಗ ಏನಾಗುತ್ತದೆ ನೋಡಿ’ ಎಂಬ ಸಾಲನ್ನು ಉಲ್ಲೇಖಿಸಿದೆ. ವೈರಲ್ ಆಗಿರುವ ಈ ವಿಡಿಯೋಗೆ ನಾನಾಥರದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇಂಥ ಚಿಕ್ಕವಯಸ್ಸಿನಲ್ಲಿಯೇ ಮಗು ತನ್ನ ಅಸ್ತಿತ್ವದ ಬಗ್ಗೆ ಯೋಚಿಸಲಾರಂಭಿಸಿದೆ. ಇದನ್ನೆಲ್ಲ ಹೇಗೆ ಎಲ್ಲಿಂದ ಕಲಿತಿದೆ? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಾ ಕೂಡ ಚಿಕ್ಕಂದಿನಲ್ಲಿ ಈ ಮಗುವಿನಂತೆಯೇ ವರ್ತಿಸುತ್ತಿದ್ದೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ಧಾರೆ. ಮತ್ತೊಬ್ಬರು, ಮೂಡ್​ ಬೇಟಾ ಮೂಡ್! ನಾ ಕೂಡ ಈ ಜಗತ್ತಿನಿಂದ ಹೊರಹೋಗಲು ಬಯಸುತ್ತೇನೆ ಎಂದಿದ್ದಾರೆ. ಅಮ್ಮಾ ನನ್ನನ್ನು ಮತ್ತೊಮ್ಮೆ ನಿನ್ನೊಳಗಿರಿಸಿಕೋ ಎಂದು ಇನ್ನೂ ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ
Image
Poetry: ಅವಿತಕವಿತೆ; ಮನುಷ್ಯ ಮಾತ್ರ ತನ್ನ ಸಹಜೀವಿಯನ್ನು ಮಾತಿನ ಮೂಲಕವೇ ಬಲಿ ಹಾಕಬಲ್ಲ
Image
Poetry : ಅವಿತಕವಿತೆ ; ತೀರಾ ಖಾಸಾ ಗೆಳೆಯ, ಗೆಳತಿಗೂ ಹೇಳಲು ಬಾರದವು…
Image
Poetry : ಅವಿತಕವಿತೆ ; ಗೀರು ಕಾಣದಂತೆ ಅವನು ಒಡಕು ಕಾಣದಂತೆ ಅವಳು
Image
Poetry : ಅವಿತಕವಿತೆ ; ಒದ್ದವನ ಕಾಲ ನಮಿಸುವೆ ಬಿದ್ದವನ ಎತ್ತಿ ನಿಲಿಸುವೆ

ನೀವೇನು ಯೋಚಿಸುತ್ತಿದ್ದೀರಿ?

Published On - 1:20 pm, Tue, 2 August 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ