Viral Video: ‘ಕಾಲಾ ಚಷ್ಮಾ’ ಹಾಡಿಗೆ ವಿದೇಶಿಗರ ಸಖತ್ ಸ್ಟೆಪ್, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ

| Updated By: Rakesh Nayak Manchi

Updated on: Jun 12, 2022 | 5:10 PM

ಕಾಲಾ ಚಷ್ಮಾ ಬಾಲಿವುಡ್ ಹಾಡು ವಿದೇಶಿಗರಿಗೂ ಅಚ್ಚುಮೆಚ್ಚು. ಈ ಹಾಡಿಗೆ ವಿದೇಶದ ಮದುವೆ ಮನೆಯೊಂದರಲ್ಲಿ ಯುವಕರು ಹಾಕಿದ ಸಖತ್ ಸ್ಟೆಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋ 8.1 ಮಿಲಿಯನ್ ವೀಕ್ಷಣಗಳನ್ನು ಪಡೆದುಕೊಂಡಿದೆ.

Viral Video: ಕಾಲಾ ಚಷ್ಮಾ ಹಾಡಿಗೆ ವಿದೇಶಿಗರ ಸಖತ್ ಸ್ಟೆಪ್, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ
ಕಾಲಾ ಚಷ್ಮಾ ಹಾಡಿಗೆ ಯುವಕರ ಡಾನ್ಸ್
Image Credit source: Instagram
Follow us on

ಪಂಚದಾದ್ಯಂತದ ಜನರು ಭಾರತದ ಚಲನಚಿತ್ರಗಳ ಹಾಡನ್ನು ಆನಂದಿಸುವುದನ್ನು ನೋಡುವುದು ಹೆಮ್ಮೆಯ ಸಂಗತಿ. ಅನೇಕ ವಿದೇಶಿ ನೃತ್ಯಗಾರರು ಟ್ರೆಂಡಿಂಗ್ ಬಾಲಿವುಡ್ ಹಾಡುಗಳಿಗೆ ಡಾನ್ಸ್​ ಮಾಡುವುದು ಸಾಮಾನ್ಯವಾಗಿದೆ. ವಿದೇಶಿಗರೂ ಇಷ್ಟಪಡುವ ಭಾರತೀಯ ಸಿನಿಮಾದ ಹಾಡುಗಳ ಪೈಕಿ ‘ಕಾಲಾ ಚಷ್ಮಾ’ ಕೂಡ ಒಂದು. ಭಾರತೀಯರಿಗೆ ಮಾತ್ರವಲ್ಲ ವಿದೇಶಿಗರಿಗೂ ಕಾಲಾ ಚಷ್ಮಾ ಹಾಡು ಸಖತ್ ಇಷ್ಟ. ಈ ಹಾಡು ನೃತ್ಯ ಮಾಡುವಂತೆ ಎಲ್ಲರನ್ನೂ ಹುರಿದುಂಬಿಸುತ್ತದೆ. ಈ ಕಾಲಾ ಚಷ್ಮಾ (Kala Chashma) ಹಾಡಿಗೆ ಮದುವೆ ಮನೆಯಲ್ಲಿ ಯುವಕರು ಹಾಕಿದ ಸಖತ್ ಸ್ಟೆಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ಸ್ಟಾಗ್ರಾಮ್ ಬಳಕೆದಾರ ನಾರ್ವೆಯ ಯಾಸಿನ್ ಟ್ಯಾಟ್ಬಿ ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಾಲಾ ಚಷ್ಮಾ ಹಾಡಿ(Song)ಗೆ ಮಾಡಿದ ಡಾನ್ಸ್ (Dance)​ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಈ ಹಾಡಿನಲ್ಲಿ ಕತ್ರಿನಾ ಕೈಫ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯಿಸಿದ್ದಾರೆ.

ಇದನ್ನೂ ಓದಿ: Viral Video: “ಹ್ಯಾಪಿ ಬರ್ತ್ ​ಡೇ ಅಖಿಲಾ”, ಆನೆಯ ಹುಟ್ಟುಹಬ್ಬ ಆಚರಿಸಿದ ವಿಡಿಯೋ ವೈರಲ್

ಯಾಸಿನ್ ಟ್ಯಾಟ್ಬಿ ಅವರು ತಮ್ಮ ತಂಡದ ‘ಕ್ವಿಕ್ ಸ್ಟೈಲ್’ ನ ಇತರ ನೃತ್ಯಗಾರರೊಂದಿಗೆ ನೃತ್ಯ ಮಾಡಿದ್ದಾರೆ. ವರ ಸುಲೇಮಾನ್ ಮಲಿಕ್ ಕೂಡ ತಂಡದಲ್ಲಿ ಡಾನ್ಸ್ ಮಾಡುತ್ತಾರೆ. ಯುವಕರ ತಂಡದ ಡಾನ್ಸ್​ ನೋಡುತ್ತಿದ್ದ ವೀಕ್ಷಕರು ಅವರನ್ನು ಹುರಿದುಂಬಿಸಿದ್ದು, ಮದುವೆಗೆ ಬಂದ ಅತಿಥಿಗಳು ಮೊಬೈಲ್​ ಕ್ಯಾಮಾರದ ಮೂಲಕ ವಿಡಿಯೋ ಮಾಡಿದ್ದಾರೆ. ಇದನ್ನೂ ಓದಿ: Viral Video: ಟಿವಿ ನೋಡುತ್ತಾ ಡ್ರಮ್ಮಿಂಗ್ ಅಭ್ಯಾಸ ಮಾಡಿದ 3ರ ಬಾಲಕ, ಆತನ ಮುಖಭಾವಕ್ಕೆ ನೆಟ್ಟಿಗರು ಫಿದಾ

ನೃತ್ಯಗಾರರು ಸೇರಿದಂತೆ ಎಲ್ಲರೂ ಕಾಲಾ ಚಷ್ಮಾದ ವೈಬ್ ಅನ್ನು ಇಷ್ಟಪಟ್ಟಿದ್ದಾರೆ. ದೇಸಿ ನೆಟಿಜನ್‌ಗಳು ಹುಡುಗರ ಚೈತನ್ಯಭರಿತ ನೃತ್ಯ ನೋಡಿ ಅಚ್ಚರಿಗೊಂಡಿದ್ದು, ಅವರ ಬಗ್ಗೆ ಮೆಚ್ಚುಗೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿ 8.1 ಮಿಲಿಯನ್ ವೀಕ್ಷಣೆಗಳು ಮತ್ತು 738k ಮೆಚ್ಚುಗೆಗಳನ್ನು ಪಡೆದುಕೊಂಡಿದೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:09 pm, Sun, 12 June 22