Viral Video: ಇಲ್ಲಿ ನೋಡಿ ದೋಸೆಯಲ್ಲೂ ಬೆಕ್ಕು ಮಾಡಬಹುದು, ಸ್ಟ್ರೀಟ್ ಫುಡ್ ವ್ಯಾಪಾರಿಯ ಕೈಚಳಕಕ್ಕೆ ಮನಸೋತ ನೆಟ್ಟಿಗರು
ಸ್ಟ್ರೀಟ್ ಫುಡ್ ವ್ಯಾಪಾರಿಯೊಬ್ಬರು ಕಲಾತ್ಮಕವಾಗಿ ದೋಸೆ ತಯಾರಿಸುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇವರ ಈ ಕಲೆಗೆ ಜನರು ಮೆಚ್ಚುಗೆಯನ್ನು ಕೂಡಾ ಸೂಚಿಸಿದ್ದಾರೆ.
ಸ್ಟ್ರೀಟ್ ಫುಡ್ ವ್ಯಾಪಾರಿಯೊಬ್ಬರು ಕಲಾತ್ಮಕವಾಗಿ ದೋಸೆ ತಯಾರಿಸುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇವರ ಈ ಕಲೆಗೆ ಜನರು ಮೆಚ್ಚುಗೆಯನ್ನು ಕೂಡಾ ಸೂಚಿಸಿದ್ದಾರೆ. ಹೆಚ್ಚಿನವರು ಸಂಜೆಯ ಹೊತ್ತಿಗೆ ಸ್ಟ್ರೀಟ್ ಫುಡ್ಗಳನ್ನು ತಿನ್ನಲು ಇಷ್ಟಪಡುತ್ತಾರೆ. ಈ ಸ್ಟ್ರೀಟ್ ಫುಡ್ ಅಭಿಮಾನಿಗಳು ಆ ಖಾದ್ಯಗಳ ರುಚಿ ಮಾತ್ರವಲ್ಲದೆ ಅದನ್ನು ತಯಾರಿಸುತ್ತಾರೆ ಎಂಬುದನ್ನು ಕೂಡಾ ನೋಡಲು ಇಷ್ಟಡುತ್ತಾರೆ. ಅನೇಕ ಆಹಾರಗಳು ಹಾಗೂ ಅದನ್ನು ತಯಾರಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತದೆ. ಇಲ್ಲಿ ಅದನ್ನು ತಯಾರಿಸುವ ಜನರು ವಿಭಿನ್ನವಾಗಿ ಜನರನ್ನು ಆಕರ್ಷಿಸುವ ರೀತಿಯಲ್ಲಿ ತಯಾರಿಸುತ್ತಾರೆ.
ಆಹಾರ ಪ್ರಿಯರನ್ನು ಆಕರ್ಷಿಸಲೆಂದೆ ವ್ಯಾಪಾರಿಗಳು ವಿವಿಧ ಬಗೆಗಳಲ್ಲಿ ಆಹಾರಗಳನ್ನು ತಯಾರಿಸುತ್ತಾರೆ. ಇದೇ ರೀತಿಯಲ್ಲಿ ದೋಸೆಯನ್ನು ಕಲಾತ್ಮಕವಾಗಿ ತಯಾರಿಸುವ ಬೀದಿ ಬದಿ ವ್ಯಾಪಾರಿಯೊಬ್ಬರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇವರು ತಮ್ಮ ಕೈಚಲಕದಿಂದ ದೋಸೆಯನ್ನು ಕಲಾತ್ಮಕವಾಗಿ ತಯಾರಿಸುವ ಬಗೆ ಆಹಾರ ಪ್ರೇಮಿಗಳನ್ನು ಆಕರ್ಷಿಸುತ್ತಿದೆ.
I believe India’s street food vendors are the most innovative, resilient and impactful food influencers. More than any gourmet chef. Been wondering how to work with them to influence a nutritive food system.
Please applaud this guy’s artistic skills.
#StreetFood #Arakunomics pic.twitter.com/h7Bvrs5TTJ
— Manoj Kumar (@manoj_naandi) March 3, 2023
ಕಲಾತಕವಾಗಿ ದೋಸೆ ತಯಾರಿಸುವ ವ್ಯಾಪಾರಿಯೊಬ್ಬರ ವೀಡಿಯೊವನ್ನು ನಂದಿ ಫೌಂಡೆಷನ್‌ನ ಸಿಇಒ ಮನೋಜ್ ಕುಮಾರ್ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಎರಡು ನಿಮಿಷಗಳ ಈ ವಿಡಿಯೊ ಕ್ಲಿಪ್‌ನಲ್ಲಿ ಬೀದಿ ಬದಿ ಆಹಾರ ಮಾರಾಟಗಾರನು ತವಾದ ಮೇಲೆ ದೋಸೆ ಹಿಟ್ಟನ್ನು ವೃತ್ತಾಕಾರವಾಗಿ ಹರಡಿ ಪ್ರಾಣಿಗಳ ಆಕೃತಿಯನ್ನು ಮಾಡಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: Viral Video: ಯಾರಿಗೆ ಹೇಳೋಣ ಕುಳ್ಳಿಯರ ಪ್ರಾಬ್ಲಮ್, ನಮ್ಮ ಗೋಳು ಕೇಳೋರು ಯಾರೂ ಇಲ್ವಾ?
ಹೀಗೆ ಅವನು ಸ್ವಲ್ಪ ಸ್ವಲ್ಪವೇ ಹಿಟ್ಟನ್ನು ಹರಡಿ ಒಂದು ಬೆಕ್ಕಿನ ಆಕೃತಿಯನ್ನು ದೋಸೆಯಲ್ಲಿ ಮೂಡಿಸುತ್ತಾನೆ. ನಂತರ ಬೆಕ್ಕಿಗೆ ಕಣ್ಣು, ಬಾಯಿ, ಮೂಗನ್ನು ಮಾಡಲು ಹೆಚ್ಚುವರಿ ಹಿಟ್ಟನ್ನು ತವಾದಲ್ಲಿ ಸುರಿಯುತ್ತಾನೆ. ದೋಸೆ ಕಾದ ಬಳಿಕ ಅದನ್ನು ತೆಂಗಿನ ಕಾಯಿ ಚಟ್ನಿಯೊಂದಿಗೆ ಬಡಿಸುತ್ತಾನೆ. ಈ ವ್ಯಾಪಾರಿಯ ಚಳಕಕ್ಕೆ ಮನಸೋಲದವರೇ ಇಲ್ಲ. ಅಷ್ಟೊಂದು ಅದ್ಭುತವಾಗಿ ಕಲಾತ್ಮಕ ರೀತಿಯಲ್ಲಿ ದೋಸೆ ತಯಾರಿಸಿ ಗ್ರಾಹಕರಿಗೆ ಉಣಬಡಿಸುತ್ತಾರೆ.
ಈ ವಿಡಿಯೊ ಟ್ವೀಟರ್‌ನಲ್ಲಿ ವೈರಲ್ ಆಗಿರುವ ನಂತರ ಇದು ಇವರೆಗೆ 18,000 ವೀಕ್ಷಣೆಗಳನ್ನು ಮತ್ತು 310 ಲೈಕ್ಸ್ಗಳನ್ನು ಪಡೆದುಕೊಂಡಿದೆ. ಈ ವೀಡಿಯೊವನ್ನು ನೋಡಿ ವ್ಯಾಪಾರಿಯ ಕೈಚಳಕ್ಕೆ ಒಬ್ಬ ವ್ಯಕ್ತಿ ಅದ್ಭುತವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ತುಂಬಾ ಸುಂದರವಾಗಿದೆ ಎಂದು ಹೇಳಿದ್ದಾರೆ.
Published On - 6:13 pm, Sat, 4 March 23