ಬೆಳಗ್ಗಿನ ತಿಂಡಿ ಎಂದಾಕ್ಷಣ ಹೆಚ್ಚಿನವರಿಗೆ ನೆನಪಾಗುವುದು ಇಡ್ಲಿ ಸಾಂಬಾರ್. ಈ ಇಡ್ಲಿ ಕಡಿಮೆ ಬೆಲೆಯ ಜೊತೆಗೆ ರುಚಿಕರ ಉಪಹಾರವು ಹೌದು. ಮನೆಯಲ್ಲಿ ತಿನ್ನುವ ಹೊರತಾಗಿ ಹೋಟೆಲ್ಗಳಲ್ಲಿ 30ರಿಂದ ಹಿಡಿದು ಹೆಚ್ಚೆಂದರೆ 50ರೂಪಾಯಿಯ ಒಳಗಡೆ ಬಿಸಿಬಿಸಿಯಾದ ಇಡ್ಲಿಯನ್ನು ಸವಿಯಬಹುದು. ಆದರೆ ಚೆನ್ನೈನ ಹೋಟೆಲ್ ಒಂದರಲ್ಲಿ ಒಂದು ಪ್ಲೇಟ್ ಇಡ್ಲಿಗೆ ಬರೋಬ್ಬರಿ 500ರೂಪಾಯಿಯನ್ನು ಪಾವತಿಸಬೇಕು. ಅಷ್ಟಕ್ಕೂ ಒಂದು ಪ್ಲೇಟ್ ಇಡ್ಲಿ ಯಾಕಿಷ್ಟು ದುಬಾರಿ? ಏನಿದರ ವಿಶೇಷತೆ? ಇಲ್ಲಿ ತಿಳಿದುಕೊಳ್ಳಿ.
ಈ ಇಡ್ಲಿಯನ್ನು ಚೆನ್ನೈನ ಅಡ್ಯಾರ್ ಆನಂದ ಭವನ ಹೋಟೆಲ್‌ನಲ್ಲಿ ಲಭ್ಯವಿದೆ. ಈ ಇಡ್ಲಿ ದುಬಾರಿಯಾಗಲು ಕಾರಣ ಅದರ ತಯಾರಿಕೆಯಲ್ಲಿ ಬಳಸುವ ಪದಾರ್ಥಗಳು. ಬಾದಾಮಿ, ಬೆರಿಹಣ್ಣುಗಳು, ಆಲಿವ್ ಎಣ್ಣೆ ಮತ್ತು ಇತರ ಅನೇಕ ಪದಾರ್ಥಗಳನ್ನು ಬಳಸಲಾಗುತ್ತದೆ. ಲವಂಗ, ದಾಲ್ಚಿನ್ನಿ, ಮಶ್ರೂಮ್, ಬ್ರೆಜಿಲ್ ನಟ್, ಒಮೆಗಾ 3 – ಅಗಸೆಬೀಜ, ಶುಂಠಿ ಪುಡಿ, ಅಶ್ವಗಂಧ ಸಾರ, 24 ಗಂಟೆಗಳ ಕಾಲ ನೆನೆಸಿದ ಬಾದಾಮಿ, ವಾಲ್್ನಟ್ಸ್, ಪಿಸ್ತಾ, ಗೋಡಂಬಿ, ನೀಲಿ ಹಣ್ಣುಗಳು, ಆಲಿವ್ ಎಣ್ಣೆ, ಕೊತ್ತಂಬರಿ, ಆವಕಾಡೊ, ಕೇಸರಿ ಇತ್ಯಾದಿ ಪೋಷಕಾಂಶಗಳಿಂದ ಕೂಡಿರುವ ಪದಾರ್ಥಗಳಿಂದ ತಯಾರಿಸಲಾಗುತ್ತದೆ.
ಮಧುಮೇಹಿಗಳು ಕೂಡ ಈ ಇಡ್ಲಿಯನ್ನು ಹಿಂಜರಿಕೆಯಿಲ್ಲದೆ ಸವಿಯಬಹುದು. ಇಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಲಾಗುತ್ತದೆ. ಇದರಲ್ಲಿ ಬಳಸುವ ಆಲಿವ್ ಎಣ್ಣೆಯು ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಉಪಯುಕ್ತವಾಗಿದೆ. ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ ಬ್ಲೂಬೆರ್ರಿಗಳನ್ನು ಸಹ ಇದರಲ್ಲಿ ಬಳಸಲಾಗುತ್ತದೆ.
ಇದನ್ನೂ ಓದಿ: ಗರ್ಲ್‌ಫ್ರೆಂಡ್‌ಗಾಗಿ ಕಂತೆ ಕಂತೆ ನೋಟಿನ ಕಾರ್ಪೆಟ್ ಹಾಸಿದ ವ್ಯಕ್ತಿ, ಎಲ್ಲವೂ ದುಡ್ಡಿನ ಮಹಿಮೆ
@foodtastingmission ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಶೇಷ ಇಡ್ಲಿಯ ವಿಡಿಯೋ ಹಂಚಿಕೊಳ್ಳಲಾಗಿದೆ. ಜೂನ್ 21ರಂದು ಹಂಚಿಕೊಂಡಿರುವ ಈ ವಿಡಿಯೋ ಇಲ್ಲಿಯವರೆಗೆ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:24 pm, Thu, 27 June 24