Viral Video : ಯಾವ ಕಲೆಯೂ ಸರಾಗವಾಗಿ ಬಾರದು. ಸಾಕಷ್ಟು ಪರಿಶ್ರಮ ತಾಳ್ಮೆ ನಿತ್ಯ ಅಭ್ಯಾಸ ಬೇಕೇಬೇಕು. ಚೀನಾದಲ್ಲಿ ಈ ಹುಡುಗಿ ಎಷ್ಟೊಂದು ನಿರಾಯಾಸವಾಗಿ ತಲೆಕೆಳಗೆ ಮಾಡಿಕೊಂಡು ಕತ್ತರಿಗೈಯಲ್ಲಿ ಪಿಯಾನೋ ನುಡಿಸುತ್ತಿದ್ದಾಳೆ ನೋಡಿ ಮತ್ತು ಕೇಳಿ. ನೆಟ್ಟಿಗರಂತೂ ದಂಗು ಬಡಿದು ನೋಡುತ್ತಿದ್ದಾರೆ ಈ ಅದ್ಭುತವಾದ ವಿಡಿಯೋ ಅನ್ನು. ಇವಳ ಅಸಾಧಾರಣ ಪ್ರತಿಭೆ ಮತ್ತು ಕೌಶಲಕ್ಕೆ ಕ್ಯಾ ಬಾತ್ ಹೈ ಎನ್ನುತ್ತಿದ್ದಾರೆ. ಈಕೆಯ ಹೆಸರು ಶೆನ್. ಹೀಗೇ ಒಂದು ದಿನ ಪಿಯಾನೋ ಅಭ್ಯಾಸ ಮಾಡುವಾಗ ಬೇಸರ ಬರುತ್ತಿತ್ತು. ಅದನ್ನು ಒಂದು ಮೋಜಿನಂತೆ ಪರಿವರ್ತಿಸಿಕೊಳ್ಳಲು ಈ ಹಾದಿ ಕಂಡುಕೊಂಡೆ ಎಂದು ನೌ ದಿಸ್ ನ್ಯೂಸ್ಗೆ ತಿಳಿಸಿದ್ದಾಳೆ ಈ ಹುಡುಗಿ.
A talented young girl in Xi’an, China, can play the piano while lying upside down. Footage shows the girl, whose name is Shen, playing the song ‘Doll and Bear Dancing.’
ಇದನ್ನೂ ಓದಿShen says she initially felt like practicing the piano was boring, so she found a more fun way to do it. ? pic.twitter.com/Q34fQz6uDD
— NowThis (@nowthisnews) October 5, 2022
ಈ ವಿಡಿಯೋದಲ್ಲಿ ನುಡಿಸಿದ ಹಾಡು ‘ಡಾಲ್ ಅಂಡ್ ಬೇರ್ ಡ್ಯಾನ್ಸಿಂಗ್’. ಈ ವಿಡಿಯೋ ಈತನಕ ಸುಮಾರು 30,000 ವೀಕ್ಷಕರನ್ನು ತಲುಪಿದೆ. 27 ಕ್ಕೂ ಹೆಚ್ಚು ರೀಟ್ವೀಟ್ಗೆ ಒಳಗಾಗಿದೆ. ‘ಬಡ್ಡಿಂಗ್ ರಾಕ್‌ಸ್ಟಾರ್’ ಎಂದು ನೆಟ್ಟಿಗರೊಬ್ಬರು ಕರೆದಿದ್ದಾರೆ. ಅದ್ಭುತ ಮೆದುಳು ಈಕೆಯದು ಎಂದಿದ್ದಾರೆ ಮತ್ತೊಬ್ಬರು.
ಕಲೆ ಎನ್ನುವುದು ಸ್ವಂತ ಆಸಕ್ತಿಯಿಂದ ಹುಟ್ಟುವಂಥದ್ದು. ಯಾರ ಒತ್ತಾಯಕ್ಕೂ ಈ ಸೃಜನಶೀಲ ಕಲೆಗಳು ಒಲಿಯಲಾರವು. ಎದ್ದರೂ ಬಿದ್ದರೂ ಬೇಸರವಾದರೂ ಖುಷಿಯಾದರೂ ಕಲೆಯೇ ಅಂತಿಮ ಎಂದು ಅದರೊಂದಿಗೆ ಒಂದಾದಾಗ ಮಾತ್ರ ಸಾಧನೆ ಸಾಧ್ಯ.
ಈಗ ಈ ಕಲಾವಿದೆಯನ್ನೇ ಗಮನಿಸಿ, ತನಗೆ ಪ್ರ್ಯಾಕ್ಟೀಸ್ ಮಾಡುವುದು ಬೇಸರವೆಂದು ಹೀಗೊಂದು ಉಪಾಯ ಕಂಡುಕೊಂಡು ವಿಡಿಯೋ ಮಾಡಿ ಹಂಚಿಕೊಂಡು ಅಷ್ಟೇ ಚೈತನ್ಯ ಕಂಡುಕೊಂಡಳು. ನಮ್ಮ ಖುಷಿಯ ಮೂಲ ನಮ್ಮಲ್ಲೇ ಇರುತ್ತದೆ ಎನ್ನುವುದಕ್ಕೆ ಈ ವಿಡಿಯೋ ಮಾದರಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ