Video Viral: ವಾಷಿಂಗ್​ ಮೆಷಿನ್​​ ಒಳಗೆ ಹೆಡೆಯೆತ್ತಿ ನಿಂತ ನಾಗರಹಾವು

ವಾಷಿಂಗ್​ ಮೆಷಿನ್​ ಒಳಗೆ ಬಟ್ಟೆ ಹಾಕು ಮುಂದಾದ ಮಹಿಳೆಗೆ ಐದು ಅಡಿ ಎತ್ತರದ ನಾಗರಹಾವು ಹೆಡೆಯೆತ್ತಿ ನಿಂತಿರುವುದು ಕಂಡುಬಂದಿದೆ. ಬಳಿಕ ಮಹಿಳೆ ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಉರಗ ತಜ್ಞರ ತಂಡ ಸ್ಥಳಕ್ಕೆ ತಲುಪಿದ್ದು, ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

Video Viral: ವಾಷಿಂಗ್​ ಮೆಷಿನ್​​ ಒಳಗೆ ಹೆಡೆಯೆತ್ತಿ ನಿಂತ ನಾಗರಹಾವು
ವಾಷಿಂಗ್​ ಮೆಷಿನ್​​ ಒಳಗೆ ಹೆಡೆಯೆತ್ತಿ ನಿಂತ ನಾಗರಹಾವು

Updated on: Aug 21, 2024 | 4:48 PM

ರಾಜಸ್ಥಾನ: ವಾಷಿಂಗ್​ ಮೆಷಿನ್​ನಲ್ಲಿ ನಾಗರಹಾವು ಪತ್ತೆಯಾಗಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ಮಹಿಳೆ ವಾಷಿಂಗ್​ ಮೆಷಿನ್​ನಲ್ಲಿ ಒಳಗೆ ಬಟ್ಟೆ ಹಾಕಲು ಮುಂದಾದಾಗ ಐದು ಅಡಿ ಎತ್ತರದ ನಾಗರಹಾವು ಹೆಡೆಯೆತ್ತಿ ನಿಂತಿದೆ. ಗಾಬರಿಗೊಂಡ ಮಹಿಳೆ
ಕಿರುಚಾಡಿದ್ದು, ಬಳಿಕ ಕುಟುಂಬದ ಸದಸ್ಯರು ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಉರಗ ತಜ್ಞರ ತಂಡ ಸ್ಥಳಕ್ಕೆ ತಲುಪಿದ್ದು, ಹಾವನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಕೋಟಾದ ಸ್ವಾಮಿ ವಿವೇಕಾನಂದನಗರ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ. @IVibhorAggarwal ಎಂಬ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋ ಒಂದು ಕ್ಷಣ ಎದೆಯಲ್ಲಿ ನಡುಕ ಹುಟ್ಟಿಸುವುದಂತೂ ಖಂಡಿತಾ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಸೌಂದರ್ಯ ಹೆಚ್ಚಿಸಲು 6 ಲಕ್ಷ ರೂ. ಖರ್ಚು ಮಾಡಿ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ಸಾವು

ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಕಾಮೆಂಟ್​​​​​ ಮಾಡಿದ್ದಾರೆ. ಮಳೆಗಾಲದಲ್ಲಿ ಜಾಗರೂಕರಾಗಿರಲು, ಬಟ್ಟೆಯನ್ನು ವಾಷಿಂಗ್​​ ಮೆಷಿನ್​ಗೆ ಹಾಕುವ ಮೊದಲು ಪರಿಶೀಲಿಸಿ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್​ನಲ್ಲಿ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:37 pm, Wed, 21 August 24

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us