ನೀವು ಸಾಮಾಜಿಕ ಜಾಲತಾಣದಲ್ಲಿ ಅನೇಕ ವೈರಲ್ ವಿಡಿಯೋಗಳನ್ನು ನೋಡಿರಬಹುದು, ಆದರೆ ಅವುಗಳಲ್ಲಿ ಕೆಲವೊಂದು ವಿಡಿಯೋಗಳು ನಿಮ್ಮ ಮನಸ್ಸಿಗೆ ಇಷ್ಟವಾಗಿರಬಹುದು, ಇಷ್ಟವಾಗಿರದೇ ಇರಬಹುದು, ಆದರೆ ಈ ವಿಡಿಯೋವನ್ನು ನೋಡಿದರೆ ನೀವು ಇಷ್ಟ ಪಡುವುದು ಖಂಡಿತ, ಆ ವಿಡಿಯೋ ಇಲ್ಲಿದೆ ನೋಡಿ, ಕಾಶ್ಮೀರದ ದಾಲ್ ಸರೋವರದಲ್ಲಿ ಶ್ವಾನಗಳು ಶಿಕಾರಾ ಸವಾರಿ ಮಾಡುತ್ತಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ಸುಂದರ ಕಾಶ್ಮೀರಕ್ಕೆ ಬಂದರೆ ಕೆಲವೊಂದು ಪ್ರದೇಶಕ್ಕೆ ಭೇಟಿ ನೀಡುತ್ತೇವೆ, ಆ ಸುಂದರ ಪ್ರದೇಶಗಳಲ್ಲಿ ಒಂದು ಶಿಕಾರಾ ಸವಾರಿ. ಇತ್ತೀಚೆಗೆ Instagram ನಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊ ಎಲ್ಲಾ ಕಡೆ ವೈರಲ್ ಆಗುತ್ತಿದೆ, ಮನುಷ್ಯನಂತೆ ಈ ಶ್ವಾನಗಳು ಕೂಡ ಎಲ್ಲವನ್ನು ಗಮನಿಸಿಕೊಂಡು ಹೋಗುತ್ತದೆ. ಇಲ್ಲಿ ಬರುವ ಪ್ರವಾಸಿಗರು ತಮ್ಮ ಮನೆಯ ಶ್ವಾನ ಜೊತೆಗೆ ಬಂದು ಶಿಕಾರಾ ಸವಾರಿ ಮಾಡುತ್ತಾರೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
“ಕಾಶ್ಮೀರದ ಅತ್ಯುತ್ತಮ ದಿನ” ಎಂದು ಶೀರ್ಷಿಕೆಯಲ್ಲಿ ಹಾಕಿದ್ದಾರೆ. ಎರಡು ಸುಂದರವಾದ ಶ್ವಾನಗಳು ದೋಣಿ ವಿಹಾರ ಮಾಡುತ್ತೀರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ದೋಣಿಯ ಮುಂಭಾಗದಿಂದ ಒಂದು ಶ್ವಾನವು ನೀರನ್ನು ನೋಡುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಇನ್ನೊಂದು ಶ್ವಾನ ಆರಾಮವಾಗಿ ಕುಳಿತು ಸರೋವರದ ಕಡೆಗೆ ನೋಡುತ್ತಿರುವುದನ್ನು ನೋಡಬಹುದು. ಈ ವಿಡಿಯೋವನ್ನು ಶಿವಂಗಿ ಶರ್ಮಾ ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನು ಓದಿ: ಮಹಿಳೆಯ ಬ್ಯಾಗ್ ತಪಾಸಣೆ ವೇಳೆ ಗಲಾಟೆ; ಯುವಕನ ಕಾಲಿಗೆ ಶೂಟ್ ಮಾಡಿದ ಪೊಲೀಸ್
ವೀಡಿಯೊ ಸುಮಾರು 5.1 ಮಿಲಿಯನ್ ವೀಕ್ಷಣೆಗಳನ್ನುಪಡೆದುಕೊಂಡಿದೆ. ಶ್ವಾನ ಪ್ರೀಯರು ಈ ಬಗ್ಗೆ ಕಮೆಂಟ್ ಕೂಡ ಮಾಡಿದ್ದಾರೆ. ಇದರಲ್ಲಿ ಒಬ್ಬರು ಇನ್‌ಸ್ಟಾಗ್ರಾಮ್ ಬಳಕೆದಾರರು “ನನ್ನ ಫರ್‌ಬಾಲ್ ಈ ಶ್ವಾನವನ್ನು ಹೋಲುತ್ತದೆ. ನನ್ನ ಶ್ವಾನ ಬೆಳೆದ ನಂತರ ಇಲ್ಲಿಗೆ ಕರೆದುಕೊಂಡು ಹೋಗುತ್ತೇನೆ ಎಂದಿದ್ದಾರೆ. ಇನ್ನೂ ಕೆಲವರು ಈ ಬಗ್ಗೆ ಕಮೆಂಟ್ ಮಾಡಿದ್ದು, ಇಲ್ಲಿಗೆ ಒಂದು ಬಾರಿಯಾದರೂ ಭೇಟಿ ನೀಡಬೇಕು ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ
Published On - 11:02 am, Wed, 29 June 22