
ವೈರಲ್ ವೀಡಿಯೊ: ಬಾತುಕೋಳಿಗಳು ನೀರಿನಲ್ಲಿ ಈಜಾಡುವುದೇ ಚಂದ, ಅದಾಗ್ಯೂ ಆಕಾಶದಲ್ಲಿ ವಿಮಾನ ಅಥವಾ ರಾಕೇಟ್ ಹೋದಾಗ ಯಾವ ರೀತಿ ಗೆರೆಯೊಂದು ಕಾಣುತ್ತದೆಯೇ ಅದೇ ರೀತಿಯಲ್ಲಿ ಬಾತುಕೋಳಿ(Duck)ಯೊಂದು ಕೊಳದಲ್ಲಿ ಈಜಾಡಿಕೊಂಡು ಹೋಗಿದೆ. ನೋಡುವಾಗ ಬಾತುಕೋಳಿ ಕೊಳದಲ್ಲಿ ಸರಳ ರೇಖೆ ಎಳೆದಂತೆ ಕಾಣುತ್ತಿದೆ. ಪ್ರಾಣಿಗಳ ವೀಡಿಯೊಗಳನ್ನು ನಿಯಮಿತವಾಗಿ ಹಂಚಿಕೊಳ್ಳುವ ‘Yoda4ever’ ಟ್ವಿಟರ್ ಖಾತೆಯಲ್ಲಿ ಶಾಂತವಾಗಿ ಈಜಾಡುವ ಬಾತುಕೋಳಿಯ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ (Viral Video) ಆಗುತ್ತಿದೆ. ಈ ವಿಡಿಯೋ ಕೆಲಸದ ಒತ್ತಡದಲ್ಲಿರುವ ನೆಟ್ಟಿಗರ ಮನಸ್ಸನ್ನು ಶಾಂತಗೊಳಿಸುವಂತಿದೆ.
ಇದನ್ನೂ ಓದಿ: Viral Video: ಅಯ್ಯೋ ಆನೆ ಮಾಡಿದ ಕೆಲಸ ಏನು ಗೊತ್ತಾ? ವಿಡಿಯೋ ನೋಡಿ ನೀವು ನಗುವುದು ಖಂಡಿತ
ಬಾತುಕೋಳಿಯ ವಿಡಿಯೋವನ್ನು Yoda4ever ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ನಂತರ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, 47ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ವಿಡಿಯೋದಲ್ಲಿ ಕಾಣುವಂತೆ, ಜಪಾನೀಸ್ ಚೆರ್ರಿ ಅಥವಾ ಸಕುರಾ ಎಂದೂ ಕರೆಯಲ್ಪಡುವ ಚೆರ್ರಿ ಹೂವುಗಳ ಸುಂದರವಾದ ದಳಗಳಿಂದ ಆವೃತವಾಗಿರುವ ಕೊಳದಲ್ಲಿ ಬಾತುಕೋಳಿ ಶಾಂತವಾಗಿ ಈಜುತ್ತಿರುವುದನ್ನು ನೋಡಬಹುದು. ಬಾತುಕೋಳಿಯು ಈಜಾಡುತ್ತಾ ಹೋದಾಗ ಹಿಂಬದಿಯಲ್ಲಿ ಹೂವುಗಳೆಲ್ಲವೂ ಪಕ್ಕಕ್ಕೆ ಸರಿದು ದಾರಿ ಮಾಡಿದಂತೆ ಕಾಣುತ್ತಿದ್ದು, ಈ ನೋಟವು ನಿಜವಾಗಿಯೂ ರಮಣೀಯವಾಗಿದೆ.
ಈ ವೀಡಿಯೊವನ್ನು ವೀಕ್ಷಣೆ ಮಾಡಿದ ನೆಟ್ಟಿಗರು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದು, ತಾವು ಕೂಡ ಬಾತುಕೋಳಿಯಂತೆ ಆರಾಮವಾಗಿರಲು ಬಯಸುವುದಾಗಿ ಹೇಳಿಕೊಂಡಿದ್ದಾರೆ. ವಿಡಿಯೋ ವೀಕ್ಷಿಸಿದ ನೆಟ್ಟಿಗರೊಬ್ಬರು, “ಅದು ತುಂಬಾ ಮುದ್ದಾಗಿದೆ ಮತ್ತು ಮ್ಯಾಜಿಕ್ ಆಗಿ ಕಾಣುತ್ತದೆ” ಎಂದು ಕಾಮೆಂಟ್ ಮಾಡಿದ್ದಾರೆ. “ಉಸಿರು” ಎಂದು ಇನ್ನೊಬ್ಬ ಬಳಕೆದಾರರು ಹೇಳಿದ್ದು, ಮತ್ತೊಬ್ಬರು, “ಎಂಥ ಒಂದು ಸರಳ ರೇಖೆ !!” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Viral Photo: ಮುಂಬದಿಯಲ್ಲೇ ಎರಡು ತಲೆಯುಳ್ಳ ಅಪರೂಪದ ಹಾವು ಪತ್ತೆ! ಇಲ್ಲಿದೆ ನೋಡಿ ಫೋಟೋಗಳು
Published On - 6:37 pm, Fri, 1 July 22