ಅಮ್ಮ ಅದೊಂದು ಸುಂದರ ಜಗತ್ತು, ಕರುಣೆ, ಪ್ರೀತಿ, ವಿಶ್ವಾಸ, ನಂಬಿಕೆ, ರಕ್ಷಣೆ ಎಲ್ಲವನ್ನೂ ಒಂದೇ ಕಡೆ ಕಾಣುವ ಅದ್ಭುತ ಜಗತ್ತು, ಈ ವಿಶ್ವದಲ್ಲಿ ತಾರತಾಮ್ಯ ಮಾಡದ ಏಕಮಾತ್ರ ಜೀವ ಎಂದರೆ ಅಮ್ಮ, ತಾನು ಕಷ್ಟಪಟ್ಟರು ತನ್ನ ಮಕ್ಕಳು ಕಷ್ಟ ಪಡಬಾರದು ಎನ್ನುವ ವಾತ್ಸಲ್ಯ ಮೂರ್ತಿ ಅಮ್ಮ. ತನ್ನ ಮಕ್ಕಳಿಗಾಗಿ ಏನು? ಬೇಕಾದರೂ ಮಾಡುವ ಆ ತಾಯಿಯಲ್ಲಿ ಯಾವುದೇ ನಂಜು ಇಲ್ಲ. ತಾಯಿ ಎಂದಾಗ ಅದು ಮನುಷ್ಯನಿಗೆ ಮಾತ್ರ ಸೀಮಿತವಲ್ಲ, ಈ ಜಗತ್ತಿನಲ್ಲಿ ಪ್ರತಿಯೊಂದು ಜೀವಿಯು ಅಮ್ಮ ಆರೈಕೆಯಿಂದಲ್ಲೇ ಈ ಜಗತ್ತಿಗೆ ಬಂದಿದ್ದು. ಪ್ರತಿಯೊಂದು ಜೀವಿಗಳು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತದೆ. ಈ ಕಾಳಜಿಗೆ ಪ್ರಾಣಿಗಳು ಹೊರತಲ್ಲ, ಹೌದು ಪ್ರಾಣಿಗಳು ಕೂಡ ತನ್ನ ಮಕ್ಕಳನ್ನು ತುಂಬಾ ಕಾಳಜಿ ಮಾಡುತ್ತದೆ. ಅದರಲ್ಲೂ ಆನೆ ತನ್ನ ಮರಿಗೆ ಯಾವುದೇ ತೊಂದರೆ ಆಗದಂತೆ ಕಾಳಜಿ ವಹಿಸುವ ಪ್ರಾಣಿ. ಇದೀಗ ಇದಕ್ಕೆ ಸಾಕ್ಷಿ ಎಂಬಂತೆ ಒಂದು ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತಾಯಿ ತನ್ನ ಮಗುವನ್ನು ಎಷ್ಟು ಜಾಗೃತೆ ಮಾಡುತ್ತದೆ ಎಂಬುದಕ್ಕೆ ಈ ವಿಡಿಯೋ ಉತ್ತಮ ಉದಾಹರಣೆ. ಇದೊಂದು ವಿಡಿಯೋ ಎಲ್ಲ ಮನಸ್ಸಿಗೆ ಭಾವತ್ಮಕ ಸ್ಪರ್ಶವನ್ನು ನೀಡಿದೆ.
ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಆತ್ಮಹತ್ಯೆಗೆ ನಿರ್ಧರಿಸಿದ ಲವ್ವರ್ಸ್, ನದಿಗೆ ಹಾರಿದ ಮಹಿಳೆ, ಹಿಂದೆ ಸರಿದ ಪತಿ! ಈಜಾಡಿ ಮೇಲ್ಬಂದ ಮಹಿಳೆ ಮಾಡಿದ್ದೇನು?
ಈ ವಿಡಿಯೋದಲ್ಲಿ ಆನೆ ಹಿಂಡು ಕಾಡಿಗೆ ಹೋಗಲು ನದಿಯನ್ನು ದಾಟುತ್ತಿರುವುದನ್ನು ನೀವು ಕಾಣಬಹುದು. ವೇಗವಾಗಿ ಹರಿಯುವ ನೀರಿನ ಮಧ್ಯೆ ತಾಯಿ ಆನೆ ಮತ್ತು ಮರಿ ಆನೆ ಸಿಕ್ಕಿಕೊಂಡಿರುತ್ತದೆ. ತನ್ನ ಮರಿ ಆನೆಯನ್ನು ಕಾಪಾಡಲು ತಾಯಿ ಆನೆ ಒದ್ದಾಡುತ್ತದೆ. ಅಷ್ಟೋ ವೇಗವಾಗಿ ಹರಿಯುತ್ತಿರುವ ನೀರಿನ ಮಧ್ಯೆ ತನ್ನ ಮಗುವನ್ನು ಬಿಟ್ಟು ಹೋಗದೆ. ಕಾಪಾಡಲು ತಾಯಿ ಆನೆ ಸಾಹಸವನ್ನು ಮಾಡಿದೆ. ತಾಯಿ ಆನೆ ತನ್ನ ಸೊಂಡಿನಲ್ಲಿ ಆ ಮರಿ ಆನೆಯನ್ನು ಕಾಪಾಡಲು ಹರಸಾಹಸ ಮಾಡಿದೆ. ತಕ್ಷಣವೇ ತಾಯಿ ಆನೆ ತನ್ನ ಸೊಂಡಿಲು ಮತ್ತು ಕಾಲಿನಿಂದ ಮುಂದೆಕ್ಕೆ ಸಾಗಿಸುತ್ತ, ನದಿಯನ್ನು ದಾಟಿ, ತನ್ನ ಆನೆ ಹಿಂಡನ್ನು ಸೇರಿಕೊಂಡಿದೆ.
Mother elephant saving calf from drowning is the best thing you watch today. Video was shot near Nagrakata in North Bengal. Via WA. pic.twitter.com/aHO07AiUA5
— Parveen Kaswan, IFS (@ParveenKaswan) June 25, 2022
ಈ ವಿಡಿಯೋವನ್ನು ಭಾರತೀಯ ಅರಣ್ಯ ಅಧಿಕಾರಿ ಪರ್ವೀನ್ ಕಸ್ವಾನ್ ಹಂಚಿಕೊಂಡಿದ್ದಾರೆ. ಉತ್ತರ ಬಂಗಾಳದ ನಗ್ರಕಟಾ ಬಳಿ ಈ ಘಟನೆ ನಡೆದಿದೆ. ಈ ವೀಡಿಯೋವನ್ನು ಟ್ವಿಟರ್‌ನಲ್ಲಿ 32,000 ಕ್ಕೂ ಹೆಚ್ಚು ವೀಕ್ಷಣೆ ಮಾಡಿದ್ದು, 1,836 ಲೈಕ್‌ಗಳನ್ನು ಪಡೆದುಕೊಂಡಿದೆ. ಇಂತಹ ಆನೆಗಳ ವಿಡಿಯೋ ಸಾಮಾಜಿಕ ಜಾಕತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
Published On - 3:41 pm, Sat, 25 June 22