ಹೆಂಡತಿಯನ್ನು ಕೊಲ್ಲಲು ಆಕೆಯ ಮನೆಗೆ ಟ್ರಕ್​ ನುಗ್ಗಿಸಿದ ಗಂಡ; ವೈರಲ್ ಆದ ವಿಡಿಯೋ

Husband and Wife : ‘ಸದ್ಯದಲ್ಲೇ ವಿಚ್ಛೇದನ ಪಡೆಯಲಿದ್ದೇವೆ. ಅದನ್ನು ಅವನಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಅದಕ್ಕೇ ಹೀಗೆ ಮಾಡುತ್ತಿದ್ಧಾನೆ. ನನ್ನ ಈ ಮನೆಯನ್ನು ಮಾರಿಬಿಡುತ್ತೇನೆ. ಅವ ನನ್ನನ್ನು ಕೊಲ್ಲಲೆಂದೇ ಬಂದಿದ್ದಾನೆ.’

ಹೆಂಡತಿಯನ್ನು ಕೊಲ್ಲಲು ಆಕೆಯ ಮನೆಗೆ ಟ್ರಕ್​ ನುಗ್ಗಿಸಿದ ಗಂಡ; ವೈರಲ್ ಆದ ವಿಡಿಯೋ
ಹೆಂಡತಿಯ ಮನೆಯನ್ನು ಟ್ರಕ್​ನೊಂದಿಗೆ ನುಗ್ಗಿ ಧ್ವಂಸಗೊಳಿಸುತ್ತಿರುವ ಗಂಡ
Edited By:

Updated on: Jan 18, 2023 | 3:48 PM

Viral : ಗಂಡ ಹೆಂಡತಿ ಮಧ್ಯೆ ಹೊಂದಾಣಿಕೆ ಸಾಧ್ಯವೇ ಇಲ್ಲವೆಂದಾಗ ವಿಚ್ಛೇದನ ಉತ್ತರವಾಗುತ್ತದೆ. ವಿಚ್ಛೇದನ ಪಡೆಯುವುದೇ ಅವರವರ ಪಾಡಿಗೆ ಅವರು ಬೇರೆಬೇರೆಯಾಗಿ ಜೀವನ ಸಾಗಿಸಲು. ಆದರೆ ಎಷ್ಟೋ ಜನರಿಗೆ ಮದುವೆಯ ಬಂಧದಲ್ಲಿದ್ದಾಗಲೂ ಹೆಂಡತಿ ಅಥವಾ ಗಂಡನೊಂದಿಗೆ ಸಮಾಧಾನದಿಂದ ಇರಲು ಸಾಧ್ಯವಾಗುವುದಿಲ್ಲ. ನಂತರ ವಿಚ್ಛೇದನ ತೆಗೆದುಕೊಳ್ಳಲು ತೀರ್ಮಾನಿಸಿದಾಗಲೂ ತಮ್ಮಪಾಡಿಗೆ ತಾವಿರುವ ತಾಳ್ಮೆ ಬೆಳೆಸಿಕೊಳ್ಳುವ ವ್ಯವಧಾನ ಬೆಳೆಯುವುದೇ ಇಲ್ಲ. ಇದೀಗ ವೈರಲ್ ಆಗುತ್ತಿರುವ ಈ ಘಟನೆ ಗಮನಿಸಿ. ವಿಚ್ಛೇದನ ತೆಗೆದುಕೊಳ್ಳಲು ನಿರ್ಧರಿಸಿದ ಮೇಲೆ ಗಂಡನಾದವನು ಹೆಂಡತಿಯ ಮನೆಯನ್ನು ಟ್ರಕ್​ನೊಂದಿಗೆ ನುಗ್ಗಿ ಧ್ವಂಸಗೊಳಿಸುವ ಮೂಲಕ ತನ್ನ ಅಸಹನೆಯ್ನು ವ್ಯಕ್ತಪಡಿಸಿದ್ದಾನೆ.

ಲಾಸ್​ ಏಂಜಲೀಸ್​ನಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ತನ್ನ ಪಾಡಿಗೆ ತಾನು ಬೇರೆ ಮನೆಯಲ್ಲಿ ವಾಸವಾಗಿದ್ದ ಹೆಂಡತಿಯ ಮನೆಗೆ ಗಂಡನಾದವನು ಕಸ ಸಾಗಿಸುವ ಟ್ರಕ್​ ನುಗ್ಗಿಸಿ ಆಕೆಯನ್ನು ಕೊಲ್ಲಲು ಪ್ರಯತ್ನಿಸಿದ್ದಾನೆ. ಈ ಭೀಕರ ನಡೆಯನ್ನು ನೋಡಿದ ಹೆಂಡತಿ ಅಸಹಾಯಕತನ ಮತ್ತು ಜೀವಭಯದಿಂದ ಕಣ್ಣೀರು ಹಾಕಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : ರಸ್ತೆಯಲ್ಲಿ ಬಸ್ ನಿಲ್ಲಿಸಿ ಚಿಕನ್ ತರಲು ಅಂಗಡಿಗೆ ಹೋದ ಲಂಡನ್ ಡ್ರೈವರ್ ವಿಡಿಯೋ ವೈರಲ್; ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

‘ಅವ ನನ್ನನ್ನು ಕೊಲ್ಲಲು ನೋಡುತ್ತಿದ್ದಾನೆ. ಇದಕ್ಕೆ ಈ ಘಟನೆಯೇ ಸಾಕ್ಷಿ. ನನಗೆ ಈ ಮನೆ ಬೇಡವೇ ಬೇಡ. ನಾನು ಇನ್ನೂ ಇಲ್ಲೇ ಇದ್ದರೆ ಅಪಾಯ ತಪ್ಪಿದ್ದಲ್ಲ. ಅವ ಮತ್ತೆ ವಾಪಾಸು ಬರಬಹುದು. ಹಾಗಾಗಿ ನಾನು ಈ ಮನೆಯನ್ನು ಮಾರಾಟ ಮಾಡಿ ಬೇರೆಡೆ ಹೋಗುತ್ತೇನೆ’ ಎಂದು ಹೇಳುತ್ತಲೇ ಆಕೆ ಗದ್ಗದಿತಳಾಗಿದ್ದಾಳೆ.

‘ಇವನಿಗೆ ಈಗ 60 ವರ್ಷ. ಖಂಡಿತ ಈತನಲ್ಲಿ ಪ್ರಾಮಾಣಿಕತೆ ಇಲ್ಲ. ಇವನ ಮೇಲೆ ನನಗಂತೂ ಇನ್ನು ಯಾವ ನಂಬಿಕೆಯೂ ಉಳಿದಿಲ್ಲ. ಈಗ ನಡೆದುಕೊಂಡು ರೀತಿಯಂತೂ ಹುಚ್ಚುತನದ ಪರಮಾವಧಿ. ನೀವೇ ನೋಡಿ ಮನೆಯ ಬಳಿ ನಿಂತ ಕಾರುಗಳನ್ನೂ ಧ್ವಂಸ ಮಾಡಿದ್ದಾನೆ’ ಎಂದಿದ್ದಾಳೆ ಆಕೆ.

ಇದನ್ನೂ ಓದಿ : ನೇಪಾಳ ವಿಮಾನ ದುರಂತಕ್ಕೂ ಮುನ್ನ ಕೊನೆಯ ಟಿಕ್​ಟಾಕ್​ ಮಾಡಿದ ಗಗನಸಖಿಯ ವಿಡಿಯೋ ವೈರಲ್

ಆದರೆ ಈ ಘಟನೆಯನ್ನು ಲಾಸ್ ಏಂಜಲೀಸ್​ನ ಪೊಲೀಸರು ಟ್ರಾಫಿಕ್​ನಿಂದ ಉಂಟಾದ ಅಪಘಾತ ಎಂದು ಪ್ರಕರಣ ದಾಖಲಿಸಿಕೊಂಡಿದೆ. ಈ ಮಹಿಳೆಯ ಗಂಡನ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾಳೆ.

‘ವಿಚ್ಛೇದನ ಎನ್ನುವ ವಾಸ್ತವಾಂಶವನ್ನು ಅವನಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಕ್ಷೋಭೆಗೆ ಒಳಗಾಗಿದ್ದಾನೆ. ಹಾಗಾಗಿ ಹೀಗೆಲ್ಲ ವರ್ತಿಸುತ್ತಿದ್ಧಾನೆ. ಆದರೆ ನಾನಂತೂ ಪ್ರಾಣಭಯದಿಂದ ನಲಗುತ್ತಿದ್ದೇನೆ’ ಎಂದು ಆಕೆ ತಿಳಿಸಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

 

Published On - 3:45 pm, Wed, 18 January 23