
Ants : ಈ ಇರುವೆಗಳಿಗೆ ತಮ್ಮ ಗಾತ್ರದ 100 ಪಟ್ಟು ಭಾರದ ಈ ಕಡ್ಡಿಯನ್ನು ಹೀಗೆ ಸರಾಗವಾಗಿ ಒಯ್ಯಲು ಸಾಧ್ಯವಾಗುತ್ತದೆ ಎಂದರೆ ಯೋಚಿಸಿ, ಎಂಥ ಒಗ್ಗಟ್ಟಿರಬೇಕು ಎಂದು. ಏಕಕಾಲಕ್ಕೆ ಆ ಪ್ರಯತ್ನ ಹೇಗೆ ಸಾಧ್ಯವಾಗಿರಬಹುದು? ಮಾತಿಲ್ಲ ಕತೆಯಿಲ್ಲ ಆದೇಶವಿಲ್ಲ ಮತ್ತೆ. ಎಲ್ಲವೂ ಮೌನದಲ್ಲೇ, ಹೊಂದಾಣಿಕೆಯಲ್ಲೇ. ಏಕೆಂದರೆ ಗುರಿಯ ಬಗ್ಗೆ ಅವುಗಳಿಗೆ ನಿಖರತೆ ಇದೆ. ನಾನು ನನ್ನದು ಎನ್ನುವುದಕ್ಕಿಂಥ ನಮ್ಮದು ಎನ್ನುವ ಒಟ್ಟು ಜವಾಬ್ದಾರಿ ಅವುಗಳಿಗೆ ಅರ್ಥವಾಗಿದೆ. ಒಟ್ಟಾಗಿದ್ದರೆ ಮಾತ್ರ ಬದುಕು ಎನ್ನುವುದು ಮನದಟ್ಟಾಗಿದೆ. ಈಗಲ್ಲ ಇರುವೆ ಎಂಬ ಜೀವ ಉದಯಿಸಿದಾಗಿನಿಂದಲೂ! ಈ ವಿಡಿಯೋ ಅನ್ನು 85,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದನ್ನು ಎಲ್ಲ ನೆಟ್ಟಿಗರೂ ಒಪ್ಪಿದ್ದಾರೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಈ ಕಡ್ಡಿಯನ್ನು ಸಾಗಿಸುವುದೆಂದರೆ ದೊಡ್ಡ ಮರದ ದಿಮ್ಮಿಯನ್ನು ಹೊತ್ತೊಯ್ದಂತೆ ಆಗಿರಬೇಕಲ್ಲವೆ ಇವುಗಳಿಗೆ?
ಮತ್ತಷ್ಟು ಇಂಥ ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ