AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸಹ ಪ್ರಯಾಣಿಕರ ಮೈ ಮೇಲೆ ಬೀಳುತ್ತಾ ರೀಲ್ಸ್​​ ಮಾಡಿದ ಯುವತಿ; ವಿಡಿಯೋ ವೈರಲ್​​​

ವಿಚಿತ್ರವಾಗಿ ನೃತ್ಯ ಮಾಡುತ್ತಾ, ಸಹ ಪ್ರಯಾಣಿಕರ ಮೈ ಮೇಲೆ ಬೀಳುತ್ತಾ ಯುವತಿಯೊಬ್ಬಳು ರೈಲ್ವೇ ನಿಲ್ದಾಣದಲ್ಲಿ ಡ್ಯಾನ್ಸ್​ ಮಾಡಿದ್ದಾಳೆ. ಇನ್ಸ್ಟಾಗ್ರಾಮ್​​​ ರೀಲ್​ಗಾಗಿ ಯುವತಿ ಈ ರೀತಿ ಮಾಡಿದ್ದು, ಈಕೆಯ ವಿರುದ್ದ ತಕ್ಷಣ ಕ್ರಮ ಕೈಗೊಳ್ಳುವಂತೆ" ಸಾಕಷ್ಟು ನೆಟ್ಟಿಗರು ಕಾಮೆಂಟ್​​ನಲ್ಲಿ ಬರೆದುಕೊಂಡಿದ್ದಾರೆ.

Viral Video: ಸಹ ಪ್ರಯಾಣಿಕರ ಮೈ ಮೇಲೆ ಬೀಳುತ್ತಾ ರೀಲ್ಸ್​​ ಮಾಡಿದ ಯುವತಿ; ವಿಡಿಯೋ ವೈರಲ್​​​
ಅಕ್ಷತಾ ವರ್ಕಾಡಿ
|

Updated on: Jul 10, 2024 | 6:14 PM

Share

ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಹುಚ್ಚು ಸಾಹಸ ಮಾಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಬಿಟ್ಟಿದೆ. ಇದೀಗ ಇಲ್ಲೊಬ್ಬಳೂ ಯುವತಿ ರೈಲು ನಿಲ್ದಾಣದಲ್ಲಿ ಮೈಯಲ್ಲಿ ದೇವರು ಬಂದಂತೆ ವಿಚಿತ್ರವಾಗಿ ನಟಿಸಿದ್ದು, ಪಕ್ಕದಲ್ಲಿದ್ದ ಸಹ ಪ್ರಯಾಣಿಕರ ಮೇಲೆ ಬಿದ್ದಿದ್ದಾಳೆ. ಯುವತಿ ವಿಚಿತ್ರ ವರ್ತನೆಯನ್ನು ಕಂಡು ಕೋಪಗೊಂಡ ಮಹಿಳೆ ಅಲ್ಲಿಯೇ ಆಕೆಯನ್ನು ಥಳಿಸಲು ಆರಂಭಿಸಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗಿದೆ.

seemakanojiya87 ಎಂಬ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗಿದೆ. ಜುಲೈ 06ರಂದು ಹಂಚಿಕೊಂಡಿರುವ ಈ ವಿಡಿಯೋ ಕೇವಲ ನಾಲ್ಕು ದಿನದಲ್ಲಿ 1 ಮಿಲಿಯನ್​​​ ಅಂದರೆ 10 ಲಕ್ಷ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ನೆಟ್ಟಿಗರು ಯುವತಿ ಅವತಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈರಲ್​ ವಿಡಿಯೊ ಇಲ್ಲಿದೆ ನೋಡಿ:

ಇದನ್ನೂ ಓದಿ: Joseph Radhik: ಅಂಬಾನಿ ಮಗನ ಮದುವೆಯ ಫೋಟೋಗ್ರಾಫರ್ ಯಾರು ಗೊತ್ತಾ? ಅವರು ಪಡೆಯುವ ಸಂಭಾವನೆ ಎಷ್ಟು?

ವೈರಲ್​​ ಆಗಿರುವ ವಿಡಿಯೋದಲ್ಲಿ ಯುವತಿ ವಿಚಿತ್ರವಾಗಿ ನೃತ್ಯ ಮಾಡುತ್ತಾ, ಸಹ ಪ್ರಯಾಣಿಕರ ಮೈ ಮೇಲೆ ಬೀಳುತ್ತಿರುವುದನ್ನು ಕಾಣಬಹುದು. ಕೋಪಗೊಂಡ ಮಹಿಳೆಯೊಬ್ಬಳು ರೈಲು ನಿಲ್ದಾಣದಲ್ಲೇ ಯುವತಿಯನ್ನು ಥಳಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಜೊತೆಗೆ ವಿಡಿಯೋ ಕಂಡು ” ಸಾರ್ವಜನಿಕ ಪ್ರದೇಶದಲ್ಲಿ ವಿಚಿತ್ರ ವರ್ತನಗೈದ ಯುವತಿಯ ವಿರುದ್ದ ತಕ್ಷಣ ಕ್ರಮ ಕೈಗೊಳ್ಳುವಂತೆ” ಸಾಕಷ್ಟು ನೆಟ್ಟಿಗರು ಕಾಮೆಂಟ್​​ನಲ್ಲಿ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ