Viral Video : ಕಿಲಿ ಪೌಲ್ ಮತ್ತು ಅವರ ತಂಗಿ ನೀಮಾ ಪೌಲ್ ಹೊಸ ರೀಲ್ನೊಂದಿಗೆ ಮತ್ತೆ ನೆಟ್ಟಿಗರ ಗಮನ ಸೆಳೆದಿದ್ದಾರೆ. ಈ ಹಿಂದೆ ಕಿಲಿ ಜೀನಾ ಇಸೀಕಾ ನಾಮ್ ಹೈ ಹಾಡನ್ನು ಸ್ವತಃ ಹಾಡಿ ಭೇಷ್ ಎನ್ನಿಸಿಕೊಂಡಿದ್ದ. ಈ ಸಲ ಲತಾ ಮಂಗೇಶ್ಕರ್ ಅವರ ಸೂಪರ್ ಹಿಟ್ ‘ಮೇರಾ ದಿಲ್ ಏ ಪುಕಾರೆ ಆಜಾ’ ಹಾಡಿಗೆ ಅಣ್ಣ ತಂಗಿ ನರ್ತಿಸಿದ್ದಾರೆ. ನೆಟ್ಟಿಗರು ಕ್ಯಾ ಬಾತ್ ಹೈ ಎನ್ನುತ್ತಿದ್ದಾರೆ.
ಆಯೇಷಾ ಎಂಬ ಪಾಕಿಸ್ತಾನಿ ಹುಡುಗಿ ಮದುವೆಮನೆಯಲ್ಲಿ ಇದೇ ಹಾಡಿಗೆ ನೃತ್ಯ ಮಾಡಿದ ವಿಡಿಯೋ ನೋಡಿದ್ದಿರಿ. ಲಕ್ಷಗಟ್ಟಲೆ ಮಂದಿ ಈ ವಿಡಿಯೋ ನೋಡಿ ಪರವಿರೋಧದ ಪ್ರತಿಕ್ರಿಯೆಗಳನ್ನು ನೀಡಿದ್ದರು. ನಂತರ ಮಿಸ್ಟರ್ ಬೀನ್ಸ್ ಡ್ಯಾನ್ಸ್ ಎಡಿಟ್ ಮಾಡಿ ವೈರಲ್ ಮಾಡಲಾಗಿತ್ತು. ಇದೀಗ ಕಿಲಿ ಮತ್ತು ನೀಮಾ ಈ ಹಾಡಿಗೆ ಹೆಜ್ಜೆ ಹಾಕಿ ನೆಟ್ಟಿಗರ ಹುಚ್ಚನ್ನು ಲಯಬದ್ಧವಾಗಿ ಬಡಿದೆಬ್ಬಿಸಿದ್ದಾರೆ.
ಈತನಕ ಈ ವಿಡಿಯೋ ಅನ್ನು 1.5 ಮಿಲಿಯನ್ ಜನರು ನೋಡಿದ್ದಾರೆ. 1.5 ಲಕ್ಷ ಜನರು ಇಷ್ಟಪಟ್ಟಿದ್ದಾರೆ. ಇದು ಅದ್ಭುತವಾಗಿದೆ ಎಂದಿದ್ದಾರೆ ಕೆಲವರು. ಓಹ್ ಈ ಟ್ರೆಂಡ್ ಆಫ್ರಿಕಾತನಕ ತಲುಪಿತೇ? ಎಂದಿದ್ದಾರೆ ಇನ್ನೂ ಕೆಲವರು.
ಒಂದು ವಿಡಿಯೋ ವೈರಲ್ ಆಗುತ್ತಿದ್ದಂತೆ ತಾವೂ ಇದನ್ನು ಹೇಗೆ ರೀಲ್ ಮೂಲಕ ಪ್ರಸ್ತುತಪಡಿಸುವುದು ಎಂಬ ಯೋಚನೆಯಲ್ಲಿಯೇ ಇಂದಿನ ಸಾಮಾಜಿಕ ಜಾಲತಾಣದ ಮೂಲಕ ಬೆಳಕಿಗೆ ಬಂದವರು ಯೋಚಿಸುತ್ತಿರುತ್ತಾರೆ. ಆ ಪಾಕಿಸ್ತಾನಿ ರೀಲ್ ವೈರಲ್ ಆಗುತ್ತಿದ್ದಂತೆ ಇದೀಗ ನೋಡಿ ವೈರಲ್ ಆಗುತ್ತಿದೆ ಆಫ್ರಿಕನ್ ಅಣ್ಣತಂಗಿಯ ಈ ವಿಡಿಯೋ. ಲತಾದೀ ಹಾಡಿದ ಈ ಹಾಡನ್ನು ಮತ್ತೆ ಯಾರು ವೈರಲ್ ಮಾಡಬಹುದು? ಕಾಯೋಣ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ