Viral Video : ಅಬ್ಬಬ್ಬಾ! ಏನ್ ಎನರ್ಜಿ ಗುರು ಈ ಅಜ್ಜಿಗೆ, ಈ ಇಳಿವಯಸ್ಸಲ್ಲೂ ಭರ್ಜರಿ ಸ್ಟೆಪ್ಸ್‌

ವಯಸ್ಸು ಇವತ್ತು ಸಮೀಪವಾಗುತ್ತಿದ್ದಂತೆ ಸೊಂಟ ನೋವು, ಕಾಲು ನೋವು ಎನ್ನುವವರವವರ ನಡುವೆ ಈ ಅಜ್ಜಿಯ ಡಾನ್ಸ್ ನೋಡಿದರೆ ಈ ಅಜ್ಜಿಯದು ಏನು ಎನರ್ಜಿ ಗುರು ಎಂದೆನಿಸದೇ ಇರದು. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಅಜ್ಜಿಯೊಬ್ಬರು ಮೆಹಂದಿ ಸಮಾರಂಭವೊಂದರಲ್ಲಿ ಜಬರ್ದಸ್ತ್ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋ ನೋಡುತ್ತಿದ್ದಂತೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

Viral Video : ಅಬ್ಬಬ್ಬಾ! ಏನ್ ಎನರ್ಜಿ ಗುರು ಈ ಅಜ್ಜಿಗೆ, ಈ ಇಳಿವಯಸ್ಸಲ್ಲೂ ಭರ್ಜರಿ ಸ್ಟೆಪ್ಸ್‌
ವೈರಲ್​​ ವಿಡಿಯೋ
Edited By:

Updated on: Apr 25, 2024 | 11:23 AM

ವಯಸ್ಸು ಎಂಬುದು ಬರೀ ನಂಬರ್ ಅಷ್ಟೇ. ದೇಹಕ್ಕೆ ವಯಸ್ಸಾಗಬಹುದು, ಆದರೆ ಮನಸ್ಸಿಗೆ ಖಂಡಿತ ವಯಸ್ಸಾಗುವುದಿಲ್ಲ ಎನ್ನುವ ಮಾತಿದೆ. ನಮ್ಮ ಸುತ್ತಮುತ್ತಲಿನಲ್ಲಿರುವ ವಯೋವೃದ್ಧರನ್ನು ನೋಡಿದಾಗ ಈ ಮಾತು ಅಕ್ಷರಶಃ ಸತ್ಯವೆನಿಸುತ್ತದೆ. ಕೆಲವರು ವೃದ್ಧ ವೃದ್ಧೆಯರು ತಮ್ಮ ಜೀವನೋತ್ಸಾಹದಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಅಜ್ಜ ಅಜ್ಜಿಯಂದಿರ ಡಾನ್ಸ್ ವಿಡಿಯೋಗಳು ಆಗಾಗ ಗಮನ ಸೆಳೆಯುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮೆಹಂದಿ ಸಮಾರಂಭವೊಂದರಲ್ಲಿ ಅಜ್ಜಿಯೊಬ್ಬರು ಜಬರ್ದಸ್ತ್ ಸ್ಟೆಪ್ ಹಾಕಿದ್ದಾರೆ. ಇವರ ಎನರ್ಜಿಯು ಅಲ್ಲಿರುವ ಯುವಕ ಯುವತಿಯರನ್ನೇ ಮೀರಿಸುತ್ತಿದೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:


ಕಿರಣ್ ಕಮಲ್ ಎನ್ನುವವರು ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಅಜ್ಜಿಯೊಬ್ಬರು ಮೆಹಂದಿ ಕಾರ್ಯಕ್ರಮದಲ್ಲಿ ಸ್ಟೆಪ್ ಹಾಕುವುದನ್ನು ಕಾಣಬಹುದು. ಅಜ್ಜಿಯ ಪಕ್ಕದಲ್ಲಿ ಯುವತಿಯರು ಡಾನ್ಸ್ ಮಾಡುತ್ತಿದ್ದರೂ ಅಜ್ಜಿಯೇ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಐವತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದ್ದು ನೆಟ್ಟಿಗರಿಂದ ಮೆಚ್ಚುಗೆಯ ಕಾಮೆಂಟ್ ಗಳು ವ್ಯಕ್ತವಾಗಿವೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ