Penguin : ಬಣ್ಣಬಣ್ಣದ ಬ್ಯಾಕ್ಪ್ಯಾಕ್ (Backpack) ಹೊತ್ತ ಪೆಂಗ್ವಿನ್ಗಳು ಎಲ್ಲಿಗೆ ಪ್ರವಾಸಕ್ಕೆ ಹೊರಟಿವೆ? ಎಂದು ಕೆಲವರು ಕುತೂಹಲ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಈ ಪುಟ್ಟ ಬ್ಯಾಗಿನೊಳಗೆ ಏನೆಲ್ಲ ಸಾಮಾನುಗಳಿರಬಹುದು ಎಂದು ಊಹಿಸುತ್ತಿದ್ದಾರೆ ಕೆಲವರು. ಎಲ್ಲಿ ಮತ್ತು ಹೇಗೆ ಇವರು ಪ್ರಯಾಣಿಸುತ್ತಾರೆ ಎಂದು ಒಂದಿಷ್ಟು ಜನ ಯೋಚಿಸುತ್ತಿದ್ದಾರೆ. ಏನೇ ಆಗಲಿ ಇದು ಬಹಳ ಮುದ್ದಾದ ವಿಡಿಯೋ. ಮತ್ತೆ ಮತ್ತೆ ನೋಡುತ್ತಿದ್ದೇನೆ ಎಂದು ಅನೇಕರು ಹೇಳಿದ್ದಾರೆ.
Penguins going on a trip.. ? pic.twitter.com/NhZWk7cdJu
ಇದನ್ನೂ ಓದಿ— Buitengebieden (@buitengebieden) August 5, 2023
ಆ.5 ರಂದು ‘ಪೆಂಗ್ವಿನ್ಗಳು ಪ್ರವಾಸಕ್ಕೆ ಹೊರಡುತ್ತಿವೆ’ ಎಂಬ ಶೀರ್ಷಿಕೆಯಡಿ ಈ ವಿಡಿಯೋ ಅನ್ನು ಪೋಸ್ಟ್ ಮಾಡಲಾಗಿದ್ದು, ಈಗಾಗಲೇ 21.6 ಮಿಲಿಯನ್ ಜನರು ನೋಡಿದ್ದಾರೆ. 40,000ಕ್ಕಿಂತಲೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. 2.7 ಮಿಲಿಯನ್ ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಈ ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : Viral Video: ನಾಯಿಗಾಯನ; ತೀರ್ಪುಗಾರರನ್ನು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ ಈ ವಿಡಿಯೋ
ಇದು ಅತ್ಯಂತ ಅದ್ಭುತವಾದ ವಿಡಿಯೋ, ಇವರು ಎಲ್ಲಿ ಹೋಗುತ್ತಿದ್ದಾರೋ ನಾನೂ ಕೂಡ ಇಲ್ಲಿಗೆ ಹೋಗಲು ಬಯಸುತ್ತೇನೆ, ನನಗೂ ಇಂಥ ಪುಟ್ಟ ಬ್ಯಾಕ್ಪ್ಯಾಕ್ ಬೇಕು ಎಂದಿದ್ದಾರೆ ಒಬ್ಬರು. ಎಂಥ ಮನೋಹರವಾದ ದೃಶ್ಯವಿದು ಎಂದು ಇನ್ನೊಬ್ಬರು ಹೇಳಿದ್ದಾರೆ. ನನ್ನ ಮಗಳು ಹಠ ಮಾಡುತ್ತಿದ್ದಳು, ಈ ವಿಡಿಯೋ ತೋರಿಸಿದೆ ಬಹಳ ಖುಷಿ ಪಟ್ಟಳು. ಆದರೆ ಇಂತ ಬ್ಯಾಗ್ ಬೇಕು ಎಂದು ಮತ್ತೆ ಅಳಲು ಶುರು ಮಾಡಿದಳು. ಎಲ್ಲಿಂದ ತರುವುದು ಇಷ್ಟು ಪುಟ್ಟ ಬ್ಯಾಗ್ ಎಂದು ಕೇಳಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral Video: ಚುಂಬನವೃತ್ತಾಂತ; ಆಕೆ ಕೊಟ್ಟಿದ್ದನ್ನು ಆಕೆಗೇ ಮರಳಿಸಿತು ಹಾವು, ಮುಂದೆ?
ಈ ಬ್ಯಾಗ್ ನಮಗೂ ಬೇಕು, ನಮಗೂ ಬೇಕು ಎಂದು ಒಕ್ಕೊರಲಿನಿಂದ ಹೇಳುತ್ತಿದ್ಧಾರೆ ನೆಟ್ಟಿಗರು. ಈ ಬ್ಯಾಗ್ ಸಮೇತ ಈ ಮರಿಗಳು ನಮ್ಮನೆಗೆ ಬಂದರೆ ಬಹಳ ಖುಷಿ ಎಂದು ಕೆಲವರು ಹೇಳುತ್ತಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ