ಭೂಪಾಲ್: ಮಧ್ಯಪ್ರದೇಶದಲ್ಲಿ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ವೃದ್ಧರೊಬ್ಬರು ದೇವರ ವಿಗ್ರಹವನ್ನು ಮುರಿದು ಹಾಕಿದ್ದಾರೆ ಎಂದು ಆರೋಪಿಸಿ ಜನರ ಗುಂಪೊಂದು ಅವರನ್ನು ನಡುರಸ್ತೆಯಲ್ಲೇ ಕೆಡವಿ, ಹಿಗ್ಗಾಮುಗ್ಗ ಹೊಡೆದಿದ್ದಾರೆ. ಆ ವೃದ್ಧ ಕೈ ಮುಗಿದು ಬೇಡಿಕೊಂಡರೂ ಬಿಡದ ಯುವಕರು ಕೋಲಿನಿಂದ ಹೊಡೆದು, ಕಾಲಿನಿಂದ ಒದ್ದು ಹಿಂಸೆ ನೀಡಿದ್ದಾರೆ. ಈ ವಿಡಿಯೋವನ್ನು ಅಲ್ಲಿ ನೆರೆದಿದ್ದವರು ಶೂಟ್ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ ನೋಡಿದ ಪೊಲೀಸರು ಕೇಸ್ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಕಮಲ್ ದಾಸ್ ಎಂಬ ವೃದ್ಧ ಮಾನಸಿಕ ಅಸ್ವಸ್ಥರಾಗಿದ್ದು, ಹಲವು ವರ್ಷಗಳಿಂದ ಸ್ಮಶಾನದಲ್ಲೇ ಮಲಗುತ್ತಿದ್ದಾರೆ. ಅವರು ದೇವರ ಮೂರ್ತಿಯನ್ನು ಮುರಿದು ಹಾಕಿದ್ದಾರೆ ಎಂದು ಆರೋಪಿಸಿದ ಯುವಕನೊಬ್ಬ ಮೊದಲು ಕೋಲಿನಿಂದ ಹೊಡೆಯಲಾರಂಭಿಸಿದ್ದಾನೆ. ನಂತರ ಆತನ ಜೊತೆ ಸೇರಿದ ಇತರೆ ಯುವಕರು ಕೂಡ ಕಾಲಿನಿಂದ ಅವರನ್ನು ಒದ್ದು, ಮನಬಂದಂತೆ ಥಳಿಸಿದ್ದಾರೆ. ಅವರ ಕೂದಲನ್ನು ಹಿಡಿದುಕೊಂಡು ಫುಟ್ಪಾತ್ನಲ್ಲಿ ಎಳೆದುಕೊಂಡು ಹೋಗಿ ವಿಕೃತಿ ಮರೆದಿದ್ದಾರೆ.
Barbaric A mentally unstable old man Madanlal beaten, hair chopped in full public glare over suspicision of desecrating idol at temple in Neemuch @ndtv @ndtvindia @manishndtv @GargiRawat @DGP_MP @ChouhanShivraj @vinodkapri pic.twitter.com/J0PMgbgam7
— Anurag Dwary (@Anurag_Dwary) July 17, 2021
ನೀಮುಚ್ನ ದೇವಸ್ಥಾನವೊಂದರ ದೇವರ ವಿಗ್ರಹ ತುಂಡಾಗಿದ್ದು, ಅದನ್ನು ಕಮಲ್ ದಾಸ್ ಎಂಬ ಮಾನಸಿಕ ಅಸ್ವಸ್ಥನೇ ಮಾಡಿದ್ದಾರೆ ಎಂಬುದು ಯುವಕರ ಆರೋಪ. ಆದರೆ, ಈ ಆರೋಪಕ್ಕೆ ಯಾವುದೇ ಸಾಕ್ಷಿಗಳೂ ದೊರೆತಿಲ್ಲ. ಇದೇ ಆರೋಪದಲ್ಲಿ ಆತನನ್ನು ಸಾರ್ವಜನಿಕವಾಗಿ ಥಳಿಸಲಾಗಿದೆ.
ಈ ಘಟನೆ ನಡೆಯುತ್ತಿದ್ದಾಗ ಸುತ್ತಲೂ ನೂರಾರು ಜನರು ನಿಂತು ನೋಡುತ್ತಿದ್ದರು. ಆದರೆ, ಯಾರೂ ಆ ಯುವಕನ್ನು ತಡೆಯಲು ಹೋಗಿಲ್ಲ. ಈ ಹಲ್ಲೆ ವೇಳೆ ವೃದ್ಧಿನ ಒಂದು ಕೈ ಮುರಿದು ಹೋಗಿದೆ. ಈ ವಿಡಿಯೋ ನೋಡಿದ ಪೊಲೀಸರು ಕೇಸ್ ದಾಖಲಿಸಿಕೊಂಡು, ವಿಡಿಯೋದಲ್ಲಿರುವ ಯುವಕರನ್ನು ವಿಚಾರಣೆ ನಡೆಸುತ್ತಿದ್ದಾರೆ. ಕಾನೂನನ್ನು ಕೈಗೆ ತೆಗೆದುಕೊಳ್ಳಲು ಯಾರಿಗೂ ಅವಕಾಶವಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Viral Video: ಈ ಮಕ್ಕಳ ಫೈಟಿಂಗ್ ಮುಂದೆ WWE ಶೋ ಕೂಡ ವೇಸ್ಟ್; ಸುಳ್ಳೆನಿಸಿದರೆ ಈ ವಿಡಿಯೋ ನೋಡಿ…
ಇದನ್ನೂ ಓದಿ: Viral Video: ಕಂಠಪೂರ್ತಿ ಕುಡಿದು ಬೈಕ್ ಓಡಿಸಿದ ಪುಣ್ಯಾತ್ಮ ಏನೆಲ್ಲ ಮಾಡಿದ ಗೊತ್ತಾ?; ವೈರಲ್ ವಿಡಿಯೋ ಇಲ್ಲಿದೆ
(Shocking video shows youths thrashing elderly man in Madhya Pradesh Neemuch for breaking Idol at a Temple)