Viral Video : ಈ ಚಳಿಯಲ್ಲಿ ಚಹಾ ಬೇಕೆನ್ನಿಸಿತೇ ಹುಲಿರಾಯ? ಹೀಗೆಲ್ಲ ಚಹಾ ತೋಟಕ್ಕೆ ಬಂದು ಓಡಾಡಿದರೆ ಚಹಾ ಹೋಗಲಿ ಚಹಾದ ಸ್ವಾದ ಹೇಗಿರುತ್ತದೆ ಎನ್ನುವುದೂ ನಿನಗೆ ಗೊತ್ತಾಗದು. ಚಹಾದ ಎಲೆಗಳನ್ನು ಒಣಗಿಸುವ ತನಕ, ಪುಡಿ ಮಾಡುವ ತನಕ, ಒಲೆಹೂಡಿ ನೀರಿನೊಳಗೆ ಅದನ್ನು ಕುದಿಸಿ ಹಾಲು ಸಕ್ಕರೆ ಹಾಕುವ ತನಕ ಮತ್ತು ಸೋಸಿ ಕಪ್ಪಿಗೆ ಬೀಳುವತನಕ ಕಾಯುವ ತಾಳ್ಮೆ ಶಕ್ತಿ ಇದೆಯೇ ಒಂದು ಕಪ್ಗಾಗಿ?
Here is a majestic tiger in a tea estate. Some go to Tiger Reserves in Safari, number of times & don’t spot one & some are lucky to have such a grandeur view.
Via @Mano_Wildlife pic.twitter.com/NN73pVRMK2— Susanta Nanda IFS (@susantananda3) February 2, 2023
ಹೀಗೆ ಕೇಳಬೇಕೆನ್ನಿಸುತ್ತಿದೆ ಈ ಹುಲಿ ಹೀಗೆ ಚಹಾತೋಟದಲ್ಲಿ ಓಡಾಡುತ್ತಿರುವುದನ್ನು ನೋಡಿದರೆ. ಆಗಾಗ ವನ್ಯಜೀವಿಗಳ ಕುರಿತಾದ ವಿಡಿಯೋ ಟ್ವೀಟ್ ಮಾಡುವ ಐಪಿಎಸ್ ಅಧಿಕಾರಿ ಸುಸಾಂತ ನಂದಾ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋ ಅನ್ನು ಮನೋ ಎನ್ನುವವರು ಚಿತ್ರೀಕರಿಸಿದ್ದಾರೆ.
ಇದನ್ನೂ ಓದಿ : ನನಗೂ ಹಾಲು ಕೊಡು; ಮರಿಜಾಗ್ವಾರ್ಗೆ ಹಾಲು ಕುಡಿಸಲು ಬಿಡದ ಮರಿಹುಲಿ
ಈತನಕ 1.6 ಲಕ್ಷ ಜನರು ನೋಡಿದ್ದಾರೆ. ಸುಮಾರು 3,000 ಜನರು ಇಷ್ಟಪಟ್ಟಿದ್ದಾರೆ. 2006ರ ಹುಲಿಗಣತಿಯ ಪ್ರಕಾರ ಭಾರತದಲ್ಲಿ ಸುಮಾರು 1,411 ಹುಲಿಗಳು ಇದ್ದವು. 2018ರ ಹೊತ್ತಿಗೆ 2,967. ಮಧ್ಯಪ್ರದೇಶದಲ್ಲಿ 526 ಹುಲಿಗಳಿದ್ದು ಇಡೀ ಭಾರತದಲ್ಲಿಯೇ ಹೆಚ್ಚು ಹುಲಿಗಳು ವಾಸಿಸುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 422 ಹುಲಿಗಳನ್ನು ಹೊಂದಿರುವ ಕರ್ನಾಟಕ ಎರಡನೇ ಸ್ಥಾನ, ಮೂರನೇ ಸ್ಥಾನದಲ್ಲಿ ಉತ್ತರಾಖಂಡ.
ಇದನ್ನೂ ಓದಿ : ‘ನಿನ್ನಂತೆಯೇ ಜಿಗಿಯುತ್ತಿದ್ದೇನೆ ಈಗಲಾದರೂ ಬಾ’ ಮೊಲವನ್ನು ಆಟಕ್ಕೆ ಕರೆಯುತ್ತಿರುವ ನಾಯಿಮರಿ
ಮಧ್ಯಪ್ರದೇಶದ ಕಾನ್ಹಾ, ಬಾಂಧವಗಢ, ಪೆಂಚ್, ಸತ್ಪುರ್, ಪನ್ನಾ, ಸಂಜಯ ದುಬ್ರಿ ಪ್ರದೇಶಗಳಲ್ಲಿ ಪ್ರತೀ ವರ್ಷ 250 ಮರಿಗಳು ಹುಟ್ಟುತ್ತವೆ. ಮೊದಲು ಚಿರತೆಗಳು ಚಹಾ ಕುಡಿಯಲು ಬಂದವು, ಈಗ ಹುಲಿಗಳು? ಎಂದು ಕೇಳುತ್ತಿದ್ದಾರೆ ನೆಟ್ಮಂದಿ. ಇದು ಯಾವ ಚಹಾ ತೋಟಕ್ಕೆ ಬಂದಿದೆ ಎಂದು ಅನೇಕರು ಕೇಳಿದ್ದಾರೆ.
ಈಗ ಚಹಾ ತೋಟಕ್ಕೆ ಬಂದ ಈ ಹುಲಿರಾಯ ಚಹಾ ಆಗುವ ತನಕ ಕಾಯುವನೋ ಅಥವಾ ಇಲ್ಲವೋ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:30 am, Fri, 3 February 23