ಹಾಲೋವೀನ್​! ಇಲ್ಲಿ ಏನೇ ಆದರೂ ಹೋದರೂ ಎಲ್ಲವೂ ಮಜಾನೇ

Halloween : ಫೋಟೋ ತೆಗೆಸಿಕೊಳ್ಳುವ ಭರದಲ್ಲಿ ಈ ಅವಸ್ಥೆ ಉಂಟಾಗಿದೆ. ನೀವೀಗ ಈ ಕುಂಬಳಕಾಯಿಗೆ ಹಣ ಪಾವತಿಸಲೇಬೇಕು ಮೇಡಮ್​ ಎಂದು ಕಾಲೆಳೆಯುತ್ತಿದ್ದಾರೆ ನೆಟ್ಟಿಗರು.

ಹಾಲೋವೀನ್​! ಇಲ್ಲಿ ಏನೇ ಆದರೂ ಹೋದರೂ ಎಲ್ಲವೂ ಮಜಾನೇ
Woman Sits On Halloween Pumpkin For Photo But This Funny Thing Happens
Updated By: ಶ್ರೀದೇವಿ ಕಳಸದ

Updated on: Oct 31, 2022 | 2:23 PM

Viral Video : ಸಾಮಾಜಿಕ ಜಾಲತಾಣಗಳ ತುಂಬಾ ಹಾಲೋವೀನ್​ ಹವಾ. ಚಿತ್ರವಿಚಿತ್ರ, ಭಯಾನಕ ವೇಷಭೂಷಣ ಧರಿಸಿ, ಅಲಂಕಾರ ಮಾಡಿಕೊಂಡು ವಿಡಿಯೋ, ಫೋಟೋ ಅಪ್​ಲೋಡ್​ ಮಾಡುವಲ್ಲಿ ಜನ ನಿರತರಾಗಿದ್ದಾರೆ. ಈಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಈ ಯುವತಿ ದೊಡ್ಡದೊಂದು ಕುಂಬಳಕಾಯಿಯನ್ನು ಹಿಡಿದುಕೊಂಡು ಫೋಟೋ ತೆಗೆಸಿಕೊಳ್ಳುವುದರಲ್ಲಿದ್ದಳು. ಆದರೆ ಅಷ್ಟರಲ್ಲಿ ಆಕೆ ಕುಳಿತಿದ್ದ ಇನ್ನೂ ದೊಡ್ಡ ಕುಂಬಳಕಾಯಿ ಒಡೆದೇ ಹೋಗಿದೆ!

 

ಕುಂಬಳಕಾಯಿಯ ತಿರುಳನ್ನು ತೆಗೆದು ಅದಕ್ಕೆ ಕಣ್ಣು ಮೂಗು ಕೆತ್ತಿ ಅವುಗಳಲ್ಲಿ ದೀಪಗಳನ್ನು ಉರಿಸುವುದನ್ನು ಅನೇಕ ಫೋಟೋ ವಿಡಿಯೋಗಳಲ್ಲಿ ನೋಡಿದ್ದೀರಿ. ಕುಂಬಳಕಾಯಿ ಫಲವತ್ತತೆಯನ್ನು ಸಾಂಕೇತಿಸುತ್ತದೆ. ಹಾಗಾಗಿ ಹಬ್ಬದ ಮುನ್ನಾದಿನ ಹೊಲಗದ್ದೆಗಳಿಗೆ ತೆರಳಿ ಜನ ಕುಂಬಳಕಾಯಿಯನ್ನು ಖರೀದಿಸಲು ಬರುತ್ತಾರೆ. ಹಾಗೆಯೇ ಈ ಯುವತಿಯೂ ಇಲ್ಲಿ ಬಂದಿದ್ದಾಳೆ. ಆದರೆ ಅಚಾನಕ್​ ಆಗಿ ಹೀಗೆಲ್ಲ ಆಗಿಹೋಗಿದೆ.

ಈ ವಿಡಿಯೋ ಅನ್ನು ‘buitengebieden’ ಟ್ವೀಟ್​ ಮಾಡಿದೆ. ಇಲ್ಲಿ ಸಾಮಾನ್ಯವಾಗಿ ತಮಾಷೆಯ ವಿಡಿಯೋಗಳನ್ನು ಅಪ್​ಲೋಡ್ ಮಾಡಲಾಗುತ್ತದೆ. ಪ್ರಸ್ತುತ ಪುಟದಿಂದ ಹಂಚಿಕೊಳ್ಳಲಾದ ಈ ವಿಡಿಯೋ ಅನ್ನು 7 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. 13,000 ಕಕ್ಊ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ.

ನೆಟ್ಟಿಗರು ತಮಾಷೆಯಿಂದ ಪ್ರತಿಕ್ರಿಯಿಸಿದ್ಧಾರೆ. ಒಬ್ಬರು ಬಮ್​ಕಿನ್​ ಎಂದಿದ್ದಾರೆ. ನೀವದನ್ನು ಖರೀದಿಸದಿದ್ದರೂ ಹಣ ಪಾವತಿಸಲೇಬೇಕಾಗುತ್ತದೆ ಎಂದಿದ್ದಾರೆ ಮತ್ತೊಬ್ಬರು. ಅನೇಕರು ತಾವು ಅಲಂಕರಿಸಿ, ಆಯ್ಕೆ ಮಾಡಿಕೊಂಡ ಕುಂಬಳಕಾಯಿಗಳ ಫೋಟೋ ವಿಡಿಯೋ ಟ್ವೀಟ್​ ಮಾಡಿ ಹಬ್ಬದ ಶುಭಾಶಯ ಕೋರಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:22 pm, Mon, 31 October 22