Viral Video : ತಂತ್ರಜ್ಞಾನದ ನಾಗಾಲೋಟ ದಿನವೂ ಅಚ್ಚರಿಗಳ ಮೇಲೆ ಅಚ್ಚರಿಯನ್ನು ಹುಯ್ಯುತ್ತಲೇ ಇರುತ್ತದೆ ದಿನಾ ಬೆಳಗ್ಗೆ ದೋಸೆ ಹುಯ್ದಂತೆ. ಮಾರುಕಟ್ಟೆಗೆ ಬರುತ್ತಿರುವ ಯಂತ್ರಗಳಂತೂ ಮನುಷ್ಯನಿಗೆ ಹೊಸ ಆವಿಷ್ಕಾರಗಳ ಗರಿಗರಿಯಾದ ರುಚಿರುಚಿಯಾದ ಪರಿಹಾರಗಳನ್ನು ತೋರಿಸುತ್ತಲೇ ಇರುತ್ತವೆ. ಈಗಿಲ್ಲಿ ಚೆನ್ನೈನ ಎವೊಚೆಫ್ ಎಂಬ ಸ್ಟಾರ್ಟ್ಅಪ್ ಕಂಪೆನಿ ಅಡುಗೆಮನೆಗೆ ಸಂಬಂಧಿಸಿದ ಪ್ರಿಂಟಿಂಗ್ ಮಶೀನ್ ಪರಿಚಯಿಸಿದೆ. ಅಡುಗೆಮನೆ? ಗೊಂದಲ ಯಾರಿಗೂ ಸಹಜ. ಒಮ್ಮೆ ಈ ವಿಡಿಯೋ ನೋಡಿ. ನಿಮ್ಮನ್ನು ದಾಸ ಅಥವಾ ದಾಸೀತನ ಮಾಡಿಕೊಳ್ಳುವ ಎಲ್ಲ ಗುಣಗಳೂ ಇದಕ್ಕಿವೆ ಅನ್ನಿಸದೇ ಇರದು!
Dosa printer ? pic.twitter.com/UYKRiYj7RK
ಇದನ್ನೂ ಓದಿ— Samantha /சமந்தா (@NaanSamantha) August 23, 2022
ಈ ಪ್ರಿಂಟರ್ನ ಒಡಲಿಗೆ ಹಿಟ್ಟು ಹುಯ್ದರೆ, ಗರಿಗರಿಯಾದ ದೋಸೆಗಳು ಒಂದೇ ನಿಮಿಷದಲ್ಲಿ ನಿಮ್ಮ ಪ್ಲೇಟನ್ನು ಅಲಂಕರಿಸುತ್ತವೆ. ಎಷ್ಟು ದಪ್ಪ ಬೇಕು ಎಷ್ಟು ತೆಳು ಬೇಕು ಎನ್ನುವುದನ್ನು ಡಿಜಿಟಲೈಸ್ಡ್ ಬಟನ್ ಮೂಲಕ ಸೆಟ್ ಮಾಡಿಕೊಳ್ಳಲು ಇಲ್ಲಿ ಅವಕಾಶವಿದೆ. ಹಾಗೆಯೇ ತುಪ್ಪ ಸವರಬೇಕಾ? ಬೆಣ್ಣೆ ಸವರಬೇಕಾ ಅಥವಾ ಚೀಸ್ ಹಾಕಬೇಕಾ? ನಿಮ್ಮ ಆಯ್ಕೆಯಂತೆ ಕಸ್ಟಮೈಸ್ ಮಾಡಿಕೊಳ್ಳಬಹುದು.
ಸಾಕಷ್ಟು ಮಂದಿ ಸಾಕಷ್ಟು ನಮೂನೆಯಾಗಿ ಪ್ರತಿಕ್ರಿಯಿಸಿದ್ದಾರೆ. ಪರಂಪರಾಗತ ಮತ್ತು ಮನೆರುಚಿಯ ಘಮವನ್ನು ಇದು ತಂದುಕೊಡುವುದೆ? ಎಂದು ಕೆಲವರು ಪ್ರಶ್ನಿಸಿದ್ದಾರೆ. ಇದೊಂದು ಪ್ರಯೋಜನವಿಲ್ಲದ ಆವಿಷ್ಕಾರ. ದೋಸೆ ಹುಯ್ಯುವುದು ದೊಡ್ಡ ವಿಷಯವಲ್ಲ, ದೋಸೆಯ ಹಿಟ್ಟು ತಯಾರಿಸುವುದರಲ್ಲಿ ಪಾಕದ ಹದ ಅಡಗಿರುವುದು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
Evochef Dosa Maker ಎಂದರೆ EC Flip ಆನ್ಲೈನ್ನಲ್ಲಿ ಇದರ ಬೆಲೆ ರೂ. 15,999
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:41 am, Thu, 25 August 22