Farmer : ‘ಹಸು ಸಾಕಿದ್ರೆ ಹೆಣ್ಣು ಕೊಡಲ್ಲ ಅಂತೀರಾ? ಐಟಿ ಕಂಪೆನಿಗೆ (IT Company) ಹೋಗಿ ಕೆಲಸ ಮಾಡಿದರೆ ರೂ. 50,000. ಕೃಷಿ ಮಾಡಿದರೆ ರೂ. 1 ಲಕ್ಷ. ಆದರೆ ನಮ್ಮ ಜನಕ್ಕೆ ಟಿಪ್ಟಾಪ್ ಆಗಿ ರೆಡಿಯಾಗಿ ಆಫೀಸಿಗೆ ಹೋದರೇ ಸರಿ. ಬರುವ ಆದಾಯ ಮುಖ್ಯ ಅಲ್ಲ. ಐಟಿಯಲ್ಲಿ 20 ವರ್ಷ ಕೆಲಸ ಮಾಡಿದರೆ ಬಿಪಿ ಶುಗರ್ ಗ್ಯಾರಂಟಿ. ಅಲ್ಲಿರುವ ಕೆಲಸದ ಒತ್ತಡಕ್ಕೆ ಮನುಷ್ಯ ಏನಾಗ್ತಾನೆ ಅಂತ ಅವನಿಗೇ ಗೊತ್ತು. ಹೊರಗೆ ನಿಂತು ನೋಡುವವರಿಗೆ ಇದು ಅರ್ಥವಾಗುವುದಿಲ್ಲ. ಅದೇ ಒಂದು ವರ್ಷ ಕೃಷಿಯಲ್ಲಿ ತೊಡಗಿಕೊಂಡರೆ 2 ವರ್ಷ ಆಯಸ್ಸು ಹೆಚ್ಚುತ್ತದೆ. ಐಟಿ ಕೆಲಸ ಯಾರಿಗೆ ಬೇಕು?’ ಯುವಕನೊಬ್ಬ ಮಾಡಿದ ರೀಲ್ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರು ಪರ ವಿರೋಧದ ಚರ್ಚೆಯಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ : Viral Video: ಮೆಟ್ರೋ ಕೋಚ್ನಲ್ಲಿ ಪಲ್ಟಿ ಹೊಡೆದ ಯುವತಿ; ಬಿಸಿಯೇರಿದ ಚರ್ಚೆ
ಈ ವಿಡಿಯೋ ಅನ್ನು ಕೃಷಿ ಮಾರ್ಕೆಟ್ ಚಾನೆಲ್ ಎಂಬ ಇನ್ಸ್ಟಾಗ್ರಾಂ ಪುಟದಲ್ಲಿ ಜು. 9ರಂದು ಪೋಸ್ಟ್ ಮಾಡಲಾಗಿದೆ. ಈತನಕ 3.2 ಲಕ್ಷ ಜನರು ಲೈಕ್ ಮಾಡಿದ್ದಾರೆ. 5 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.
‘ಎಷ್ಟೇ ದುಡಿದರೂ ಹಸು ಸಾಕುವುದರಲ್ಲಿ ನೆಮ್ಮದಿ ಯಾವುದರಲ್ಲಿಯೂ ಇಲ್ಲ ಗುರು ಎಂದಿದ್ದಾರೆ ಕೆಲವರು. ಪ್ರ್ಯಾಕ್ಟಿಕಲ್ ಆಗಿ ಯೋಚಿಸು ಅಣ್ಣಾ, ಐಟಿಯಲ್ಲಿ ಕೆಲಸ ಮಾಡಿದರೆ ಪ್ರತೀ ತಿಂಗಳು ಹಣ ಅಕೌಂಟಿಗೆ ಬಂದು ಬೀಳತ್ತೆ. ಒಂದು ವಾರ ಹುಷಾರು ತಪ್ಪಿದರೂ ಪೇಯ್ಡ್ ಲೀವ್ಸ್ ಸಿಗ್ತಾವೆ, ಜೊತೆಗೆ ಸ್ಯಾಲರಿನೂ ಬರುತ್ತೆ. ವೀಕೆಂಡ್ ರಜೆ. ಒಂದು ವಾರ ಟೂರ್ ಹೋಗಬಹುದು. ಅದೇ ಹಸು ಸಾಕಿದರೆ ಇದೆಲ್ಲ ಸಿಗುತ್ತಾ? ಮಳೆ ಬರಲಿಲ್ಲ ಅಂದ್ರೆ ಎಲ್ಲಾ ನಷ್ಟ. ಜಾಸ್ತಿ ಬಂದ್ರೂ ಕಷ್ಟ. ಹಸುಗಳಿಗೆ ರೋಗ ಬಂದ್ರೆ ಇನ್ನೂ ಕಷ್ಟ. ಹೆಣ್ಣು ಕೊಡುವವರು ಕೂಡ ನಮ್ಮ ಮಗಳು ಹಾಯಾಗಿರಲಿ ಅಂತಾನೇ ಯೋಚನೆ ಮಾಡ್ತಾರಲ್ವಾ? ಕೃಷಿ ಬಗ್ಗೆ ತಪ್ಪಾಗಿ ಹೇಳ್ತಿಲ್ಲ ಆದರೆ ಕೃಷಿಯಲ್ಲಿ ರಿಸ್ಕ್ ಇರುತ್ತೆ ಅಂತ ಹೇಳ್ತಿದೀನಿ’ ಎಂದಿದ್ದಾರೆ ಒಬ್ಬರು.
ಇದನ್ನೂ ಓದಿ : Viral Video: ಮುಂಬೈ; ತನ್ನ ಬೆಕ್ಕನ್ನು ಬೆನ್ನಟ್ಟಿದ್ದಕ್ಕಾಗಿ ನೆರೆಮನೆಯ ನಾಯಿಯ ಮೇಲೆ ಎಸಿಡ್ ಎರಚಿದ ಮಹಿಳೆಯ ಬಂಧನ
ಬಿಡು ಅಣ್ಣಾ ಹೆಣ್ಣಮಕ್ಕಳಿಗೆ ಕೊಬ್ಬು ಜಾಸ್ತಿ ರೈತರನ್ನು ಮದುವೆಯಾಗೋದಕ್ಕೆ ಎಂದು ಒಂದಿಷ್ಟು ಜನ ಹೇಳಿದ್ದಾರೆ. ನಿಮ್ಮ ಈ ರೀಲ್ಗೆ ಕೋಟಿ ನಮಸ್ಕಾರಗಳು. ಇದನ್ನು ನೋಡಿಯಾದರೂ ಹೆತ್ತವರು ವಿಚಾರ ಮಾಡಬೇಕು ಎಂದು ಮತ್ತೊಂದಿಷ್ಟು ಜನ ಹೇಳಿದ್ದಾರೆ. ನನ್ನದೂ ಇದೇ ಪ್ಲ್ಯಾನ್ ನಾಲ್ಕು ವರ್ಷ ಐಟಿ ಕೆಲಸ ಮಾಡಿ 3 ಗೋಮಾತೆಯರನ್ನುಸಾಕುತ್ತೀನಿ ಎಂದಿದ್ದಾರೆ ಒಬ್ಬರು.
ಇದನ್ನೂ ಓದಿ : Viral Video: ನನ್ನದು ವಿಶೇಷ ಕಣ್ಣು ಗೊತ್ತಾ?; ದಿಟ್ಟ ಪುಟ್ಟಿಯ ದೃಷ್ಟಿಪ್ರಯಾಣ
ಹುಡುಗಿಯರು ಐಟಿ ಉದ್ಯೋಗಿಗಳನ್ನು ಕೂಡ ಈಗ ಒಪ್ಪಲ್ಲ ಈಗೀಗ, ಡ್ರಗ್ ಡೀಲ್ ಮಾಡಿ ತಿಂಗಳಿಗೆ ರೂ. 15 ಕೋಟಿ ಗಳಿಸುವವರು ಬೇಕಾಗಿದ್ದಾರೆ ಎಂದು ಒಬ್ಬರು ಹೇಳಿದ್ದಾರೆ ಒಬ್ಬರು. ಹುಡುಗಿ ಒಪ್ಕೊಂಡ್ರೂ ಅವರ ಅಪ್ಪ ಅಮ್ಮ ಒಪ್ಪಲ್ಲ ಬಿಡು ಅಣ್ಣಾ, ನಮ್ಮ ಜನ ಸೂಟ್ ಹಾಕ್ಕೊಂಡು ಬಾರ್ತೂಮ್ ಕ್ಲೀನ್ ಮಾಡಿದ್ರೂ ಸಮಸ್ಯೆ ಇಲ್ಲ. ಆದ್ರೆ ಪಂಚೆ ಕಟ್ಕೊಂಡು ಕೆಲಸ ಮಾಡೋ ಹುಡುಗ ಮಾತ್ರ ಬೇಡ ಅಂತಾರೆ. ಕೃಷಿ ಸಹ ಒಂದು ಉನ್ನತ ಮಟ್ಟದ ಉದ್ಯಮ ಅನ್ನೋ ಟೈಮ್ ಬಂದೇ ಬರುತ್ತೆ ಎಂದಿದ್ದಾರೆ ಮತ್ತೊಬ್ಬರು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:04 pm, Sat, 19 August 23