Viral Video: ಟೆರೇಸ್‌ನಲ್ಲಿ ಕಾರಿನಂತೆ ಕಾಣುವ ನೀರಿನ ಟ್ಯಾಂಕ್, ವಿಡಿಯೋ ವೈರಲ್

ಮನೆ ಕಟ್ಟುವುದು ಎಲ್ಲರ ಕನಸು. ಹೀಗಾಗಿ ಸಾಲ ಮಾಡಿಯಾದರೂ ಸರಿಯೇ, ಸ್ವಂತ ಸೂರು ಕಟ್ಟಿಕೊಳ್ಳಲು ಬಯಸುತ್ತಾರೆ. ಕೆಲವರು ತಮ್ಮ ಮನೆಯ ವಿನ್ಯಾಸಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಹೊಸದ್ದನ್ನು ಏನಾದರೂ ಮಾಡಲು ಬಯಸುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮನೆಯ ಮಾಲೀಕರೊಬ್ಬರು ಕಾರನ್ನು ತಮ್ಮ ಮೂರನೇ ಮಹಡಿಯಲ್ಲಿ ನಿಲ್ಲಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾ ಬಳಕೆದಾರರು ಇದೇನು ಅಸಲಿ ಕಾರೋ ಎಂದು ಕಾಮೆಂಟ್ ಗಳ ಸುರಿಮಳೆ ಗೈದಿದ್ದಾರೆ.

Viral Video: ಟೆರೇಸ್‌ನಲ್ಲಿ ಕಾರಿನಂತೆ ಕಾಣುವ ನೀರಿನ ಟ್ಯಾಂಕ್, ವಿಡಿಯೋ ವೈರಲ್
ವೈರಲ್​​ ವಿಡಿಯೋ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 16, 2024 | 12:02 PM

ಶ್ರೀಮಂತ ವ್ಯಕ್ತಿಗೆ ಮನೆ ಕಟ್ಟೋದು, ಕಾರು ಖರೀದಿಸುವುದು ದೊಡ್ಡ ವಿಷಯವೇ ಅಲ್ಲ. ಅದೇ ಮಧ್ಯಮ ವರ್ಗದ ಜನರಿಗೆ ತಮ್ಮದೇ ಸ್ವಂತ ಸೂರು ಕಟ್ಟಿಕೊಳ್ಳುವುದು ಜೀವಮಾನದ ಕನಸಾಗಿರುತ್ತದೆ. ಸ್ವಂತ ಮನೆಗಾಗಿ ರಾತ್ರಿ ಹಗಲೆನ್ನದೇ ಕಷ್ಟ ಪಡುವವರನ್ನು ನೋಡಿರಬಹುದು. ತಾನು ಕಟ್ಟುವ ವಿಭಿನ್ನವಾಗಿರಬೇಕೆಂದು ಎಂದು ಬಯಸುವವರು ಇದ್ದಾರೆ. ಇಲ್ಲೊಬ್ಬ ವ್ಯಕ್ತಿಯು ತನ್ನ ಮನೆಯ ಮೂರನೇ ಮಹಡಿಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕಾರನ್ನು ನಿಲ್ಲಿಸಿದ್ದಾರೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.

ಇದೇ ವೇಳೆ ನೆಟ್ಟಿಗರಿಗೆ ಈ ಕಾರು ಮನೆಯ ಮೇಲೆ ಹೇಗೆ ಇಡಲಾಯಿತು ಎನ್ನುವ ಗೊಂದಲ ಮೂಡಿದೆ. ಆದರೆ ನೀವು ಕೂಡ ಇದು ನಿಜವಾದ ಕಾರು ಎಂದುಕೊಂಡರೆ ನಿಮ್ಮ ಊಹೆ ನಿಜಕ್ಕೂ ತಪ್ಪು. ಮನೆಯ ಟೆರೇಸ್‌ನಲ್ಲಿ ಸ್ಕಾರ್ಪಿಯೋ ಕಾರಿನಂತೆ ಕಾಣುವ ನೀರಿನ ಟ್ಯಾಂಕ್ ವಿನ್ಯಾಸಗೊಳಿಸಲಾಗಿದೆ. ಈ ವಿಡಿಯೋವನ್ನು vicky s 11 lovers ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಮನೆಯ ಟೆರೇಸ್‌ನಲ್ಲಿ ನಿರ್ಮಿಸಲಾದ ಸ್ಕಾರ್ಪಿಯೋ ಕಾರಿನಂತೆ ಕಾಣುವ ನೀರಿನ ಟ್ಯಾಂಕ್ ವಿನ್ಯಾಸಗೊಳಿಸಲಾಗಿದೆ. ಇದಕ್ಕೆ ಇಟ್ಟಿಗೆ ಮತ್ತು ಕಲ್ಲಿನ್ನು ಬಳಸಲಾಗಿದೆ.

ಇದನ್ನೂ ಓದಿ: ಬೇಕು ಬೇಕಂತಲೇ ವಿದೇಶಿ ಪ್ರವಾಸಿಗನ ಮೈ ಮೇಲೆ ಬಿದ್ದು ರೀಲ್ಸ್‌ ಮಾಡಿದ ಯುವತಿ; ವಿಡಿಯೋ ವೈರಲ್‌

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಆದರೆ ಈ ಟ್ಯಾಂಕ್ ನೋಡುವುದಕ್ಕೆ ಸ್ಕಾರ್ಪಿಯೋ ಕಾರಿನಂತೆಯೇ ಇದ್ದು, ಮುಂಭಾಗದಲ್ಲಿರುವ ಗ್ರಿಲ್‌, ಕ್ರೋಮ್ ಫಿನಿಶ್ ಹಾಗೂ ಮಹೀಂದ್ರಾ ಲೋಗೋ ನೋಡಿದರೆ ಇದು ನಿಜವಾದ ಕಾರು ಎನ್ನುವಂತಿದೆ. ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ನೆಟ್ಟಿಗರು ಮನೆ ಮಾಲೀಕನ ಐಡಿಯಾಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ಬಳಕೆದಾರರೊಬ್ಬರು, ‘ಇದು ನನ್ನ ಕನಸು’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಈ ವಿಡಿಯೋ ಎಡಿಟ್ ಮಾಡಲಾಗಿದೆ’ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು, ‘ಈ ಮನೆ ಮಾಲೀಕನ ಐಡಿಯಾವನ್ನು ಮೆಚ್ಚಿದೆ ಎಂದಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಜನಪರ ಯೋಜನೆಗಳನ್ನು ಆಗಾಗ ಬದಲಾಯಿಸುತ್ತಿರಬೇಕಾಗುತ್ತದೆ: ಎನ್ ಎಸ್ ಬೋಸರಾಜು
ಜನಪರ ಯೋಜನೆಗಳನ್ನು ಆಗಾಗ ಬದಲಾಯಿಸುತ್ತಿರಬೇಕಾಗುತ್ತದೆ: ಎನ್ ಎಸ್ ಬೋಸರಾಜು
10 ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಗೇಟ್​ಪಾಸ್ ಯಾರಿಗೆ?
10 ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಗೇಟ್​ಪಾಸ್ ಯಾರಿಗೆ?
ಶನಿ ವ್ರತದ ಹಿಂದಿನ ರಹಸ್ಯ ಹಾಗೂ ಫಲಗಳ ವಿವರ
ಶನಿ ವ್ರತದ ಹಿಂದಿನ ರಹಸ್ಯ ಹಾಗೂ ಫಲಗಳ ವಿವರ
ವೃಶ್ಚಿಕ ರಾಶಿಗೆ ಸೂರ್ಯ ಪ್ರವೇಶ, ಗಜಕೇಸರಿ ಯೋಗ, 12 ರಾಶಿಗಳ ಫಲಾಫಲ ಇಲ್ಲಿದೆ
ವೃಶ್ಚಿಕ ರಾಶಿಗೆ ಸೂರ್ಯ ಪ್ರವೇಶ, ಗಜಕೇಸರಿ ಯೋಗ, 12 ರಾಶಿಗಳ ಫಲಾಫಲ ಇಲ್ಲಿದೆ
ಒಂದೇ ಬೈಕ್​ನಲ್ಲಿ 8 ಜನ, ಜೊತೆಗೊಂದು ಹಾಸಿಗೆ; ಪೊಲೀಸರೇ ಕಂಗಾಲು!
ಒಂದೇ ಬೈಕ್​ನಲ್ಲಿ 8 ಜನ, ಜೊತೆಗೊಂದು ಹಾಸಿಗೆ; ಪೊಲೀಸರೇ ಕಂಗಾಲು!
ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್
ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!