AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಬಾಡಿಗೆ ಭದ್ರತಾ ಠೇವಣಿ ಹೆಸರಿನಲ್ಲಿ ನಡೆಯುತ್ತಿದೆ ದೊಡ್ಡ ಹಗರಣ, ವೈರಲ್ ಆಯ್ತು ಪೋಸ್ಟ್

ರಾಜ್ಯ ರಾಜಧಾನಿಗೆ ಉದ್ಯೋಗ ಅರಸುತ್ತ ಬರುವ ಜನರೇ ಹೆಚ್ಚು. ಅದಲ್ಲದೇ ಇಲ್ಲಿ ಜೀವನ ನಡೆಸುವುದೇ ದುಬಾರಿ ಎನ್ನುವಂತಾಗಿದೆ. ಹೀಗಿರುವಾಗ ಟೆಕ್ ಉದ್ಯಮಿ ವರುಣ್ ಮಯ್ಯರವರು, ಬೆಂಗಳೂರಿನಲ್ಲಿ ಬಾಡಿಗೆದಾರರು ಎದುರಿಸುತ್ತಿರುವ ಬೆಳೆಯುತ್ತಿರುವ ಸಮಸ್ಯೆಯನ್ನು ಹೈಲೈಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಮನೆ ಮಾಲೀಕರಿಂದ ಬಾಡಿಗೆ ಭದ್ರತಾ ಠೇವಣಿಗಳಲ್ಲಿ 'ದೊಡ್ಡ ಹಗರಣ ನಡೆಯುತ್ತಿದೆ ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಗೆ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಮಾಡುವ ಮೂಲಕ ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಬಾಡಿಗೆ ಭದ್ರತಾ ಠೇವಣಿ ಹೆಸರಿನಲ್ಲಿ ನಡೆಯುತ್ತಿದೆ ದೊಡ್ಡ ಹಗರಣ, ವೈರಲ್ ಆಯ್ತು ಪೋಸ್ಟ್
ಪೋಸ್ಟ್​​​ ವೈರಲ್
ಸಾಯಿನಂದಾ
| Edited By: |

Updated on: Nov 16, 2024 | 5:34 PM

Share

ಮನೆ ಕಟ್ಟಿ ನೋಡು, ಮದ್ವೆ ಮಾಡಿ ನೋಡು ಅನ್ನೋ ಗಾದೆ ಮಾತಿದೆ. ಆದರೆ ಬೆಂಗಳೂರಿನಂತಹ ನಗರಗಳಲ್ಲಿ ಮನೆ ಬಾಡಿಗೆ ಪಡೆಯುವುದೇ ಕಷ್ಟವಾಗಿದೆ. ಆರ್ಥಿಕ ಸ್ಥಿತಿಗತಿಗೆ ತಕ್ಕಂತೆ ಮನೆ ಸಿಗುವುದಿಲ್ಲ, ಸಿಕ್ಕರೆ ದುಬಾರಿಯಾಗಿರುತ್ತದೆ. ಇದೀಗ ಬೆಂಗಳೂರಿನ ವ್ಯಕ್ತಿಯೊಬ್ಬರು, ಬಾಡಿಗೆದಾರರು ಮಾಯಾನಗರಿ ಬೆಂಗಳೂರಿನಲ್ಲಿ ಎದುರಿಸುತ್ತಿರುವ ಒಂದು ಸಮಸ್ಯೆಯನ್ನು ಹೈಲೈಟ್ ಮಾಡಿದ್ದಾರೆ. ಬಾಡಿಗೆ ಭದ್ರತಾ ಠೇವಣಿಗಳಲ್ಲಿ ‘ದೊಡ್ಡ ಹಗರಣ’ ವೊಂದು ನಡೆಯುತ್ತಿದೆ ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ವರುಣ್ ಮಯ್ಯ ಎಂಬ ಹೆಸರಿನ ವ್ಯಕ್ತಿಯು ತಮ್ಮ ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ‘ಬೆಂಗಳೂರಿನ ಅತಿದೊಡ್ಡ ಹಗರಣವೆಂದರೆ ನೀವು ಅಪಾರ್ಟ್ಮೆಂಟ್ ತೊರೆಯುತ್ತಿದ್ದಂತೆ ಭದ್ರತಾ ಠೇವಣಿಯನ್ನು ಬಾಡಿಗೆದಾರರಿಗೆ ಹಿಂತಿರುಗಿಸಬೇಕು. ಆದರೆ, ಅನೇಕ ಭೂಮಾಲೀಕರು ಠೇವಣಿ ಮೊತ್ತವಾಗಿ 10 ತಿಂಗಳಿಂದ ಒಂದು ವರ್ಷದ ಮೌಲ್ಯದ ಬಾಡಿಗೆಯನ್ನು ವಿಧಿಸುತ್ತಿದ್ದಾರೆ. ಯಾವುದೇ ಪುರಾವೆಗಳಿಲ್ಲದಿದ್ದರೂ “ಹಾನಿ” ಅಥವಾ ಯಾವುದನ್ನಾದರೂ ಕ್ಲೈಮ್ ಮಾಡಲು ಭದ್ರತಾ ಠೇವಣಿಯನ್ನು ನಿಮ್ಮಿಂದ ಪಡೆದುಕೊಳ್ಳುತ್ತಾರೆ. ನಾನು ಬಹುಶಃ 10 ಅಪಾರ್ಟ್‌ಮೆಂಟ್‌ಗಳಲ್ಲಿ ವಾಸವಾಗಿದ್ದೇನೆ. ಈ ಅಕ್ರಮ ಠೇವಣಿ ಪ್ರತಿ ಬಾರಿಯೂ ಸಂಭವಿಸಿದೆ’ ಎಂದು ಬರೆದುಕೊಂಡಿದ್ದಾರೆ.

ವರುಣ್ ಮಯ್ಯರವರ ಈ ಪೋಸ್ಟ್ 1.1 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಾಡಿಗೆದಾರರು ತಮ್ಮ ತಮ್ಮ ಅನುಭವಗಳನ್ನು ಕಾಮೆಂಟ್ ಮೂಲಕ ತಿಳಿಸಿದ್ದಾರೆ. ಬಳಕೆದಾರರೊಬ್ಬರು, ‘ಬೆಂಗಳೂರಿನಲ್ಲಿ ಭದ್ರತಾ ಠೇವಣಿಗಳು ಗಗನಕ್ಕೇರಿವೆ, ಅನೇಕ ಭೂಮಾಲೀಕರು ಈಗ 10-12 ತಿಂಗಳ ಬಾಡಿಗೆಗೆ ಮುಂಗಡವಾಗಿ ಬೇಡಿಕೆಯಿಡುತ್ತಿದ್ದಾರೆ. ಈ ಸಮಸ್ಯೆಯು ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಆದರೆ ಗುರುಗ್ರಾಮ್ ಮತ್ತು ಮುಂಬೈಯಂತಹ ಇತರ ನಗರಗಳಿಗೂ ವ್ಯಾಪಿಸಿದೆ’ ಎಂದಿದ್ದಾರೆ.

ಇದನ್ನೂ ಓದಿ: ‘ಬ್ರ್ಯಾಂಡ್ ಬೆಂಗಳೂರು’ ಥೀಮ್ ಗೆ ತದ್ವಿರುದ್ಧ ಬೆಂಗಳೂರ್ ರೋಡ್, ರಸ್ತೆಗುಂಡಿಗಳಿಂದ ವಾಹನಗಳು ಪಲ್ಟಿ, ವಿಡಿಯೋ ವೈರಲ್

ಮತ್ತೊಬ್ಬರು, ‘ಇದು ಬಹುತೇಕ ಸಂಪ್ರದಾಯದಂತೆ. ಕರ್ನಾಟಕ ಬಾಡಿಗೆ ನಿಯಂತ್ರಣ ಕಾಯಿದೆಯಡಿಯಲ್ಲಿ, ನೀವು ಸ್ಥಳವನ್ನು ಖಾಲಿ ಮಾಡಿದ 30 ದಿನಗಳೊಳಗೆ ಭೂಮಾಲೀಕರು ಠೇವಣಿಯನ್ನು ಹಿಂತಿರುಗಿಸಬೇಕು. ಹಾಗೂ ಈ ಠೇವಣಿಯಲ್ಲಿ ಯಾವುದೇ ಕಡಿತವಿದ್ದಲ್ಲಿ, ಅವರು ಕಾನೂನುಬದ್ಧವಾಗಿ ಹಾನಿ ಅಥವಾ ದುರಸ್ತಿಗಳ ವಿವರಗಳನ್ನು ಒದಗಿಸಬೇಕಾಗುತ್ತದೆ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ