ಸೇಫ್ಟಿ ಪಿನ್ (safety pin) ಇದು ಎಲ್ಲರಿಗೂ ಚಿರಪರಿಚಿತವಾದ ವಸ್ತು. ಏನಪ್ಪಾ ಇವ್ರು ಸೇಫ್ಟಿ ಪಿನ್ ಬಗ್ಗೆ ಮಾತಾಡ್ತಾ ಇದ್ದರಲ್ಲ, ಏನು ವಿಷ್ಯ ಇರಬಹುದು ಎಂದು ನೀವು ಅಂದುಕೊಳ್ಳಬಹುದು. ಸಾಮಾನ್ಯವಾಗಿ ಹೆಣ್ಣುಮಕ್ಕಳು ಸೀರೆ ಉಡುವಾಗ ಈ ಸೇಫ್ಟಿ ಪಿನ್ ತಪ್ಪದೇ ಬಳಸುತ್ತಾರೆ. ಅದಲ್ಲದೇ ಬಟ್ಟೆಗಳು ಹರಿದಾಗ ಅದನ್ನು ಜೋಡಿಸಲು ಈ ಪಿನ್ ಬೇಕೆ ಬೇಕು. ಇಷ್ಟೆಲ್ಲಾ ಉಪಯೋಗ ಹೊಂದಿರುವ ಈ ಸೇಫ್ಟಿ ಪಿನ್ ಮಾತ್ರ ಆಕಾರ, ವಿನ್ಯಾಸದಲ್ಲಿ ಬದಲಾವಣೆಯನ್ನು ಕಾಣದೇ ಹಾಗೆಯೇ ಉಳಿದಿದೆ ಎನ್ನುವುದು ಅಚ್ಚರಿ ಎನಿಸಬಹುದು. ನೂರ ಎಪ್ಪತ್ತು ವರ್ಷಗಳ ಹಿಂದೆ ಈ ಸೇಫ್ಟಿ ಪಿನ್ ಹೇಗಿತ್ತು, ಈಗ ಹೇಗಿದೆ ಎನ್ನುವ ಪೋಸ್ಟ್‌ವೊಂದು ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ.
@ThefFigen ಹೆಸರಿನ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿಕೊಳ್ಳಲಾಗಿದ್ದು, ಇದರಲ್ಲಿ ನಾಲ್ಕು ಸೇಫ್ಟಿ ಪಿನ್ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿರುವ ಸೇಫ್ಟಿ ಪಿನ್ ಚಿತ್ರದ ಕೆಳಗೆ 1849, 1900, 1960, 2025 ಎಂದು ಇಸವಿಯನ್ನು ಬರೆದಿರುವುದನ್ನು ನೋಡಬಹುದು. ನೂರ ಎಪ್ಪತ್ತು ವರ್ಷಗಳು ಉರುಳಿದರೂ ಕೂಡ ಈ ಸೇಫ್ಟಿ ಪಿನ್ ತನ್ನ ವಿನ್ಯಾಸದಲ್ಲಿ ಬದಲಾವಣೆ ಕಾಣದೇ ಹಿಂದೆ ಹೇಗಿತ್ತೋ, ಇವತ್ತಿಗೂ ಹಾಗೆಯೇ ಇರುವುದನ್ನು ನೋಡಬಹುದು.
ಇದನ್ನೂ ಓದಿ : Video : ತಾತನ ಜತೆಗೆ ಮೊಮ್ಮಗಳ ಸಖತ್ ಡ್ಯಾನ್ಸ್: ವೈರಲ್ ವಿಡಿಯೋ ಇಲ್ಲಿದೆ ನೋಡಿ
Years have passed….but they’re still the same.
What are their names in your language? pic.twitter.com/jJXbwEjAkn
— The Figen (@TheFigen_) June 2, 2025
ಈ ಪೋಸ್ಟ್‌ವೊಂದು ಆರು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಈ ಪೋಸ್ಟ್‌ಗೆ ಬಳಕೆದಾರರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ಭಾರತದಲ್ಲಿ ಇದು ಸುರಕ್ಷತಾ ಪಿನ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈ ಸೇಫ್ಟಿ ಪಿಕ್ ಕಂಡು ಹಿಡಿದವರ ಹೆಸರು ಐಸಾಕ್ ಪೇಪರ್ ಕ್ಲಿಪ್ ಎಂದಿದ್ದಾರೆ. ಇನ್ನೊಬ್ಬರು, ಇದು ಬಹುಪಯೋಗಿ ವಸ್ತು, ಹರಿದ ಬಟ್ಟೆಗಳನ್ನು ಜೋಡಿಸಲು ಮಾತ್ರವಲ್ಲ, ಯಾರಾದ್ರೂ ತೊಂದರೆ ಮಾಡಿದರೆ ಅವರಿಗೆ ಸರಿಯಾಗಿ ಪಾಠ ಕಲಿಸಲು ಇರುವ ಆಯುಧವೇ ಈ ಪಿನ್ ಎಂದು ಕಾಮೆಂಟ್ ನಲ್ಲಿ ಬರೆದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ