ಇವರು 43 ವರ್ಷಕ್ಕೆ ಸಾವಿರ ಮಕ್ಕಳ ತಂದೆ, ಇನ್ನೊಂದು ಮಗುವಿನ ಹುಟ್ಟಿಗೆ ಕಾರಣನಾದರೂ 91 ಲಕ್ಷ ರೂ. ದಂಡ
ವ್ಯಕ್ತಿಯೊಬ್ಬರು 43ನೇ ವಯಸ್ಸಿಗೆ ಸಾವಿರ ಮಕ್ಕಳ ತಂದೆಯಾಗಿದ್ದಾರೆ. ಇನ್ನೊಂದು ಮಗುವಿನ ಹುಟ್ಟಿಗೆ ಅವರು ಕಾರಣರಾದರೆ 91 ಲಕ್ಷ ರೂ. ದಂಡ ಕಟ್ಟಬೇಕಾಗುತ್ತದೆ.
ಯಾವುದೇ ವ್ಯಕ್ತಿಗಿರಲಿ ತಂದೆ ಎನ್ನುವ ಸ್ಥಾನ ತುಂಬಾ ವಿಶೇಷವಾಗಿರುತ್ತದೆ. ಮಡಿಲಲ್ಲಿ ಮೊದಲ ಬಾರಿಗೆ ಮಗುವನ್ನು ಎತ್ತಿಕೊಂಡಾಗ ಆ ಮಗುವಿನಲ್ಲಿ ಆತ ಇಡೀ ಪ್ರಪಂಚವನ್ನೇ ಕಾಣುತ್ತಾನೆ. ಇಲ್ಲೊಬ್ಬ ವ್ಯಕ್ತಿ 43 ವರ್ಷ ವಯಸ್ಸಿನ ವ್ಯಕ್ತಿಯಾಗಿದ್ದು ಈಗಾಗಲೇ ಸಾವಿರ ಮಕ್ಕಳ ತಂದೆಯಾಗಿದ್ದಾರೆ. ಇನ್ನೊಂದು ಮಗುವಿನ ಹುಟ್ಟಿಗೆ ಅವರು ಕಾರಣರಾದರೆ 91 ಲಕ್ಷ ರೂ. ದಂಡ ಕಟ್ಟಬೇಕಾಗುತ್ತದೆ.
ದಿ ಸನ್ ವೆಬ್ಸೈಟ್ ವರದಿ ಪ್ರಕಾರ, ಜೊನಾಥನ್ ಮೈಜರ್ ಕುರಿತು ಈಗಾಗಲೇ ಸಾಕ್ಷ್ಯಚಿತ್ರವನ್ನೂ ಮಾಡಿದೆ. ಜೊನಾಥನ್ 1-2 ಅಲ್ಲ ಸಾವಿರ ಮಕ್ಕಳ ತಂದೆಯಾಗಿದ್ದು ಮಕ್ಕಳು ವಿದೇಶಗಳಲ್ಲಿ ನೆಲೆಸಿದ್ದಾರೆ.
ಜೊನಾಥನ್ ಜೀವನದಲ್ಲಿ ಅರ್ಥಪೂರ್ಣವಾದುದನ್ನು ಮಾಡಬೇಕೆಂದುಕೊಂಡಿದ್ದರು. ಅದಕ್ಕಾಗಿ ಸಮಾಜಕ್ಕೆ ಸೇವೆ ಸಲ್ಲಿಸಲು ನಿರ್ಧರಿಸಿದರು. ಮಕ್ಕಳಾಗದವರಿಗೆ ತನ್ನ ವೀರ್ಯದಾನ ಮಾಡುವ ಮೂಲಕ ಉಳಿದವರಲ್ಲಿ ಬದುಕಲ್ಲಿ ಖುಷಿ ಕಾಣುವುದನ್ನೇ ಕಾಯಕ ಎಂದುಕೊಂಡರು.
ಆದರೆ ಅದು ಪೋಷಕರನ್ನು ಭಯಗೊಳಿಸವಂತೆ ಮಾಡಿದೆ ಏಕೆಂದರೆ ವೀರ್ಯದಾನ ಮಾಡಿದ್ದು ಬರೋಬ್ಬರಿ ಸಾವಿರಕ್ಕೂ ಹೆಚ್ಚು ದಂಪತಿಗಳಿಗಾಗಿದ್ದು, ಒಂದೊಮ್ಮೆ ತಮ್ಮ ಮಕ್ಕಳು ಅವರ ಅಣ್ಣ, ತಂಗಿ ಜತೆಗೆ ಮದುವೆಯಾದರೆ ಎನ್ನುವ ಭಯ ಕಾಡುತ್ತಿದೆಯಂತೆ.
ಮತ್ತಷ್ಟು ಓದಿ: Men Health: ಪುರುಷರಲ್ಲಿ ಲೈಂಗಿಕ ಅಸಮರ್ಥತೆಗೆ ಕಾರಣವೇನು? ವೀರ್ಯದ ಸಂಖ್ಯೆ ಹೆಚ್ಚಿಸಲು ಏನು ತಿನ್ನಬಹುದು?
ಅವರು 26ನೇ ವಯಸ್ಸಿನಿಂದ ವೀರ್ಯ ದಾನವನ್ನು ಪ್ರಾರಂಭಿಸಿದರು. ಜೊನಾಥನ್ ಸಂಗೀತಗಾರ ಹಾಗೂ ಯೂಟ್ಯೂಬರ್ ಕೂಡ. ಅವರು ತಮ್ಮ ಅನೇಕ ಮಕ್ಕಳನ್ನು ಭೇಟಿಯಾಗಿದ್ದಾರೆ. ಕೆಲವು ಮಕ್ಕಳಿಗೆ ಅವರು ತಮ್ಮ ತಂದೆ ಎಂಬುದು ತಿಳಿದಿದೆ. ಸುಮಾರು 550 ಮಕ್ಕಳನ್ನು ಹೊಂದಿದ್ದಾರೆಂದು ಅಂದಾಜಿಸಲಾಗಿದೆ. ಆದರೆ ಅವರಿಗೆ ಸಾವಿರ ಮಕ್ಕಳಿದ್ದಾರೆಂದು ಜನರು ಹೇಳುತ್ತಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ