
ಶಿಕ್ಷಣ, ಉದ್ಯೋಗಕ್ಕಾಗಿ ವಿದೇಶಕ್ಕೆ (foreign) ಲೆಕ್ಕವಿಲ್ಲದಷ್ಟು ಭಾರತೀಯರು ತೆರಳಿ ಅಲ್ಲೇ ನೆಲೆಸಿದ್ದಾರೆ. ಹೌದು, ಕೆಲವರಿಗೆ ಅಲ್ಲಿನ ಜನರು, ಜೀವನಶೈಲಿ ಹಾಗೂ ವಾತಾವರಣ ಇಷ್ಟವಾಗಿದ್ದರೆ, ಇನ್ನು ಕೆಲವರು ಅನಿವಾರ್ಯ ಕಾರಣಕ್ಕಾಗಿ ವಿದೇಶದಲ್ಲಿ ನೆಲೆಸಿದ್ದಾರೆ. ವಿದೇಶದಲ್ಲಿ ವಾಸಿಸುವ ಎಷ್ಟೋ ಜನರಿಗೆ ಕಹಿ ಅನುಭವವಾಗುವುದಿದೆ. ಆದರೆ ಇದೀಗ ಅಮೆರಿಕದಲ್ಲಿ (America) ನೆಲೆಸಿರುವ ಭಾರತೀಯನಿಗೆ ಅಲ್ಲಿನ ಸ್ಥಳೀಯ ನಿವಾಸಿಯೊಬ್ಬರು ಅವಮಾನಿಸಿರುವ ಘಟನೆ ನಡೆದಿದೆ. ಹೌದು ಮಳಿಗೆಯೊಂದಕ್ಕೆ ನಡೆದುಕೊಂಡು ಬರುತ್ತಿದ್ದ ಭಾರತೀಯನಿಗೆ ನೀನು ಯಾಕೆ ನಮ್ಮ ದೇಶದಲ್ಲಿದ್ದೀಯ ಎಂದು ಪ್ರಶ್ನೆ ಮಾಡಿ ಖಾರವಾಗಿ ಮಾತನಾಡಿದ್ದಾನೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗುತ್ತಿದ್ದಂತೆ ಭಾರತೀಯರು ಗರಂ ಆಗಿದ್ದಾರೆ.
ಇದನ್ನೂ ಓದಿ : Video : ಮಲೇಷ್ಯಾದಲ್ಲಿ ಭಾರತೀಯ ನಾರಿಯರಂತೆ ಸೀರೆ ಉಟ್ಟು ಸುತ್ತಾಡಿದ ಚೀನೀ ಮಹಿಳೆಯರು
@gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಭಾರತೀಯನೊಬ್ಬನು ನಡೆದುಕೊಂಡು ಬರುತ್ತಿದ್ದ ವೇಳೆ ಅಮೆರಿಕದ ಸ್ಥಳೀಯ ನಿವಾಸಿಯೊಬ್ಬನು ಆತನನ್ನು ನಿಂದಿಸಿದ್ದಾನೆ. ಹೌದು, ನೀನೇಕೆ ನಮ್ಮ ದೇಶದಲ್ಲಿದ್ದೀಯ, ನೀನೇಕೆ ಅಮೆರಿಕಾದಲ್ಲಿದ್ದೀಯ? ಎಂದು ಪ್ರಶ್ನಿಸಿರುವ ಸ್ಥಳೀಯ ನೀವು ನಮ್ಮ ದೇಶದಲ್ಲಿರುವುದು ನನಗೆ ಇಷ್ಟವಿಲ್ಲ, ನೀವು ತುಂಬಾ ಜನ ಇಲ್ಲಿ ಇದ್ದೀರ, ಅಮೆರಿಕಾದ ತುಂಬಾ ಭಾರತೀಯರೇ ತುಂಬಿಕೊಂಡಿದ್ದಾರೆ. ಇದರಿಂದ ನಮಗೆ ಸಾಕಾಗಿ ಹೋಗಿದೆ, ನೀವು ಅಮೆರಿಕಾ ಬಿಟ್ಟು ವಾಪಸ್ ಭಾರತಕ್ಕೆ ಹೋಗಬೇಕು ಆಯ್ತಾ? ಎಂದು ಹೇಳಿದ್ದಾನೆ. ಇಷ್ಟೆಲ್ಲಾ ಮಾತುಗಳನ್ನು ಕೇಳಿಸಿಕೊಂಡ ಭಾರತೀಯ ಮಾತ್ರ ಏನು ಹೇಳದೇ ಅಲ್ಲಿಂದ ಹೊರಟು ಹೋಗಿದ್ದಾನೆ. ಅಷ್ಟೇ ಅಲ್ಲದೇ, ಅಮೆರಿಕದ ಸ್ಥಳೀಯ ನಿವಾಸಿ ಅವಾಚ್ಯ ಶಬ್ದಗಳಿಂದ ಭಾರತೀಯನಿಗೆ ಬೈಯುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
White Guy confronts a random Indian man for no reason, what a rac!st piece of trash
pic.twitter.com/0dFDWzIA8h— Ghar Ke Kalesh (@gharkekalesh) July 6, 2025
ಈ ವಿಡಿಯೋವೊಂದು 3.8 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಬಳಕೆದಾರರು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಬಳಕೆದಾರರೊಬ್ಬರು, ಈ ವ್ಯಕ್ತಿಯೂ ಭಾರತೀಯರನ್ನು ಬೆದರಿಸಿದ್ದಾರೆ ಅಷ್ಟೇ. ನಾವು ಎಷ್ಟು ಪ್ರತಿಭಾನ್ವಿತರು, ಸಮರ್ಥರು ಎಂದು ಅವರಿಗೆ ತಿಳಿದಿದೆ. ಇದು ಅವರ ಅಭದ್ರತೆಯನ್ನು ಸೂಚಿಸುತ್ತಿದೆ ಎಂದಿದ್ದಾರೆ. ಇನ್ನೊಬ್ಬರು, ನಿಜಕ್ಕೂ ಈ ವಿಡಿಯೋ ನೋಡಿ ಬೇಸರವಾಯಿತು, ನಾವು ವಿದೇಶಿಗರನ್ನು ಅತ್ಯಂತ ಪ್ರೀತಿಯಿಂದ ಮಾತನಾಡಿಸುತ್ತೇವೆ, ಈ ವ್ಯಕ್ತಿಗೆ ಆ ರೀತಿಯ ಮನಸ್ಥಿತಿ ಯಾಕಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು, ಇದು ನಾಚಿಕೆಗೇಡಿನ ವಿಡಿಯೋ, ಅಲ್ಲಿನ ವ್ಯಕ್ತಿಯೂ ಭಾರತೀಯನ ಬಳಿ ಕಾನೂನುಬದ್ಧವಾಗಿ ಕೇಳುವುದಕ್ಕಿಂತ ಅಲ್ಲಿನ ಸರ್ಕಾರಕ್ಕೆ ಈ ರೀತಿ ಪ್ರಶ್ನೆ ಕೇಳಬೇಕಿತ್ತು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:04 pm, Wed, 9 July 25