Video : ಎಷ್ಟು ಸುಂದರ ಕ್ಷಣವಿದು : ಪತ್ನಿಯ ಗೆಲುವಿನ ಕ್ಷಣವನ್ನು ಸಂಭ್ರಮಿಸಿದ ಪತಿ

ಮದುವೆಯಾದ ಬಳಿಕ ಹೆಣ್ಣು ಮಕ್ಕಳು ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಗಂಡ ಮನೆ ಮಕ್ಕಳು ಎಂದು ತನ್ನ ಕುಟುಂಬಕ್ಕಾಗಿ ತನ್ನ ಆಸೆ ಆಕಾಂಕ್ಷೆಗಳನ್ನು ತ್ಯಜಿಸಬೇಕಾಗುತ್ತದೆ. ಆದರೆ ತನ್ನ ಕನಸುಗಳಿಗೆ ಬೆಂಬಲ ನೀಡುವ ಪತಿ ಸಿಕ್ಕರೆ ಆಕೆಯಷ್ಟು ಅದೃಷ್ಟವಂತೆ ಬೇರೆ ಯಾರು ಇಲ್ಲ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪತ್ನಿ ವೇದಿಕೆಯ ಮೇಲೆ ಗೆಲುವಿನ ಕಿರೀಟ ಅಲಂಕರಿಸಿದರೆ ಪತಿ ಸಿಳ್ಳೆ ಹೊಡೆದು ಆ ಕ್ಷಣವನ್ನು ಸಂಭ್ರಮಿಸಿರುವ ವಿಡಿಯೋವೊಂದು ನೆಟ್ಟಿಗರ ಹೃದಯವನ್ನು ಗೆದ್ದುಕೊಂಡಿದೆ.

Video : ಎಷ್ಟು ಸುಂದರ ಕ್ಷಣವಿದು : ಪತ್ನಿಯ ಗೆಲುವಿನ ಕ್ಷಣವನ್ನು ಸಂಭ್ರಮಿಸಿದ ಪತಿ
ಪತ್ನಿಯ ಗೆಲುವಿನ ಕ್ಷಣವನ್ನು ಸಂಭ್ರಮಿಸಿದ ಪತಿ
Image Credit source: Instagram

Updated on: Jun 09, 2025 | 3:15 PM

ಪ್ರತಿಯೊಬ್ಬ ಹೆಣ್ಣು (woman) ಗಂಡ ತನ್ನ ಜೊತೆಗೆ ನಿಲ್ಲಬೇಕು, ತನ್ನ ಸಂತೋಷ, ನೋವು ಹಾಗೂ ಕನಸುಗಳಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಬಯಸುತ್ತಾಳೆ. ಅಂತಹ ಗಂಡ ಸಿಕ್ಕರೆ ಅದಕ್ಕಿಂತ ಹೆಚ್ಚು ಇನ್ನೇನು ಬೇಕು ಅಲ್ಲವೇ, ಅಂತಹ ಗಂಡನನ್ನು ಪಡೆದಿರುವುದೇ ಆಕೆಯ ಅದೃಷ್ಟ ಎನ್ನಬಹುದು. ಇದೀಗ ವೈರಲ್ ಆಗಿರುವ ಈ ವಿಡಿಯೋವು ಪತಿಯೂ ತನ್ನ ಪತ್ನಿಯ ಕನಸಿಗೆ ಹಾಗೂ ಗೆಲುವಿಗೆ ಹೇಗೆ ಬೆಂಬಲವಾಗಿ ನಿಂತಿದ್ದಾನೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಹೌದು, ವೇದಿಕೆಯ ಮೇಲೆ ಮಹಿಳೆಯೊಬ್ಬಳು ಗೆಲುವಿನ ಕಿರೀಟ ಮುಡಿಗೇರಿಸಿಕೊಂಡಿದ್ದಾಳೆ. ವೇದಿಕೆ ಮುಂಭಾಗದಲ್ಲಿ ಪತಿಯೂ ಮಗನನ್ನು ಎತ್ತಿಕೊಂಡು ಈ ಗೆಲುವನ್ನು ಸಂಭ್ರಮಿಸಿದ್ದಾನೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗುತ್ತಿದ್ದಂತೆ ಈಕೆ ನಿಜಕ್ಕೂ ಅದೃಷ್ಟವಂತೆ ಎಂದು ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವೈರಲ್ ವಿಡಿಯೋದಲ್ಲಿ ಏನಿದೆ?

ಇದನ್ನೂ ಓದಿ
ಹಣ್ಣುಗಳ ರಾಜ ಮಾವಿನ ಹಣ್ಣಾದ್ರೆ, ಹಣ್ಣುಗಳ ರಾಣಿ ಯಾವ ಹಣ್ಣು ಗೊತ್ತಾ?
ಈ ಟೀ ಶರ್ಟ್‌ನಲ್ಲಿ ಎಷ್ಟು ತೂತುಗಳಿವೆ ಎಂದು ಹೇಳುವಿರಾ?
ಒಂದೇ ಒಂದು ರಜೆ ತೆಗೆದುಕೊಳ್ಳದ್ದಕ್ಕೆ ನಿಷ್ಠಾವಂತ ಅಧಿಕಾರಿಗೆ ಈ ಶಿಕ್ಷೆನಾ?
ತಾನು ಸಿಗರೇಟ್ ಸೇದುತ್ತಾ, ಪತಿಗೂ ಸೇದಲು ಕೊಟ್ಟ ಪತ್ನಿ

rtr.preethy ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಎಲ್ಲಾ ಗಂಡಸರು ಅಡುಗೆ ಮಾಡೋದಕ್ಕೆ, ಮನೆ ಸ್ವಚ್ಛಗೊಳಿಸುವುದಕ್ಕೆ ಹಾಗೂ ಮನೆಯ ನಿರ್ವಹಿಸುವುದಕ್ಕೆ ಮದುವೆಯಾಗಲ್ಲ, ಕೆಲವರು ಮಾತ್ರ ತಮ್ಮ ಪತ್ನಿ ಗೆಲುವುದನ್ನು ನೋಡಲು ಇಷ್ಟ ಪಡುತ್ತಾರೆ. ಗೆದ್ದರೆಅದನ್ನು ಸಂಭ್ರಮಿಸುತ್ತಾರೆ ಎಂದು ಬರೆಯಲಾಗಿದೆ ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಅಡುಗೆ ಕೆಲಸದಲ್ಲಿ ಬ್ಯುಸಿಯಾಗಿರುವುದನ್ನು ನೋಡಬಹುದು. ಆ ಬಳಿಕ ಬಾಡಿ ಬಿಲ್ಡಿಂಗ್‌ನಲ್ಲಿ ಗೆಲುವು ಸಾಧಿಸಿ ವೇದಿಕೆಯ ಮೇಲೆ ನಿಂತಿರುವ ಪತ್ನಿಯನ್ನು ಕಂಡು ಪತಿಯೂ ಖುಷಿ ಪಟ್ಟಿದ್ದಾನೆ. ಮಗುವನ್ನು ಎತ್ತಿಕೊಂಡು ಸ್ಟೇಜ್ ಮುಂದೆ ನಿಂತಿದ್ದ ಸಿಳ್ಳೆ ಹೊಡೆದು ಪತ್ನಿಯ ಗೆಲುವನ್ನು ಸಂಭ್ರಮಿಸುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ : ಇದನ್ನೂ ಓದಿ :Video : ಇದು ನಿಮ್ಮ ಜೀವನದ ಅದ್ಭುತ, ಭಯಪಡಬೇಡಿ ಮೇಡಂ, ಜಂಪಿಂಗ್​​​ ವೇಳೆ ಯುವತಿಗೆ ಧೈರ್ಯ ತುಂಬಿದ ಸಿಬ್ಬಂದಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವೊಂದು 1.8 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರೊಬ್ಬರು, ಇದು ನೋಡಿ ನಿಜವಾದ ದಾಂಪತ್ಯ, ಹೆಂಡ್ತಿ ಗೆಲುವು ಸಾಧಿಸಿದ್ದಕ್ಕೆ ಪತಿಯ ಸಂಭ್ರಮ ನೋಡಿ ಎಂದಿದ್ದಾರೆ. ಮತ್ತೊಬ್ಬರು, ಪ್ರತಿಯೊಬ್ಬ ಹೆಣ್ಣು ಬಯಸೋದು ಇಂತಹ ಗಂಡನನ್ನೇ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ಈ ವರ್ಷದ ಬೆಸ್ಟ್ ಪತಿ ಇವರೇ ನೋಡಿ ಎಂದಿದ್ದಾರೆ. ಕೆಲವರು ಈ ವಿಡಿಯೋಗೆ ಹಾರ್ಟ್ ಸಿಂಬಲ್ ಕಳುಹಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ