ಯಾರೋ ಬಿಟ್ಟು ಹೋದರೆ ಇನ್ನ್ಯಾರೋ ತೆಕ್ಕೆಗೆಳೆದುಕೊಳ್ಳುತ್ತಾರೆ ನಾಯಿಮರಿಗಾದರೆ…
Dog Rescue : ಹನಿ ನೀರು ಬಿಸ್ಕೆಟ್ ಚೂರು ಮೇಲೊಂದೆರಡು ಸಲ ತಲೆನೇವರಿಸಿ ಹೊರಟರೆ? ಬೇಡ, ಮತ್ತೆ ನಾನೊಬ್ಬನೇ. ನೆಲದಾಣೆ ಮಾಡಿ ಹೇಳುತ್ತಿದ್ದೇನೆ ಬೇಡವೆಂದರೂ ಕೇಳುತ್ತಿಲ್ಲ. ಮತ್ತೆ ಮತ್ತೆ ಮೈದಡವುತ್ತಿದ್ದಾಳೆ ಏನು ಮಾಡಲಿ?
Viral Video : ಅಮ್ಮನಿಂದ ದೂರ ಸರಿದರೆ ಚಳಿಯೇ ಅಲ್ಲವೆ? ಎಲ್ಲಿ ಹೋದಳು, ತಾನಾಗಿಯೇ ಆಕೆ ಬಿಟ್ಟುಹೋಗಳು. ನಾನೇ ದಾರಿ ತಪ್ಪಿಸಿಕೊಂಡೆನೇ? ರೊಯ್ಯನೇ ಗಾಳಿ ಬೀಸುತ್ತದೆ. ಅತ್ತ ಸರಿಯಲೆ ಇತ್ತ ಸರಿಯಲೆ ಏರಿಬರುವ ಗಾಡಿಗಳ ಮಧ್ಯೆ ಎತ್ತ ಸರಿಯಲಿ? ಕಾರೊಂದು ಬಂದು ನಿಂತಿದೆ. ಒಳಾಸೆ, ಮತ್ತೆ ಓಡಿಬರುತ್ತಿದ್ದೇನೆ. ಹನಿ ನೀರು ಬಿಸ್ಕೆಟ್ ಚೂರು ಮೇಲೊಂದೆರಡು ಸಲ ತಲೆನೇವರಿಸಿ ಹೊರಟರೆ? ಬೇಡ ಬೇಡ, ಮತ್ತೆ ನಾನೊಬ್ಬನೇ. ಅರೆ ಆಕೆ ಕೈಚಾಚಿ ಮುಂದೆ ಮುಂದೆ ಬರುತ್ತಿದ್ದಾಳೆ. ನನಗೀಗ ಹಿಂದೆಹಿಂದೆ ಸರಿಯದೆ ಗತ್ಯಂತರವಿಲ್ಲ. ನೆಲದಾಣೆ ಮಾಡಿ ಹೇಳುತ್ತಿದ್ದೇನೆ ಬೇಡವೆಂದರೂ ಕೇಳುತ್ತಿಲ್ಲ. ಮತ್ತೆ ಮತ್ತೆ ಮೈದಡವುತ್ತಿದ್ದಾಳೆಂದರೆ ಶಾಶ್ವತವಾಗಿ ತನ್ನೊಂದಿಗೆ ಕರೆದೊಯ್ಯಬಹುದೆ?
Saving an orphaned little angel..
ಇದನ್ನೂ ಓದಿSo touching.. ?
? IG: sos_arms_georgiana_neagu pic.twitter.com/rWHY8Ubod3
— Buitengebieden (@buitengebieden) November 1, 2022
Buitengebieden ಟ್ವೀಟ್ ಮಾಡಿದ ಈ ವಿಡಿಯೋ ಕಣ್ಣಾಲಿಗಳನ್ನು ತುಂಬಿಸುವಂತಿಲ್ಲವೆ? ಈ ತನಕ 1.3 ಮಿಲಿಯನ್ ಜನ ಈ ವಿಡಿಯೋ ನೋಡಿದ್ದಾರೆ. 72,000 ಕ್ಕಿಂತಲೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ಅನೇಕರು ನಾಯಿಮರಿಯ ಕಣ್ಣುಗಳಲ್ಲಿರುವ ದುಗುಡವನ್ನು ಅಕ್ಷರಗಳಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದಾರೆ.
‘ಆಕೆ ತನಗೆ ಸಹಾಯ ಮಾಡಲು ಬಂದಿದ್ದಾಳೆ ಎನ್ನುವುದನ್ನು ಅರಿತುಕೊಳ್ಳಲೂ ಅವನಿಗೆ ಕಷ್ಟವಾಗುತ್ತಿದೆ, ಅಷ್ಟೊಂದು ಭಯತುಂಬಿಕೊಂಡಿದೆ ಪಾಪ’ ಎಂದು ಮಮ್ಮಲ ಮರುಗಿದ್ದಾರೆ ಒಬ್ಬರು. ‘ಈ ನಾಯಿಮರಿಯನ್ನು ಹೀಗೆ ರಸ್ತೆಯಲ್ಲಿ ಬಿಟ್ಟುಹೋದವರ ಬಳಿಯೊಮ್ಮೆ ನನಗೆ ಮಾತನಾಡಬೇಕಿದೆ. ಹೇಗೆ ಹುಡುಕುವುದೋ? ಸಂಕಟವಾಗುತ್ತದೆ’ ಎಂದಿದ್ದಾರೆ ಇನ್ನೊಬ್ಬರು. ‘ಇಷ್ಟೊಂದು ಭಯಪಡುತ್ತಿದೆ ಎಂದರೆ ಮನುಷ್ಯರು ಇದಕ್ಕೆ ಏನು ಮಾಡಿರಬಹುದು, ಹೃದಯ ಹಿಂಡುವ ಈ ದೃಶ್ಯ ನೋಡಲಾಗುತ್ತಿಲ್ಲ’ ಎಂದಿದ್ದಾರೆ ಮತ್ತೊಬ್ಬರು. ‘ಇರಲಿ ಈಗೊಂದು ಮನೆ ಸಿಕ್ಕಿತಲ್ಲ ಅದಕ್ಕೆ, ಅದಕ್ಕೆ ಖುಷಿಪಡೋಣ’ ಎಂದಿದ್ದಾರೆ ಮಗದೊಬ್ಬರು.
ದೇವರು, ಹೀಗೆ ಈ ನಾಯಿಮರಿಯ ಕೈಬಿಟ್ಟು ಕೆಲಕಾಲ ಕಾಯ್ದು ನೋಡಿದನೇನೋ ಮನುಷ್ಯರ ಆಟವನ್ನು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:45 am, Thu, 3 November 22