French Fries: ವಿಶ್ವದಲ್ಲೇ ಅತ್ಯಂತ ದುಬಾರಿ ಫ್ರೆಂಚ್ ಫ್ರೈ ಎಲ್ಲಿ ಸಿಗುತ್ತೆ ಗೊತ್ತಾ? ಬೆಲೆ ಕೇಳಿದ್ರೆ ನಿಜವಾಗಿಯೂ ಶಾಕ್ ಆಗ್ತೀರಾ
Viral News: ವಿಶ್ವದಲ್ಲೇ ಅತ್ಯಂತ ದುಬಾರಿ ಫ್ರೆಂಚ್ ಫ್ರೈ ಅನ್ನಿಸಿಕೊಂಡಿರುವ ಈ ಹೊಸ ಬಗೆಯ ತಿಂಡಿಗೆ ಬರೋಬ್ಬರಿ 14, 800 ರೂಪಾಯಿ. ಹಾಗಾದ್ರೆ, ಈ ಹೊಸ ಬಗೆಯ ಫ್ರೆಂಚ್ ಫ್ರೈ ಹೊಸ ಬಗೆಯ ಸಾಮಗ್ರಿ ಬಳಕೆಯಿಂದ ತಯಾರಾಗುತ್ತದೆಯೇ?
ಸಾಮಾನ್ಯವಾಗಿ ಫ್ರೆಂಚ್ ಫ್ರೈಗಳನ್ನು ಟೇಸ್ಟ್ ಮಾಡಿಯೇ ಇರ್ತೀರಿ.. ಆದ್ರೆ ಹಣ ಎಷ್ಟು ಕೊಟ್ಟಿರಬಹುದು? 100 ರಿಂದ 200 ರೂಪಾಯಿ. ಹೆಚ್ಚೂ ಅಂದ್ರೂ 250-300 ರೂಪಾಯಿ. ಆದರೆ ವಿಶ್ವದಲ್ಲಿಯೇ ಅತ್ಯಂತ ದುಬಾರಿ ಫ್ರೆಂಚ್ ಫ್ರೈ(Worlds most expensive French fries) ಟೇಸ್ಟ್ ಮಾಡಿದ್ದೀರಾ? ನೋಡಲು ಅತ್ಯಾಕರ್ಷಕವಾಗಿ ಕಾಣುತ್ತಿರುವ ಫ್ರೆಂಚ್ ಫ್ರೈ ನೋಡಿದ್ರೆ ಒಂದು ಬಾರಿಯಾದ್ರೂ ಟೇಸ್ಟ್ ಸವಿಯಲೇ ಬೇಕು ಅನಿಸ್ತಿದೆ ಅಲ್ವೇ? ಮೊದಲು ಬೆಲೆ ಎಷ್ಟು ತಿಳಿಯಿರಿ ಬಳಿಕ ಇಷ್ಟವಾದ್ರೆ ಫ್ರೆಂಚ್ ಫ್ರೈ(French Fries) ಖರೀದಿಸಬಹುದು.
ವಿಶ್ವದಲ್ಲೇ ಅತ್ಯಂತ ದುಬಾರಿ ಫ್ರೆಂಚ್ ಫ್ರೈ ಅನ್ನಿಸಿಕೊಂಡಿರುವ ಈ ಹೊಸ ಬಗೆಯ ತಿಂಡಿಗೆ ಬರೋಬ್ಬರಿ 14, 800 ರೂಪಾಯಿ. ಹಾಗಾದ್ರೆ ಈ ಹೊಸ ಬಗೆಯ ಫ್ರೆಂಚ್ ಫ್ರೈ ಹೊಸ ಬಗೆಯ ಸಾಮಗ್ರಿ ಬಳಕೆಯಿಂದ ತಯಾರಾಗುತ್ತದೆಯೇ?
ನ್ಯೂಯಾರ್ಕ್ನಲ್ಲಿರುವ serendipity 3 ಎಂಬ ಹೆಸರಿನ ರೆಸ್ಟೋರೆಂಟ್ ವಿಶ್ವದಲ್ಲೇ ಅತ್ಯಂತ ದುಬಾರಿ ತಿಂಡಿಗಳು ಸಿಗುವ ಹೆಸರಿಗೆ ಪಾತ್ರವಾಗಿದೆ. ಜತೆಗೆ ಗಿನ್ನಿಸ್ ವರ್ಡ್ ರೆಕಾರ್ಡ್ನಲ್ಲಿ ಹೆಸರು ಗಳಿಸಿಕೊಂಡಿದೆ. ಈ ಹಿಂದೆ ವಿಶ್ವದ ದುಬಾರಿ ಐಸ್ಕ್ರೀಂ ಹೆಸರು ಬಡೆದುಕೊಂಡಿತ್ತು. ಇದೀಗ ಅತ್ಯಂತ ದುಬಾರಿಯ ಫ್ರೆಂಚ್ ಫ್ರೈ ತಯಾರಿಸಿದೆ.
ಫ್ರೆಂಚ್ ಫ್ರೈಅನ್ನು ಕ್ರೀಮ್ ಡೆ ಲಾ, ಕ್ರೀಮ್ ಪೊಮ್ಮೆ ಫ್ರೈಸ್ ಎಂದು ಕರೆಯಲಾಗುತ್ತದೆ. ಆದರೆ ಇವರು ಶುದ್ಧ ಎಣ್ಣೆಯಲ್ಲಿ ಆಲೂಗಡ್ಡೆಯನ್ನು ಫ್ರೈ ಮಾಡುವುದಿಲ್ಲ. ಇದನ್ನು ತಯಾರಿಸುವ ಬಗೆ ಬೆರೇಯೇ ಇದೆ. ವಿಡಿಯೋ ನೋಡಿ …
Fries for $200: The world’s most expensive french fries are cooked in pure goose fat and topped off with edible gold dust https://t.co/fiu0FNDZOI pic.twitter.com/uwGw210lul
— Reuters (@Reuters) July 28, 2021
ಫ್ರೆಂಚ್ ಫ್ರೈ ಮೇಲೆ ಚಿನ್ನದ ಹುಡಿಗಳನ್ನು(ಚಿನ್ನದ ಧೂಳು) ಉದುರಿಸಲಾಗಿದೆ. ಇದನ್ನು ಚಿನ್ನದ ಫೆಂಚ್ ಫ್ರೈ ಎಂದೂ ಕೆಲವು ಕರೆಯುತ್ತಿದ್ದಾರೆ. ನೋಡಲು ಸುಂದರವಾಗಿ ಜತೆಗೆ ಅಲಂಕಾರಗೊಂಡ ಫ್ರೆಂಚ್ ಫ್ರೈ ಅನ್ನು ಸವಿದೇ ಬಿಡೋಣ ಅನ್ನಿಸುತ್ತೆ. ಆದ್ರೆ ಬೆಲೆ ಕೇಳಿದಾಕ್ಷಣ ಒಮ್ಮೆ ಆಶ್ಚರ್ಯವಾಗುವುದಂತೂ ನಿಜ. ಈ ದುಬಾರಿ ಫ್ರೆಂಚ್ ಫ್ರೈ ನ್ಯೂಯಾರ್ಕ್ನಲ್ಲಿ ಫೇಮಸ್ ಆಗಿದೆ.
ಇದನ್ನೂ ಓದಿ:
Ice Cream: ಜಗತ್ತಿನ ಅತಿ ದುಬಾರಿ ಐಸ್ ಕ್ರೀಂ ಟೇಸ್ಟ್ ಮಾಡಬೇಕಾ?; ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರ
Published On - 12:31 pm, Wed, 28 July 21