Viral Video : ಸಣ್ಣವರಿಗೆ ದೊಡ್ಡವರು ಬೇಕು, ದೊಡ್ಡವರಿಗೆ ಸಣ್ಣವರು ಬೇಕು. ಅವರ ನಡುವಿನ ಭಾವನಾತ್ಮಕ ಬಂಧ ವಿವರಿಸಲಾಧ್ಯ. ಈ ಆಧುನಿಕ ಯುಗದಲ್ಲಿ ಎಲ್ಲರೂ ಒಂದೊಂದು ಊರು, ದೇಶಗಳಲ್ಲಿ ಬದುಕುತ್ತ ತಂತ್ರಜ್ಞಾನದ ಮೂಲಕ ಸಂಪರ್ಕ ಹೊಂದುತ್ತ ಹೇಗೋ ಒಟ್ಟು ಬದುಕುತ್ತಿದ್ದೇವೆ. ಬೇಸರವಾದಾಗ ಸಣ್ಣ ನೆಮ್ಮದಿ, ನಗುವನ್ನರಳಿಸಿಕೊಳ್ಳಲು ಆನ್ಲೈನ್ಗೆ ಮೊರೆಹೋಗುತ್ತಿದ್ದೇವೆ. ಎಷ್ಟೋ ಸಲ ನಮ್ಮ ಮನಸ್ಸು ಬಯಸುವಂಥ ವಿಡಿಯೋಗಳು ಸಿಗದೆ ಬೇಸರಗೊಳ್ಳುತ್ತಿರುತ್ತೇವೆ. ಈಗ ಇಲ್ಲಿರುವ ಈ ವಿಡಿಯೋ ನೋಡಿ, ಬಹುಶಃ ನಿಮಗೂ ಖುಷಿಯಾಗಬಹುದೇನೋ. ನಿಮ್ಮ ಅಜ್ಜ ಅಜ್ಜಿ ನಿಮಗೆ ನೆನಪಾಗದೇ ಇರರು. ನವೆಂಬರ್ 9 ರಂದು ಈ ವಿಟಿಯೋ ಅನ್ನು ಆನ್ಲೈನ್ನಲ್ಲಿ ಹಂಚಿಕೊಳ್ಳಲಾಗಿದೆ.
ಈ ಹುಡುಗ ತನ್ನ ಪಾಡಿಗೆ ತಾನು ಫುಟ್ಬಾಲ್ನಲ್ಲಿ ಮಗ್ನನಾಗಿದ್ದಾನೆ. ಆಗ ಈತನ ಅಜ್ಜ ಮೈದಾನಕ್ಕೆ ಬಂದು ಸರ್ಪ್ರೈಝ್ ಕೊಟ್ಟಿದ್ದಾನೆ. ಈ ಹುಡುಗನ ತಮ್ಮ ಈ ವಿಡಿಯೋ ಅನ್ನು ರೆಕಾರ್ಡ್ ಮಾಡಿದ್ದಾನೆ. ಆಟದ ಗುಂಗಿನಲ್ಲಿದ್ದವನಿಗೆ ಹೀಗೆ ಪ್ರೀತಿಯ ಅಜ್ಜ ಕಣ್ಣೆದುರಿಗೆ ಧುತ್ತನೇ ಪ್ರತ್ಯಕ್ಷವಾದಾಗ ಹೇಗನ್ನಿಸಿರಬೇಡ? ಮನಸಾರೆ ತಬ್ಬಿಕೊಂಡು ಖುಷಿಯಿಂದ ಕಣ್ಣೀರು ಸುರಿಸಿದ್ದಾನೆ.
ನೀವು ಮತ್ತೊಮ್ಮೆ ನಮ್ಮನ್ನೆಲ್ಲ ಬಿಟ್ಟು ಪೆರುವಿಗೆ ಹೋಗಬೇಡಿ ಎಂದು ಹೇಳಿದ್ದಾನೆ ಅಜ್ಜನಿಗೆ. ಇಷ್ಟೊಂದು ಪ್ರೀತಿ ದಕ್ಕಿದಾಗ ಅಜ್ಜನಿಗೆ ಎಷ್ಟೊಂದು ಖುಷಿ ಆಗಿರಬೇಡ?
ನೆಟ್ಟಿಗರು ಈ ವಿಡಿಯೋ ನೋಡಿ ಭಾವುಕರಾಗಿದ್ದಾರೆ. 2,000ಕ್ಕಿಂತಲೂ ಹೆಚ್ಚು ಜನರೂ ಈ ವಿಡಿಯೋ ಇಷ್ಟಪಟ್ಟಿದ್ದಾರೆ.
ನಿಮಗೆ ಈ ವಿಡಿಯೋ ಇಷ್ಟವಾಯಿತಾ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ