ನನಗೂ ಕುರಕುರೆ ಬೇಕು; ಅಳಿಲಿನ ಹಿಂಡು ಈತನನ್ನು ಸುತ್ತುವರಿದ ವಿಡಿಯೋ

Squirrel : ತಾನಲ್ಲದೇ ಪ್ರಾಣಿಪಕ್ಷಿಗಳಿಗೂ ಜಂಕ್ ಕೊಡುತ್ತಿದ್ದಾನೆ ಮನುಷ್ಯ ಎಂದು ಕೆಲವರು, ಹಂಚಿ ತಿನ್ನುವ ಉದಾತ್ತ ಗುಣ ಇದೆಯಲ್ಲ ಎಂದು ಇನ್ನೂ ಕೆಲವರು. ಆದರೆ ಈ ವಿಡಿಯೋ ಮಾತ್ರ ಬಹಳ ಮುದ್ದಾಗಿದೆ.

ನನಗೂ ಕುರಕುರೆ ಬೇಕು; ಅಳಿಲಿನ ಹಿಂಡು ಈತನನ್ನು ಸುತ್ತುವರಿದ ವಿಡಿಯೋ
Man feeds Kurkure to squirrels
Follow us
TV9 Web
| Updated By: ಶ್ರೀದೇವಿ ಕಳಸದ

Updated on: Nov 10, 2022 | 1:56 PM

Viral : ಕೈಯಲ್ಲಿ ತಿಂಡಿಪೊಟ್ಟಣವಿಟ್ಟುಕೊಂಡು ಒಬ್ಬರೇ ಪಾರ್ಕಿನಲ್ಲಿ ಕುಳಿತುಕೊಳ್ಳುತ್ತೀರಿ. ಪಕ್ಕದಲ್ಲಿ ಯಾರೋ ಒಬ್ಬರು ನಿಮ್ಮನ್ನು ಇಣುಕುತ್ತಾರೆ. ಆಗ ಸುಮ್ಮನೇ ನಿಮ್ಮಷ್ಟಕ್ಕೆ ನೀವು ತಿನ್ನಲು ಮನಸ್ಸಾಗುತ್ತದೆಯಾ? ಹಂಚಿತಿಂದರೇ ಸಮಾಧಾನ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಈ ವ್ಯಕ್ತಿ ಪಾರ್ಕಿನಲ್ಲಿ ಕುರಕುರೆ ಪ್ಯಾಕೆಟ್ಟಿನೊಂದಿಗೆ ಕುಳಿತಿದ್ದಾನೆ. ಒಂದು ಅಳಿಲು ಬಂದಿದೆ ಕುರಕುರೆಯನ್ನು ಕೊಟ್ಟಿದ್ದಾನೆ. ರುಚಿ ಅನ್ನಿಸಿದೆ ಮತ್ತೆ ಓಡಿ ಬಂದಿದೆ. ಸುತ್ತಲೂ ಪರಿಮಳ ಹರಡಿದೆ. ಅಲ್ಲಿರುವ ಅಳಿಲುಗಳೂ ಕುರಕುರೆಗಾಗಿ ಯುವಕನನ್ನು ಸುತ್ತುವರೆದಿವೆ.

ಈ ವಿಡಿಯೋ 10,000ಕ್ಕಿಂತಲೂ ಹೆಚ್ಚು ಜನರನ್ನು ಸೆಳೆದಿದೆ. ಅನೇಕರು ಎಂಥ ದಯಾಳು ಎಂದಿದ್ದಾರೆ ಈ ಯುವಕನಿಗೆ. ಇನ್ನೂ ಕೆಲವರು ತಾನು ಇಂಥ ಜಂಕ್​ ತಿನ್ನುವುದಲ್ಲದೆ ಪ್ರಾಣಿ ಪಕ್ಷಿಗಳಿಗೂ ಅಭ್ಯಾಸ ಮಾಡಿಸುತ್ತಿದ್ದಾನಲ್ಲ ಮನುಷ್ಯ ಎಂದು ಬೇಸರಿಸಿಕೊಂಡಿದ್ದಾರೆ. ಹೀಗೆ ಹಂಚಿ ತಿನ್ನುವ ಗುಣ ಎಲ್ಲರಿಗೂ ಇರುವುದಿಲ್ಲ, ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದಿದ್ದಾರೆ ಇನ್ನೂ ಒಬ್ಬರು.

ನಿಮಗೇನು ಅನ್ನಿಸುತ್ತಿದೆ ಈ ವಿಡಿಯೋ ನೋಡಿದಾಗ?

ಮತ್ತಷ್ಟು ವೈರಲ್​ ವಿಡಿಯೋ ನೋಡಲು ಕ್ಲಿಕ್ ಮಾಡಿ

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ