ವಿಶೇಷವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಿತಿ ಮೀರಿ ವರ್ತಿಸುವುದು ಸರಿಯಲ್ಲ. ಈ ವಿಷಯ ಗೊತ್ತಿದ್ದರೂ ಕೂಡಾ ಕೆಲವೊಬ್ಬರು ಸಾರ್ವಜನಿಕ ಸ್ಥಳಗಳಲ್ಲಿ ಲಂಗು ಲಗಾಮಿಲ್ಲದೆ ಅಸಭ್ಯ ರೀತಿಯ ವರ್ತನೆಯನ್ನು ತೋರುತ್ತಿರುತ್ತಾರೆ. ಇದಕ್ಕೆ ಉದಾಹರಣೆಯಂತಿರುವ ಸಾಕಷ್ಟು ಘಟನೆಗಳು ಈ ಹಿಂದೆಯೂ ಕೂಡಾ ನಡೆದಿವೆ. ಮೊನ್ನೆಯಷ್ಟೇ ರೂಪದರ್ಶಿಯೊಬ್ಬಳು ಬರೀ ಬಾತ್ ಟವೆಲ್ ಸುತ್ತಿ ಇಂಡಿಯಾ ಗೇಟ್ ಬಳಿ ಡ್ಯಾನ್ಸ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಳು. ಇದೀಗ ಇಂತಹದ್ದೇ ಮತ್ತೊಂದು ಘಟನೆ ನಡೆದಿದ್ದು, ಓರ್ವ ಯುವತಿ ತುಂಡುಡುಗೆ ತೊಟ್ಟು ರಸ್ತೆ ಡಿವೈಡರ್ ಮೇಲೆ ನಿಂತು ಅಸಭ್ಯವಾಗಿ ನೃತ್ಯ ಮಾಡಿದ್ದಾಳೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ತೋರುವ ಇಂತಹ ಲಜ್ಜೆಗೆಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.
ಅಕ್ಕಪಕ್ಕದ ರಸ್ತೆಯಲ್ಲಿ ನಿರಂತರವಾಗಿ ವಾಹನಗಳು ಸಂಚರಿಸುತ್ತಿದ್ದರೂ, ಇದಕ್ಕೆಲ್ಲಾ ಕ್ಯಾರೇ ಅನ್ನದೆ ಓರ್ವ ಯುವತಿ ತುಂಡುಡುಗೆ ತೊಟ್ಟು ರಸ್ತೆ ಡಿವೈಡರ್ ಮೇಲೆ ಮೈ ಚಳಿ ಬಿಟ್ಟು ಅಸಭ್ಯ ರೀತಿಯಲ್ಲಿ ಮುಜ್ರಾ ಡ್ಯಾನ್ಸ್ ಮಾಡಿದ್ದಾಳೆ.
Ban mujra before it’s too late. Also, she’s distracting people and could cause accidents on the road. pic.twitter.com/0ajRivcfwx
— ︎ ︎venom (@venom1s) December 6, 2024
ಈ ಕುರಿತ ವಿಡಿಯೋವನ್ನು venom1s ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಆಕೆ ಜನರನ್ನು ವಿಚಲಿತಗೊಳಿಸುತ್ತಿದ್ದಾಳೆ, ಇದರಿಂದ ರಸ್ತೆ ಅಪಘಾತಗಳು ಸಹ ಉಂಟಾಗಬಹುದು; ಆದಷ್ಟು ಬೇಗ ಮುಜ್ರಾ ನೃತ್ಯವನ್ನು ನಿಷೇಧಿಸಿ” ಎಂಬ ಶೀರ್ಷಿಕೆ ಬರೆದುಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕೆಂಪು ಬಣ್ಣದ ತುಂಡುಡುಗೆ ತೊಟ್ಟ ಯುವತಿ ರಸ್ತೆ ಡಿವೈಡರ್ ಮೇಲೆ ನಿಂತು ಸಾರ್ವಜನಿಕವಾಗಿ ಅಸಭ್ಯ ರೀತಿಯಲ್ಲಿ ನೃತ್ಯ ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಡಿವೋರ್ಸ್ ಪಡೆದು ಬರೋಬ್ಬರಿ 50 ವರ್ಷಗಳ ಬಳಿಕ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ವಿಚ್ಛೇದಿತ ದಂಪತಿ
ಡಿಸೆಂಬರ್ 06 ರಂದು ಹಂಚಿಕೊಳ್ಳಲಾದ ಈ ವಿಡಿಯೋ 61 ಸಾವಿರ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಿಜಕ್ಕೂ ಇದು ತುಂಬಾ ಅಸಭ್ಯವಾಗಿದೆ. ಇದಕ್ಕೆ ಯಾವುದೇ ಕಾನೂನು ಕ್ರಮ ಇಲ್ಲವೇʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದೇನಾ ಮಹಿಳಾ ಸಬಲೀಕರಣʼ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಇನ್ನೂ ಅನೇಕರು ಈಕೆಯ ವರ್ತನೆಗೆ ಗರಂ ಆಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ