Viral: ಗರ್ಲ್‌ಫ್ರೆಂಡ್ ಜೊತೆ ಲಿಪ್‌ಲಾಕ್ ಮಾಡುತ್ತಾ ಕಾರು ಓಡಿಸಿದ ಯುವಕ; ವಿಡಿಯೋ ವೈರಲ್
ಬೈಕ್ ಮೇಲೆ ಗೆಳತಿಯನ್ನು ಕೂರಿಸಿ ಲಿಪ್ ಲಾಕ್ ಮಾಡುತ್ತಾ, ರೊಮ್ಯಾನ್ಸ್ ಮಾಡುತ್ತಾ ಬೈಕ್‌ನಲ್ಲಿ ಜಾಲಿ ರೈಡ್ ಹೋದಂತಹವರ ಸಾಕಷ್ಟು ಸುದ್ದಿಗಳು ಈ ಹಿಂದೆಯೂ ಕೇಳಿ ಬಂದಿವೆ. ಇದೀಗ ಇಲ್ಲೊಬ್ಬ ಯುವಕ ಟ್ರಾಫಿಕ್ ರೂಲ್ಸ್‌ಗಳನ್ನೇ ಮರೆತು ತನ್ನ ಗರ್ಲ್‌ಫ್ರೆಂಡ್ ಅನ್ನು ತೊಡೆ ಮೇಲೆ ಕೂರಿಸಿಕೊಂಡು, ಆಕೆಯ ಜೊತೆ ಲಿಪ್ ಲಾಕ್ ಮಾಡುತ್ತಾ ಬೇಜವಾಬ್ದಾರಿಯಿಂದ ಕಾರು ಓಡಿಸಿದ್ದಾನೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಎಲ್ಲಿ ಹೇಗೆ ಇರಬೇಕು ಎಂಬ ಕನಿಷ್ಟ ಜ್ಞಾನವು ಇರದೇ ಕೆಲ ಪ್ರೇಮಿಗಳು ಸಾರ್ವಜನಿಕ ಸ್ಥಳಗಳಲ್ಲಿಯೇ ಅಸಹ್ಯಕರ ವರ್ತನೆಗಳನ್ನು ತೋರುತ್ತಿರುತ್ತಾರೆ. ಅದರಲ್ಲೂ ತಮ್ಮ ಗರ್ಲ್‌ಫ್ರೆಂಡ್ ಅನ್ನು ಬೈಕ್ ಮೇಲೆ ಕೂರಿಸಿ, ಲಿಪ್ ಕಿಸ್ ಮಾಡುತ್ತಾ ಜಾಲಿ ರೈಡ್ ಹೋದವರೂ ಇದ್ದಾರೆ. ಇಂತಹ ಅತಿರೇಕವೆನಿಸುವ ವರ್ತನೆಗಳು ಆಗಾಗ್ಗೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಯುವಕನೊಬ್ಬ ಟ್ರಾಫಿಕ್ ರೂಲ್ಸ್‌ಗಳನ್ನೇ ಮರೆತು ತನ್ನ ಗರ್ಲ್‌ಫ್ರೆಂಡ್ ಅನ್ನು ತೊಡೆ ಮೇಲೆ ಕೂರಿಸಿಕೊಂಡು, ಆಕೆಯ ಜೊತೆ ಲಿಪ್ ಲಾಕ್ ಮಾಡುತ್ತಾ ಬೇಜವಾಬ್ದಾರಿಯಿಂದ ಕಾರು ಓಡಿಸಿದ್ದಾನೆ. ಈ ದೃಶ್ಯ ಭಾರಿ ಆಕ್ರೋಶಕ್ಕೆ ಗುರಿಯಾಗಿದೆ.
ಯುವಕನೊಬ್ಬ ಟ್ರಾಫಿಕ್ ನಿಯಮಗಳನ್ನೆಲ್ಲಾ ಮುರಿದು ಲೋಕದ ಪರಿವೇ ಇಲ್ಲದೆ ತನ್ನ ಗೆಳತಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಲಿಪ್ ಲಾಕ್, ರೊಮ್ಯಾನ್ಸ್ ಮಾಡುತ್ತಾ ಬೇಜವಾಬ್ದಾರಿಯಿಂದ ಕಾರು ಓಡಿಸಿದ್ದಾನೆ. ಈ ಕುರಿತ ವಿಡಿಯೋವೊಂದನ್ನು ಸೂರ್ಯ ರೆಡ್ಡಿ (jsuryareddy) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಆಘಾತಕಾರಿ ದೃಶ್ಯ, ಆತ ತನ್ನೊಂದಿಗೆ ಇತರರ ಪ್ರಾಣವನ್ನೂ ಪಣಕ್ಕಿಟ್ಟಿದ್ದಾನೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
Where are we going?
Shocking video, with him risking the lives of others also. What punishment does he need?#RoadSafety #viralvideo #ViralVideos pic.twitter.com/ZTWa7B5fB7
— Surya Reddy (@jsuryareddy) December 26, 2024
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಯುವಕನೊಬ್ಬ ತನ್ನ ಗರ್ಲ್‌ಫ್ರೆಂಡ್ ಅನ್ನು ತೊಡೆಯ ಮೇಲೆ ಕೂರಿಸಿ ಆಕೆಯ ಜೊತೆ ಲಿಪ್ ಲಾಕ್ ಮಾಡುತ್ತಾ ಕಾರ್ ಓಡಿಸುತ್ತಿರುವಂತಹ ಆಘಾತಕಾರಿ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ರೆಸ್ಟೋರೆಂಟ್‌ನಲ್ಲಿ ಒಂದು ದಿನದ ಊಟಕ್ಕೆ ಬರೋಬ್ಬರಿ 5 ಲಕ್ಷ ರೂ. ಖರ್ಚು ಮಾಡಿದ ಬೆಂಗಳೂರಿನ ವ್ಯಕ್ತಿ; ವರದಿ ಹಂಚಿಕೊಂಡ ಝೊಮ್ಯಾಟೊ
ಡಿಸೆಂಬರ್ 26 ರಂದು ಹಂಚಿಕೊಳ್ಳಲಾದ ಈ ವಿಡಿಯೋ 45 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹೆತ್ತವರ ಬಗ್ಗೆ ಕಿಂಚಿತ್ತೂ ಯೋಚಿಸದೆ ಯುವಕರ ಏಕೆ ಈ ರೀತಿ ದರ್ವರ್ತನೆ ತೋರುತ್ತಿದ್ದಾರೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇತರರ ಜೀವವನ್ನೂ ಪಣಕ್ಕಿಟ್ಟು ಬೇಕಾಬಿಟ್ಟಿ ವಾಹನ ಚಲಾಯಿಸಿದ ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿʼ ಎಂದು ಆಗ್ರಹಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ