AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ದೀಪಾವಳಿ ಹಬ್ಬಕ್ಕೆ ತಾಯಿಗೆ ದುಬಾರಿ ಬೆಲೆಯ ಐಫೋನ್‌ ಗಿಫ್ಟ್‌ ನೀಡಿದ ಮಗ; ವಿಡಿಯೋ ವೈರಲ್‌

ಹೆಚ್ಚಿನ ಜನರು ಬೆಳಕಿನ ಹಬ್ಬ ದೀಪಾವಳಿಗೆ ತಮ್ಮ ಪ್ರೀತಿಪಾತ್ರರಿಗೆ ಸ್ವೀಟ್ಸ್‌, ಬಟ್ಟೆ, ಹ್ಯಾಂಪರ್‌ ಬಾಕ್ಸ್‌ ಇತ್ಯಾದಿ ಉಡುಗೊರೆಗಳನ್ನು ನೀಡುತ್ತಿರುತ್ತಾರೆ. ಆದ್ರೆ ಇಲ್ಲೊಬ್ಬ ಯುವಕ ಈ ಬಾರಿಯ ದೀಪಾವಳಿ ಹಬ್ಬಕ್ಕೆ ಹೆತ್ತ ತಾಯಿಗೆ ದುಬಾರಿ ಬೆಲೆಯ ʼಐಫೋನ್‌ 15ʼ ಮೊಬೈಲ್‌ ಅನ್ನು ಉಡುಗೊರೆಯಾಗಿ ನೀಡಿದ್ದು, ಮಗ ನೀಡಿದ ದುಬಾರಿ ಉಡುಗೊರೆಯನ್ನು ಕಂಡು ತಾಯಿ ಭಾವುಕರಾಗಿದ್ದಾರೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಮಾಲಾಶ್ರೀ ಅಂಚನ್​
| Edited By: |

Updated on:Oct 31, 2024 | 3:45 PM

Share

ಹೆಚ್ಚಿನ ಜನರು ದೀಪಾವಳಿ ಹಬ್ಬದಂದು ತಮ್ಮ ಪ್ರೀತಿಪಾತ್ರರಿಗೆ ವಿಶೇಷ ಉಡುಗೊರೆಗಳನ್ನು ನೀಡುವ ಮೂಲಕ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸುತ್ತಾರೆ. ಇನ್ನೂ ಕೆಲವರು ತಮ್ಮ ಬಹಳ ಅಚ್ಚುಮೆಚ್ಚಿನ ವ್ಯಕ್ತಿಗೆ ಏನಾದ್ರೂ ದುಬಾರಿ ಉಡುಗೊರೆಯನ್ನು ಕೊಟ್ಟು ಅವರನ್ನು ಸಂತೋಷಪಡಿಸಬೇಕು ಎಂದು ಬಯಸುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಕೂಡಾ ತನ್ನ ಹೆತ್ತಮ್ಮನಿಗೆ ದುಬಾರಿ ಬೆಲೆಯ ʼಐಫೋನ್‌ 15ʼ ಮೊಬೈಲ್‌ ಅನ್ನು ಉಡುಗೊರೆಯಾಗಿ ನೀಡಿದ್ದು, ಮಗ ನೀಡಿದ ದುಬಾರಿ ಉಡುಗೊರೆಯನ್ನು ಕಂಡು ತಾಯಿ ಭಾವುಕರಾಗಿದ್ದಾರೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಸೋಮ್ರತ್‌ ದತ್ತಾ ಎಂಬ ಯುವಕ ತನ್ನ ಅಮ್ಮ ಅದೇ ಹಳೆಯ ರೆಡ್‌ಮಿ ಮೊಬೈಲ್‌ ಫೋನ್‌ ಅನ್ನು ಬಳಸುತ್ತಿರುವುದನ್ನು ಕಂಡು ಅಮ್ಮನಿಗೆ ಬೇರೆ ಮೊಬೈಲ್‌ ಕೊಡಿಸಬೇಕೆಂದು ಯೋಚಿಸಿ ದೀಪಾವಳಿ ಹಬ್ಬದ ಪ್ರಯುಕ್ತ ದುಬಾರಿ ಬೆಲೆಯ ʼಐಫೋನ್‌ 15ʼ ಮೊಬೈಲ್‌ ಅನ್ನು ಉಡುಗೊರೆಯನ್ನಾಗಿ ನೀಡಿದ್ದಾನೆ. ಮಗ ನೀಡಿದ ಈ ಸರ್‌ಪ್ರೈಸ್‌ ಗಿಫ್ಟ್‌ ಕಂಡು ತಾಯಿ ಭಾವುಕರಾಗಿದ್ದಾರೆ .

ಈ ಕುರಿತ ವಿಡಿಯೋವನ್ನು ಸೋಮ್ರತ್‌ ದತ್ತಾ (duttasomrattwt) ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ನನ್ನ ತಾಯಿ ಹಳೆಯ ರೆಡ್‌ಮಿ ಫೋನ್‌ ಅನ್ನು ಕಳೆದ ನಾಲ್ಕು ವರ್ಷಗಳಿಂದ ಬಳಸುತ್ತಿದ್ದಾರೆ ಮತ್ತು ಆ ಮೊಬೈಲ್‌ ಸರಿಯಾಗಿ ವರ್ಕ್‌ ಆಗ್ತಿರ್ಲಿಲ್ಲ. ಆದ್ದರಿಂದ ಈ ದೀಪಾಳಿಗೆ ನಾನು ನನ್ನಮ್ಮನಿಗೆ ಐಫೋನ್‌ 15 ಅನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾನೆ.

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಸೋಮ್ರತ್‌ ದತ್ತಾ ತನ್ನ ತಾಯಿಗೆ ದೀಪಾವಳಿಗೆ ಸರ್‌ಪ್ರೈಸ್‌ ಗಿಫ್ಟ್‌ ನೀಡುತ್ತಿರುವ ದೃಶ್ಯವನ್ನು ಕಾಣಬಹುದು. ದುಬಾರಿ ಬೆಲೆಯ ವಸ್ತು ಅದರಲ್ಲಿದೆ ಎಂಬ ಒಂದು ಸಣ್ಣ ಸುಳಿವು ಕೂಡಾ ಇರದೆ ಗಿಫ್ಟ್‌ ಓಪನ್‌ ಮಾಡುವ ಸಂದರ್ಭದಲ್ಲಿ ಐಫೋನ್‌ ಇರುವುದನ್ನು ಕಂಡು ತಾಯಿ ಫುಲ್‌ ಶಾಕ್‌ ಆಗಿದ್ದಾರೆ.

ಇದನ್ನೂ ಓದಿ: ನನಗೆ ಕನ್ನಡ ಕಲಿಯುವ ಅವಶ್ಯಕತೆಯಿಲ್ಲ; 12 ವರ್ಷ ಬೆಂಗಳೂರಿನಲ್ಲಿದ್ದುಕೊಂಡೆ ದುರಹಂಕಾರದ ಮಾತುಗಳನ್ನಾಡಿದ ಪರಭಾಷಿಕ

ಅಕ್ಟೋಬರ್ 29 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼ10 ವರ್ಷಗಳ ಹಿಂದೆ ಇದೇ ರೀತಿ ನಾನು ಕೂಡಾ ನನ್ನ ತಾಯಿಗೆ ನೋಕಿಯಾ ಲೂಮಿಯಾ 720 ಫೋನ್‌ ಅನ್ನು ಉಡುಗೊರೆಯಾಗಿ ನೀಡಿದ್ದೆ. ಅದೇ ಕ್ಷಣ ನೆನಪಿಗೆ ಬಂತುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆಹಾ… ತಾಯಿಯ ಮೊಗದಲ್ಲಿ ಆ ಸಂತೋಷವನ್ನು ನೋಡಿʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:44 pm, Thu, 31 October 24