AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

120 ಅಡಿ ಎತ್ತರದ ಹಾಲುಗಂಬ ಏರಿ ಸಾಹಸ ಮೆರೆದ 62ರ ವ್ಯಕ್ತಿ! ವಿಡಿಯೋ ನೋಡಿ

120 ಅಡಿ ಎತ್ತರದ ಹಾಲುಗಂಬ ಏರಿ ಸಾಹಸ ಮೆರೆದ 62ರ ವ್ಯಕ್ತಿ! ವಿಡಿಯೋ ನೋಡಿ

ಶಿವಕುಮಾರ್ ಪತ್ತಾರ್
| Edited By: |

Updated on: Apr 07, 2026 | 9:32 AM

Share

ಕುಷ್ಟಗಿ ತಾಲೂಕಿನ ಕಬ್ಬರಗಿ ಮಾಸ್ತೆಮ್ಮ ದೇವಿ ಜಾತ್ರೆಯಲ್ಲಿ 62 ವರ್ಷದ ಶರಣಪ್ಪ ಗೊಲ್ಲರ 120 ಅಡಿ ಎತ್ತರದ ಹಾಲುಗಂಬ ಏರಿ ಅದ್ಭುತ ಸಾಹಸ ಮೆರೆದಿದ್ದಾರೆ. ಎಣ್ಣೆ ಸವರಿದ ಕಂಬವನ್ನು ಲೀಲಾಜಾಲವಾಗಿ ಏರಿದ ಇವರ ಸಾಹಸಕ್ಕೆ ಸಾವಿರಾರು ಜನ ಬೆರಗಾಗಿದ್ದಾರೆ. ಅವರು ಕಂಬ ಏರುತ್ತಿರುವ ವಿಡಿಯೋ ಇಲ್ಲಿದೆ ನೋಡಿ.

ಕೊಪ್ಪಳ, ಏಪ್ರಿಲ್ 7: ಕುಷ್ಟಗಿ ತಾಲೂಕಿನ ಕಬ್ಬರಗಿಯಲ್ಲಿ ನಡೆದ ಶ್ರೀ ಮಾಸ್ತೆಮ್ಮ ದೇವಿ ಜಾತ್ರೆಯಲ್ಲಿ 62 ವರ್ಷದ ವ್ಯಕ್ತಿಯೊಬ್ಬರು ಅಸಾಮಾನ್ಯ ಸಾಹಸ ಮೆರೆದಿದ್ದಾರೆ. ಮನ್ನೇರಾಳ ಗ್ರಾಮದ ಶರಣಪ್ಪ ಗೊಲ್ಲರ ಎಂಬುವವರು ಎಣ್ಣೆ ಸವರಿ ಜಾರುತ್ತಿದ್ದ 120 ಅಡಿ ಎತ್ತರದ ಹಾಲುಗಂಭವನ್ನು ಲೀಲಾಜಾಲವಾಗಿ ಏರಿ ನೆರೆದಿದ್ದ ಸಾವಿರಾರು ಭಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಯಾದವ ಸಮಾಜದವರು ತಂಡೋಪತಂಡವಾಗಿ ಭಾಗವಹಿಸುತ್ತಾರೆ. ಕಂಬದ ಮೇಲೆ ಕೊಬ್ಬರಿ ಉತ್ತತ್ತಿ ಕಟ್ಟಿರಲಾಗುತ್ತದೆ. ಕಂಬದ ಮೇಲಿಂದ ಎಣ್ಣೆ ಬಿಡುತ್ತಿದ್ದರೂ ಲೆಕ್ಕಿಸದೆ, ಶರಣಪ್ಪ ಅವರು ತೋರಿದ ದೈಹಿಕ ಕ್ಷಮತೆ ಮತ್ತು ಭಕ್ತಿಗೆ ಜನ ಶಹಬ್ಬಾಸ್ ಎಂದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us