ಶ್ರೀಮುರಳಿಗೆ 80 ಸಾವಿರ ರೂಪಾಯಿ ಮೌಲ್ಯದ ಸೇಬಿನ ಹಾರ; ಇಲ್ಲಿದೆ ವಿಡಿಯೋ
80 ಸಾವಿರ ಬೆಲೆ ಬಾಳುವ ಸೇಬಿನ ಹಾರವನ್ನು ಶ್ರೀಮುರಳಿಗೆ ಹಾಕಲಾಯಿತು. ಇದರ ಜತೆಗೆ ರಕ್ತದಾನ ಶಿಬಿರವನ್ನು ಕೂಡ ಅಭಿಮಾನಿಗಳು ಆಯೋಜಿಸಿದ್ದು ವಿಶೇಷವಾಗಿತ್ತು. ಇಂದಿನ ಸಂಭ್ರಮಚಾರಣೆಯ ವಿಡಿಯೋ ಇಲ್ಲಿದೆ.
ಶ್ರೀಮುರಳಿ ನಟಿಸಿರುವ ‘ಮದಗಜ’ ಸಿನಿಮಾ ಬೆಟ್ಟದಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಇಂದು (ಡಿಸೆಂಬರ್3) ಸಿನಿಮಾ ರಿಲೀಸ್ ಆಗಿದೆ. ‘ಅಯೋಗ್ಯ’ ಸಿನಿಮಾ ಮೂಲಕ ಖ್ಯಾತಿ ಹೆಚ್ಚಿಸಿಕೊಂಡ ಮಹೇಶ್ ಕುಮಾರ್ ನಿರ್ದೇಶನದ ಸಿನಿಮಾ ಇದಾಗಿದೆ. ಆಶಿಕಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಸಖತ್ ಆ್ಯಕ್ಷನ್ ದೃಶ್ಯ ಇದೆ. ಚಿತ್ರಕ್ಕೆ ಎಲ್ಲ ಕಡೆಗಳಲ್ಲೂ ಮೆಚ್ಚುಗೆ ಕೇಳಿ ಬರುತ್ತಿದೆ. ಗಾಂಧಿ ನಗರದ ಅನುಪಮಾ ಚಿತ್ರಮಂದಿರದ ಎದುರು ಇಂದು ಸಂಭ್ರಮ ಮುಗಿಲುಮುಟ್ಟಿತ್ತು. ಇಡೀ ಚಿತ್ರತಂಡ ಇಲ್ಲಿಗೆ ಹಾಜರಿ ಹಾಕಿತ್ತು. 80 ಸಾವಿರ ಬೆಲೆ ಬಾಳುವ ಸೇಬಿನ ಹಾರವನ್ನು ಶ್ರೀಮುರಳಿಗೆ ಹಾಕಲಾಯಿತು. ಇದರ ಜತೆಗೆ ರಕ್ತದಾನ ಶಿಬಿರವನ್ನು ಕೂಡ ಅಭಿಮಾನಿಗಳು ಆಯೋಜಿಸಿದ್ದು ವಿಶೇಷವಾಗಿತ್ತು. ಇಂದಿನ ಸಂಭ್ರಮಚಾರಣೆಯ ವಿಡಿಯೋ ಇಲ್ಲಿದೆ.
ಇದನ್ನೂ ಓದಿ: Madhagaja Movie Review: ವಾರಾಣಸಿಯಿಂದ ಕರುನಾಡಿನವರೆಗೆ ನಿರೀಕ್ಷಿತ ಹಾದಿಯಲ್ಲಿ ‘ಮದಗಜ’ ಮಾಸ್ ಪಯಣ
ಮಾಸ್ ಮದಗಜ: ವಿಶೇಷ ಸಂದರ್ಶನದಲ್ಲಿ ಶ್ರೀಮುರಳಿ, ಆಶಿಕಾ, ಗರುಡ ರಾಮ್ ಮಸ್ತ್ ಮಾತುಕತೆ