ಹುಡ್ಗ ಚೆನ್ನಾಗಿಲ್ಲ ಎಂದು ತಿರಸ್ಕರಿಸಿದವಳು ಈಗ ಅವನೇ ಬೇಕೆಂದು ದುಂಬಾಲು: ಬೇರೆ ಹುಡ್ಗಿ ಜತೆ ಎಂಗೇಜ್ ಆದ ಯುವಕ ಕಂಗಾಲು
ಹೆಣ್ಣು ನೋಡುವುದಕ್ಕೆ ಹೋದಾಗ ಹುಡುಗ ಇಷ್ಟವಿಲ್ಲ ಎಂದು ತಿರಸ್ಕರಿಸಿದ್ದವಳು ಇದೀಗ ಅವನೇ ಬೇಕೆಂದು ದುಂಬಾಲು ಬಿದ್ದಿದ್ದಾಳೆ, ಇದರಿಂದ ಬೇರೆ ಯುವತಿ ಜೊತೆ ಎಂಗೇಜ್ ಆದ ಯುವಕ ಕಂಗಾಲಾಗಿದ್ದಾನೆ.
ಕಲಬುರಗಿ: ಮದುವೆಯಾಗುವಂತೆ ದುಂಬಾಲು ಬಿದ್ದ ಯುವತಿ ಕಾಟಕ್ಕೆ ಬೇಸತ್ತ ಯುವಕ ನಾಪತ್ತೆಯಾಗಿರೋ ಘಟನೆ ಕಲಬುರಗಿಯಲ್ಲಿ ನಡೆದಿದೆ. ಜೇವರ್ಗಿ ತಾಲೂಕಿನ ಹರವಾಳ ಗ್ರಾಮದ ಮಾರೇಪ್ಪ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದಾರೆ. ಹೆಣ್ಣು ನೋಡುವುದಕ್ಕೆ ಹೋದಾಗ ಹುಡುಗ ಇಷ್ಟವಿಲ್ಲ ಎಂದು ತಿರಸ್ಕರಿಸಿದ್ದಳು. ಬಳಿಕ ಮಾರೇಪ್ಪ ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ.
ಕಲಬುರಗಿ: ಮದುವೆಯಾಗುವಂತೆ ದುಂಬಾಲು ಬಿದ್ದ ಯುವತಿ ಕಾಟಕ್ಕೆ ಬೇಸತ್ತು ಮನೆಯಿಂದ ನಾಪತ್ತೆಯಾದ ಯುವಕ
ಆದ್ರೆ, ಇದೀಗ ತಿರಸ್ಕರಿಸಿದ್ದ ಯುವತಿ ಮಾರೇಪ್ಪನ ಹಿಂದೆ ಬಿದ್ದಿದ್ದಾಳೆ. ನೀನೇ ಬೇಕು ಅಂತ ದುಂಬಾಲು ಬಿದ್ದಿದ್ದಾಳೆ. ಮಾರೇಪ್ಪ ಮತ್ತೊಂದು ಹುಡುಗಿಯ ಜೊತೆ ಎಂಗೇಜ್ಮೆಂಟ್ ಆಗಿದ್ರೂ ಕೂಡ ನಿನ್ನ ಮದ್ವೆ ಆಗ್ತೇನೆಂದು ದುಂಬಾಲು ಬಿದ್ದಿದ್ದಾಳೆ. ಇದರಿಂದ ಬೇಸತ್ತು ಮಾರೇಪ್ಪ ಪತ್ರ ಬರೆದಿಟ್ಟು ಮನೆ ಬಿಟ್ಟು ಹೋಗಿದ್ದಾನೆ.
Latest Videos