Aditi Prabhudeva: ಮದುವೆಗೂ ಮುನ್ನ ಉತ್ತರ ಕರ್ನಾಟಕ ಶೈಲಿಯಲ್ಲಿ ಫೋಟೋಶೂಟ್ ಮಾಡಿಸಿದ ಅದಿತಿ-ಯಶಸ್ವಿ
Aditi Prabhudeva | Yashas: ಅದಿತಿ ಪ್ರಭುದೇವ ಹಾಗೂ ಯಶಸ್ವಿ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆಗೂ ಮುನ್ನ ಅವರಿಬ್ಬರು ಉತ್ತರ ಕರ್ನಾಟಕ ಶೈಲಿಯಲ್ಲಿ ಉಡುಗೆ ಧರಿಸಿ ಫೋಟೋಗೆ ಪೋಸ್ ನೀಡಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಟಿ ಅದಿತಿ ಪ್ರಭುದೇವ (Aditi Prabhudeva) ಅವರು ಹಸೆಮಣೆ ಏರುತ್ತಿದ್ದಾರೆ. ಇಂದು (ನ.27) ಬೆಂಗಳೂರಿನಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಸೋಮವಾರ (ನ.28) ಬೆಳಗ್ಗೆ 9.30ಕ್ಕೆ ಯಶಸ್ವಿ (ಯಶಸ್) ಜೊತೆ ಸಪ್ತಪದಿ ತುಳಿಯಲಿದ್ದಾರೆ. ರಿಸೆಪ್ಷನ್ಗೂ ಮುನ್ನ ಈ ಜೋಡಿ ವಿಶೇಷವಾಗಿ ಫೋಟೋಶೂಟ್ (Aditi Prabhudeva Photoshoot) ಮಾಡಿಸಿದೆ. ಉತ್ತರ ಕರ್ನಾಟಕ ಶೈಲಿಯಲ್ಲಿ ಉಡುಗೆ ಧರಿಸಿ ಫೋಟೋಗೆ ಪೋಸ್ ನೀಡಿದ್ದಾರೆ. ಆ ಕ್ಷಣದ ಎಕ್ಸ್ಕ್ಲೂಸಿವ್ ವಿಡಿಯೋ ಇಲ್ಲಿದೆ..
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Nov 27, 2022 03:01 PM
Latest Videos