ನಿನ್ನೆ 11-ಗಂಟೆ ವಿಚಾರಣೆಯ ಬಳಿಕ ಸುಜಾತ ಭಟ್ ಇಂದು ಪುನಃ ತನಿಖಾಧಿಕಾರಿಗಳ ಮುಂದೆ ಹಾಜರು
ಸುಜಾತ ಭಟ್ ಅವರಿಗೆ ಆಶ್ರಯ ನೀಡುತ್ತಿದ್ದ ಮಹೇಶ್ ಭಟ್ ತಿಮರೋಡಿ ಈಗ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಮೊದಲಾದರೆ ಸುಜಾತ ಅವರು ಉಜಿರೆಗೆ ಹೋದಾಗಲೆಲ್ಲ ತಿಮರೋಡಿ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ಆದರೆ ಈ ಸಲ ಅವರು ಲಾಡ್ಜ್ ಒಂದರಲ್ಲಿ ಉಳಿದುಕೊಂಡು ಅಲ್ಲಿಂದಲೇ ಬರೋದು ಹೋಗೋದನ್ನು ಮಾಡುತ್ತಿದ್ದಾರೆ. ಗಿರೀಶ್ ಮಟ್ಟಣ್ಣನವರ್ ಸಹ ಎರಡು ದಿನಗಳಿಂದ ಸುಜಾತ ಬಗ್ಗೆ ಹೇಳಿಕೆ ನೀಡಿಲ್ಲ.
ಬೆಂಗಳೂರು, ಆಗಸ್ಟ್ 28: ಸುಜಾತ ಭಟ್ ಇವತ್ತು ಪುನಃ ಬೆಳ್ತಂಗಡಿಯಲ್ಲಿ ಎಸ್ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ಈಗಾಗಲೇ ವರದಿಯಾಗಿರುವಂತೆ ನಿನ್ನೆ ಸುಮಾರು 11-ಗಂಟೆ ಕಾಲ ಅವರ ವಿಚಾರಣೆ ನಡೆಯಿತು. ಲಭ್ಯವಿರುವ ಮಾಹಿತಿ ಪ್ರಕಾರ ಅನನ್ಯಾ ಭಟ್ ಪ್ರಕರಣವನ್ನು (Ananya Bhat case) ಸೃಷ್ಟಿಸಿದ್ದಕ್ಕೆ, ಮಾಧ್ಯಮ ಮತ್ತು ಪೊಲೀಸರ ಮುಂದೆ ಸುಳ್ಳು ಹೇಳಿದ್ದಕ್ಕೆ ಸುಜಾತ ಅವರು ಪಶ್ಚಾತ್ತಾಪಪಡುತ್ತಿದ್ದಾರೆ ಮತ್ತು ಪರಿತಪಿಸುತ್ತಿದ್ದಾರೆ. ನಾನು ಹೇಳಿದ್ದು ಸುಳ್ಳು ದಯವಿಟ್ಟು ನನ್ನನ್ನು ಬಿಟ್ಟುಬಿಡಿ ಎಂದು ಅವರು ತನಿಖಾಧಿಕಾರಿಗಳ ಮುಂದೆ ಅವಲತ್ತುಕೊಂಡಿದ್ದಾರಂತೆ. ಅವರಿಂದ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಅವರು ಯಾವೆಲ್ಲ ಸುಳ್ಳುಗಳನ್ನು ಹೇಳಿದರು, ಸತ್ಯ ಏನು? ಅವರ ಹೇಳಿರುವುದರಲ್ಲಿ ಕಾಲ್ಪನಿಕತೆ ಎಷ್ಟು ಅನ್ನೋದನ್ನು ಅಧಿಕಾರಿಗಳೇ ಬಹಿರಂಗಪಡಿಸಬೇಕು.
ಇದನ್ನೂ ಓದಿ: ಧರ್ಮಸ್ಥಳದ ಮಂಜುನಾಥನ ಮೇಲೆ ಆಣೆ, ಅನನ್ಯ ಭಟ್ ನನ್ನ ಮಗಳು, ನಾನೇ ಹೆತ್ತಿದ್ದು: ಸುಜಾತ ಭಟ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

