AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಸರಾ ರಜೆಗೆ ಪ್ರವಾಸಿಗರ ದಂಡು: ಆಗುಂಬೆ ಘಾಟಿಯಲ್ಲಿ ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್!

ದಸರಾ ರಜೆಗೆ ಪ್ರವಾಸಿಗರ ದಂಡು: ಆಗುಂಬೆ ಘಾಟಿಯಲ್ಲಿ ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್!

Basavaraj Yaraganavi
| Edited By: |

Updated on: Oct 15, 2026 | 8:37 PM

Share

ಮುಖ್ಯಾಂಶಗಳು

  • ದಸರಾ ರಜೆ ಹಿನ್ನೆಲೆ ಪ್ರವಾಸಿಗರ ದಂಡು
  • ಉಡುಪಿ-ಶಿವಮೊಗ್ಗ ಮಾರ್ಗದಲ್ಲಿ ಟ್ರಾಫಿಕ್ ಜಾಮ್​
  • ಒಂದು ಗಂಟೆಯಿಂದ ಸಾಲುಗಟ್ಟಿ ನಿಂತ ವಾಹನಗಳು

ದಸರಾ ರಜೆ ಹಿನ್ನೆಲೆಯಲ್ಲಿ ಶಿವಮೊಗ್ಗ-ಉಡುಪಿ ಸಂಪರ್ಕ ಕೊಂಡಿಯಾದ ಆಗುಂಬೆ ಘಾಟಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಉಡುಪಿ, ಮಂಗಳೂರು, ಶಿವಮೊಗ್ಗ ಮಾರ್ಗದ ಪ್ರವಾಸಿಗರು ಕಿಲೋಮೀಟರ್ ಗಟ್ಟಲೆ ಸಾಲುಗಟ್ಟಿ ನಿಂತಿರುವ ವಾಹನಗಳಿಂದ ಪರದಾಡುತ್ತಿದ್ದಾರೆ. ಘಾಟಿಯಲ್ಲಿ ಬಸ್ ಕೆಟ್ಟು ನಿಂತಿದ್ದರಿಂದ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗಿದೆ. ಪೊಲೀಸರು ಪರಿಸ್ಥಿತಿ ನಿಭಾಯಿಸಲು ಹರಸಾಹಸಪಡುತ್ತಿದ್ದು, ಸವಾರರು ಎಚ್ಚರದಿಂದಿರಲು ಮನವಿ ಮಾಡಿದ್ದಾರೆ.

ಶಿವಮೊಗ್ಗ, ಅಕ್ಟೋಬರ್​​ 15: ರಾಜ್ಯದಲ್ಲಿ ಸದ್ಯ ದಸರಾ ರಜೆ ಇದೆ. ಹೀಗಾಗಿ ಜನರು ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಉಡುಪಿ, ಮಂಗಳೂರು ಹಾಗೂ ಶಿವಮೊಗ್ಗ ಮಾರ್ಗದಲ್ಲಿ ಪ್ರವಾಸಿಗರ ದಂಡು ಹಿನ್ನೆಲೆ ಆಗುಂಬೆ ಘಾಟಿಯಲ್ಲಿ ಕಿ.ಮೀ ಗಟ್ಟಲೆ ಟ್ರಾಫಿಕ್ ಜಾಮ್​​ ಉಂಟಾಗಿದೆ. ಶಿವಮೊಗ್ಗ-ಉಡುಪಿ ಸಂಪರ್ಕ ರಸ್ತೆ ಆಗುಂಬೆ ಘಾಟಿಯಲ್ಲಿ ಸುಮಾರು ಒಂದು ಗಂಟೆ​ ಕಿ.ಮೀ ಗಟ್ಟಲೆ ಸಾಲುಗಟ್ಟಿ ನಿಂತಿದ್ದು, ಪ್ರವಾಸಿಗರು ಪರದಾಡಿದ್ದಾರೆ. ಈ ​ಟ್ರಾಫಿಕ್ ಜಾಮ್ ನಡುವೆ ಘಾಟಿಯ ಮಧ್ಯಭಾಗದಲ್ಲಿ ಖಾಸಗಿ ಬಸ್​ ಕೆಟ್ಟು ನಿಂತಿದೆ. ಹೀಗಾಗಿ ವಾಹನಗಳ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗಿದೆ. ವಾಹನಗಳ ​ದಟ್ಟಣೆಯನ್ನು ನಿಯಂತ್ರಿಸಲು ಸ್ಥಳೀಯ ಪೊಲೀಸರು ಹರಸಾಹಸಪಟ್ಟರು. ​ಈ ಮಾರ್ಗದಲ್ಲಿ ಸಂಚರಿಸುವ ಸವಾರರಿಗೆ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಮನವಿ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us
Basavaraj Yaraganavi
Basavaraj Yaraganavi