ಹೀರೋ ಆಗಿ ಪುನೀತ್​ ಮೊದಲು ನಟಿಸಿದ ‘ಅಪ್ಪು’ ಚಿತ್ರಕ್ಕೆ ಸಂಗೀತ ನೀಡಲು ಗುರುಕಿರಣ್​ಗೆ ಚಾನ್ಸ್​ ಸಿಕ್ಕಿದ್ದು ಹೇಗೆ?

| Updated By: ಮದನ್​ ಕುಮಾರ್​

Updated on: Nov 30, 2021 | 10:00 AM

ನಟ ಪುನೀತ್​ ರಾಜ್​ಕುಮಾರ್​ ಮತ್ತು ಸಂಗೀತ ನಿರ್ದೇಶಕ ಗುರುಕಿರಣ್​ ಅವರದ್ದು ಹಲವು ವರ್ಷಗಳ ಸ್ನೇಹ. ಅಪ್ಪು ಜತೆಗಿನ ಬಾಂಧವ್ಯದ ಬಗ್ಗೆ ಗುರುಕಿರಣ್​ ಅವರು ಈ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರ ಮೊದಲ ಸಿನಿಮಾ ‘ಅಪ್ಪು’ (Appu Kannada Movie) ಸೂಪರ್​ ಹಿಟ್​ ಆಗಿತ್ತು. ಆ ಚಿತ್ರದ ಹಾಡುಗಳು ಸಹ ಜನಮೆಚ್ಚುಗೆ ಗಳಿಸಿದ್ದವು. ಇಂದಿಗೂ ಆ ಗೀತೆಗಳು ಕೇಳುಗರ ಫೇವರಿಟ್​ ಪಟ್ಟಿಯಲ್ಲಿವೆ. ‘ಅಪ್ಪು’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದು ಗುರುಕಿರಣ್​ (Gurukiran). ಆನಂತರ ಹಲವು ಚಿತ್ರಗಳಲ್ಲಿ ಪುನೀತ್​ ಮತ್ತು ಗುರುಕಿರಣ್​ ಒಟ್ಟಾಗಿ ಕೆಲಸ ಮಾಡಿದ್ದರು. ಇಬ್ಬರ ನಡುವೆ ಉತ್ತಮ ಸ್ನೇಹ ಇತ್ತು. ನಿಧನರಾಗುವುದಕ್ಕೂ ಹಿಂದಿನ ರಾತ್ರಿ ಗುರುಕಿರಣ್​ ಅವರ ಬರ್ತ್​ಡೇ ಪಾರ್ಟಿಗೆ ಪುನೀತ್​ ಬಂದುಹೋಗಿದ್ದರು. ಅಪ್ಪು ಗಾಯನದ ಬಗ್ಗೆ ಗುರುಕಿರಣ್​ಗೆ ಸಖತ್​ ಅಭಿಮಾನ. ಈ ಎಲ್ಲ ವಿಷಯಗಳ ಬಗ್ಗೆ ಗುರುಕಿರಣ್​ ಅವರು ಮಾತನಾಡಿದ್ದಾರೆ.

ಅಪ್ಪು ಸ್ಮರಣಾರ್ಥ ಅನೇಕ ಕಡೆಗಳಲ್ಲಿ ಅಭಿಮಾನಿಗಳು ಹಲವು ಸಮಾಜಮುಖಿ ಕಾರ್ಯಗಳನ್ನು ನೆರವೇರಿಸುತ್ತಿದ್ದಾರೆ. ಪುನೀತ್​ ರಾಜ್​ಕುಮಾರ್​ ಮಾಡುತ್ತಿದ್ದ ಸಮಾಜಸೇವೆಯು ಇಂದಿನ ಯುವ ಪೀಳಿಗೆಗೆ ಮಾದರಿ ಆಗಲಿ ಎಂದು ಗುರುಕಿರಣ್​ ಹೇಳಿದ್ದಾರೆ.

ಇದನ್ನೂ ಓದಿ:

ಪುನೀತ್​ ರಾಜ್​ಕುಮಾರ್​ ಇಲ್ಲದ ಒಂದು ತಿಂಗಳು: ಈ 30 ದಿನದಲ್ಲಿ ಆಗಿವೆ ಹಲವು ಬದಲಾವಣೆಗಳು

‘ಹೀಗೆಲ್ಲ ಮಾಡಿದ್ರೆ ಪುನೀತ್​ಗೆ ದ್ರೋಹ ಮಾಡಿದಂತೆ ಆಗುತ್ತೆ’; ಅಪ್ಪು​ ಸಮಾಧಿ ಬಳಿ ರಾಘಣ್ಣ ಮಾತು

Published On - 9:57 am, Tue, 30 November 21

Follow us on