AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುನೀತ್ ಕನ್ನಡಿಗರನ್ನು ಅಗಲಿ ಒಂದು ತಿಂಗಳು ಕಳೆದುಹೋಗಿದೆ, ಡಾ ರಾಜ್ ಕುಟುಂಬ ಇಂದು ಸಮಾಧಿಗೆ ಪೂಜೆ ಸಲ್ಲಿಸಿತು

ಪುನೀತ್ ಕನ್ನಡಿಗರನ್ನು ಅಗಲಿ ಒಂದು ತಿಂಗಳು ಕಳೆದುಹೋಗಿದೆ, ಡಾ ರಾಜ್ ಕುಟುಂಬ ಇಂದು ಸಮಾಧಿಗೆ ಪೂಜೆ ಸಲ್ಲಿಸಿತು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 29, 2021 | 10:53 PM

ಈ 30 ದಿನಗಳನ್ನು ಅವರ ಪತ್ನಿ ಮತ್ತು ಮಕ್ಕಳು ಮತ್ತು ದೊಡ್ಮನೆ ಕುಟುಂಬ ಪ್ರತಿಯೊಬ್ಬ ಸದಸ್ಯ ಅಪಾರ ನೋವು ಮತ್ತು ಯಾತನೆಯಲ್ಲಿ ಕಳೆದಿದ್ದಾರೆ.

ಕನ್ನಡ ನಾಡಿನ ಕಣ್ಮಣಿ ಪುನೀತ್ ರಾಜಕುಮಾರ್ ಅವರು ನಾಡನ್ನು ಅಗಲಿ ಸೋಮವಾರಕ್ಕೆ ಒಂದು ತಿಂಗಳು ಕಳೆಯಿತು. ಈ 30 ದಿನಗಳನ್ನು ಅವರ ಪತ್ನಿ ಮತ್ತು ಮಕ್ಕಳು ಮತ್ತು ದೊಡ್ಮನೆ ಕುಟುಂಬ ಪ್ರತಿಯೊಬ್ಬ ಸದಸ್ಯ ಅಪಾರ ನೋವು ಮತ್ತು ಯಾತನೆಯಲ್ಲಿ ಕಳೆದಿದ್ದಾರೆ. ದಿನಗಳು ಉರುಳಿವೆಯೇ ಹೊರತು ಅವರ ದುಃಖ ಮಾತ್ರ ಕಡಿಮೆಯಾಗಿಲ್ಲ. ಸೋಮವಾರದಂದು ಅಗಲಿದ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಲು ಕುಟುಂಬದ ಎಲ್ಲ ಸದಸ್ಯರು ಬಂದಿದ್ದರು. ಶಿವರಾಜಕುಮಾರ ಅವರ ಪತ್ನಿ ಗೀತಾ ಅವರು ರಾಘವೇಂದ್ರ ರಾಜಕುಮಾರ್ ಅವರ ದ್ವಿತೀಯ ಪುತ್ರ ಯುವರಾಜರೊಂದಿಗೆ ಪುನೀತ್ ಸಮಾಧಿ ಬಳಿ ಹೋಗುತ್ತಿರುವುದು ನಿಮಗೆ ವಿಡಿಯೋನಲ್ಲಿ ಕಾಣಿಸುತ್ತದೆ. ಅವರು ಪುನೀತ್ ಅವರ ಮಗಳನ್ನು ತಬ್ಬಿಕೊಳ್ಳುವುದನ್ನು ಸಹ ನೀವು ನೋಡಬಹುದು.

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಗೀತಾ ಅವರು ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದರಂತೆ. ಆಗ ಯುವರಾಜ ಅವರೇ ದೊಡ್ಡಮ್ಮನನ್ನು ಸಂತೈಸಿದರಂತೆ. ಗೀತಾ ಅವರು ಸೇರಿದಂತೆ ಪುನೀತ್ ಅವರನ್ನು ಕುಟುಂಬದ ಎಲ್ಲ ಸದಸ್ಯರು ಬಹಳ ಹಚ್ಚಿಕೊಂಡಿದ್ದರು. ಪುನೀತ್ ತಮ್ಮ ಮನೆಗೆ ಬಂದಾಗ ಮನೆಯಲ್ಲಿ ಏನಿದೆಯೋ ಅದನ್ನು ತನ್ನ ಅತ್ತಿಗೆಯಿಂದ ಬಡಿಸಿಕೊಂಡು ತಿಂದು ಹೋಗುತ್ತಿದ್ದ ವಿಷಯವನ್ನು ಟಿವಿ9 ನೊಂದಿಗೆ ಮಾತಾಡುವಾಗ ಶಿವಣ್ಣ ಹೇಳಿದ್ದರು.

ಸೋಮವಾರ ಸಮಾಧಿಗೆ, ಗೀತಾ ಅವರ ನಂತರ ಅಶ್ವಿನಿ ತಮ್ಮ ಮಕ್ಕಳೊಂದಿಗೆ ಬಂದರು. ಶಿವಣ್ಣ ಪ್ರಾಯಶಃ ಮೊದಲೇ ಬಂದಿದ್ದರು ಅಂತ ಕಾಣುತ್ತೆ. ಡಾ ರಾಜ್ ಕುಟುಂಬದವರಲ್ಲದೆ, ಬೇರೆಯವರೂ ತಮ್ಮ ಶ್ರದ್ಧಾಂಜಲಿಯನ್ನು ಸಲ್ಲಿಸಲು ಅಗಮಿಸಿದ್ದರು.

ಇದನ್ನೂ ಓದಿ:   Video: ಮೀಡಿಯಾಕ್ಕೆ ಬೈಟ್​ ಕೊಡುತ್ತಿದ್ದ ಟಿಎಂಸಿ ಸಂಸದನಿಗೆ ಹಿಂದಿನಿಂದ ಬಂದ ರಾಜನಾಥ್​ ಸಿಂಗ್​ ಮಾಡಿದ್ದೇನು? ಇದು ಸ್ಪೆಶಲ್​ ವಿಡಿಯೋ !