ನವಾ ರೇಸರ್ ಇ-ಬೈಕ್ ಹೈಬ್ರೀಡ್ ಬ್ಯಾಟರಿ ಸಿಸ್ಟಂನೊಂದಿಗೆ ಓಡುವ ವಿಶ್ವದ ಪ್ರಪ್ರಥಮ ಬೈಕ್ ಎನಿಸಿಕೊಳ್ಳಲಿದೆ!

ನವಾ ರೇಸರ್ ಇ-ಬೈಕ್ ಹೈಬ್ರೀಡ್ ಬ್ಯಾಟರಿ ಸಿಸ್ಟಂನೊಂದಿಗೆ ಓಡುವ ವಿಶ್ವದ ಪ್ರಪ್ರಥಮ ಬೈಕ್ ಎನಿಸಿಕೊಳ್ಳಲಿದೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Nov 29, 2021 | 8:47 PM

ಈ ಬೈಕನ್ನು ಕೆಲ ಕಂಪನಿಗಳು ಜೊತೆಗೂಡಿ ನಿರ್ಮಿಸುತ್ತಿವೆ. ನವಾ ಟೆಕ್ನಾಲಜೀಸ್, ಅಕ್ಕಾ ಟೆಕ್ನಾಲಜೀಸ್, ಪ್ರೋಎನರ್ಜಿ ಅಂಡ್ ಫಾರ್ ಮತ್ತು ವೈ ಎಸ್ ವಿ ಕಂಪನಿಗಳ ಜಂಟಿ ವೆಂಚರ್ನಲ್ಲಿ ನವಾ ಇ-ಬೈಕ್ ತಯಾರಾಗುತ್ತಿದೆ.

ಮೊಟಾರ್ ಬೈಕ್ ಗಳು ಹೀಗೂ ಇರುತ್ತವೆಯೇ ಅನ್ನುವ ಹಾಗಿವೆ ನವಾ ಅರ್ಬನ್ ಮತ್ತು ನಾವಾ ರೇಸರ್ ಇ-ಬೈಕ್​ಗಳು! ಈ ವಿಡಿಯೋ ನೋಡಿ. ಒಂದು ಅಂಕುಡೊಂಕಾದ ಗೆರೆಯನ್ನು ಎಳೆದು ಅದನ್ನೇ ಬೈಕ್ ಆಗಿ ಪರಿವರ್ತಿಸಲಾಗಿದೆ ಅನ್ನುವಂತಿದೆ ಈ ಗಾಡಿಯ ಲುಕ್. ಇಟಲಿಯ ಮಿಲಾನ್ನಲ್ಲಿ ಇತ್ತೀಚಿಗೆ ಒಂದು ಬೈಕ್ ಶೋ ನಡೆಯಿತು ಮತ್ತು ಇದನ್ನು ಬೈಕ್ಗಳಿಗೆ ಸಂಬಂಧಿಸಿದಂತೆ ಹೇಳವುದಾದರೆ ವಿಶ್ವದ ಅತಿದೊಡ್ಡ ಶೋ ಎನ್ನಲಾಗುತ್ತದೆ. ಶೋನಲ್ಲಿ ಭಾಗವಹಿಸಿದವರು ನವಾ ಬೈಕ್ ಲುಕ್ಸ್​ನಿಂದ ಬಹಳ ಪ್ರಭಾವಿತರಾಗಿದ್ದಾರಂತೆ.

ಈ ಬೈಕನ್ನು ಕೆಲ ಕಂಪನಿಗಳು ಜೊತೆಗೂಡಿ ನಿರ್ಮಿಸುತ್ತಿವೆ. ನವಾ ಟೆಕ್ನಾಲಜೀಸ್, ಅಕ್ಕಾ ಟೆಕ್ನಾಲಜೀಸ್, ಪ್ರೋಎನರ್ಜಿ ಅಂಡ್ ಫಾರ್ ಮತ್ತು ವೈ ಎಸ್ ವಿ ಕಂಪನಿಗಳ ಜಂಟಿ ವೆಂಚರ್ನಲ್ಲಿ ನವಾ ಇ-ಬೈಕ್ ತಯಾರಾಗುತ್ತಿದೆ. ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಮುಂದಿನ ವರ್ಷದ ಮಧ್ಯಭಾಗದಲ್ಲಿ ನವಾ ವಾಹನಗಳು ಮಾರ್ಕೆಟ್ ಪ್ರವೇಶಿಸಲಿವೆ.

ಆಗಲೇ ಹೇಳಿದ ಹಾಗೆ ಎರಡು ಆವೃತ್ತಿಗಳಲ್ಲಿ ಈ ಬೈಕ್ ರಸ್ತೆಗಿಳಿಯಲಿದೆ, ನವಾ ರೇಸರ್ ಮತ್ತು ನವಾ ಅರ್ಬನ್. ಬೈಕ್ಗಳು ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ಹೈಬ್ರಿಡ್ ಬ್ಯಾಟರಿ ಸಿಸ್ಟಂನೊಂದಿಗೆ ಚಲಿಸಲಿವೆ ಮತ್ತು ಇದಕ್ಕೆ ಮುಂದಿನ ತಲೆಮಾರಿನ ನವಾಕ್ಯಾಪ್ ಅಲ್ಟ್ರಾ ಕೆಪಸಿಟರ್ಗಳನ್ನು ಅಳವಡಿಸಲಾಗಿದೆ.

ಈ ಕೆಪಾಸಿಟರ್ಗಳು ಹೈಬ್ರೀಡ್ ಬ್ಯಾಟರಿಯ ಸಾಮರ್ಥ್ಯವನ್ನು ಹೊರಹಾಕುತ್ತವೆ ಮತ್ತು ವಾಹನದ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಬೈಕ್ ಗೆ ಇಲೆಕ್ಟ್ರಾನಿಕ್ ಇಂಟಿಗ್ರೇಷನ್ ಅನ್ನು ಪ್ರೊಎನರ್ಜಿ ಮತ್ತು ಫಾರ್ ಸಂಸ್ಥೆ ಒದಗಿಸಿದರೆ, ಅದರ ವಿನ್ಯಾಸವನ್ನು ಅಕ್ಕಾ ಟೆಕ್ನಾಲಜೀಸ್ ರೂಪಿಸಿದೆ.

ಇದನ್ನೂ ಓದಿ:    Video: ಮೀಡಿಯಾಕ್ಕೆ ಬೈಟ್​ ಕೊಡುತ್ತಿದ್ದ ಟಿಎಂಸಿ ಸಂಸದನಿಗೆ ಹಿಂದಿನಿಂದ ಬಂದ ರಾಜನಾಥ್​ ಸಿಂಗ್​ ಮಾಡಿದ್ದೇನು? ಇದು ಸ್ಪೆಶಲ್​ ವಿಡಿಯೋ !

Published on: Nov 29, 2021 08:46 PM