Mandya:  ಸುದ್ದಿಯಲ್ಲಿರದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕಾಲಭೈರವೇಶ್ವರನಿಗೆ ಪೂಜೆ ಸಲ್ಲಿಸಿ ಬಸಪ್ಪನ ಪಾದ ಕೇಳಿದರು!

ಅರುಣ್​ ಕುಮಾರ್​ ಬೆಳ್ಳಿ

Updated on: Apr 08, 2023 | 12:01 PM

ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗೀಲ್ ಜೊತೆ ಕಳೆದ ತಿಂಗಳು ಮಾತಿನ ಜಗಳ ನಡೆಸಿದ್ದ ರೋಹಿಣಿ ಸರ್ಕಾರದಿಂದ ವರ್ಗಾವಣೆ ಹೊಂದಿದ ಬಳಿಕ ಮುಗುಮ್ಮಾಗಿದ್ದಾರೆ.

ಮಂಡ್ಯ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿಲ್ಲ ಅನ್ನೋದು ಸಹ ಒಂದು ಸುದ್ದಿ ಮಾರಾಯ್ರೇ. ಶನಿವಾರ ಬೆಳಗ್ಗೆ ಅವರು ಸುದ್ದಿಗೆ ಬಂದಿದ್ದಾರೆ. ವಿವಾದವೇನೂ ಇಲ್ಲ! ವಿಷಯವೇನೆಂದರೆ ರೋಹಿಣಿ ಚಿಕ್ಕರಸಿನಕೆರೆಯ ಕಾಲಭೈರವೇಶ್ವರ (Kalabhairaveshwara) ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಇಲ್ಲಿ ರೂಢಿಯಲ್ಲಿರುವ ಪದ್ಧತಿಯೆಂದರೆ, ಕಾಲಭೈರವೇಶ್ವರನಿಗೆ ಪೂಜೆ ನೆರವೇರಿಸಿದವರು ಬಸಪ್ಪನ ಮುಂದೆ ಕೂತು ಪಾದ ಕೇಳುತ್ತಾರೆ. ಬಸಪ್ಪ ಪಾದ ನೀಡಿದರೆ ಹೊತ್ತ ಹರಕೆ ಈಡೇರುತ್ತದೆ ಎಂಬ ಪ್ರತೀತಿ ಇದೆ. ರೋಹಿಣಿ ಕೂಡ ಅದನ್ನೇ ಮಾಡಿದರು. ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗೀಲ್ (D Roopa Moudgil) ಜೊತೆ ಕಳೆದ ತಿಂಗಳು ಮಾತಿನ ಜಗಳ ನಡೆಸಿದ್ದ ರೋಹಿಣಿ ಸರ್ಕಾರದಿಂದ ವರ್ಗಾವಣೆ ಹೊಂದಿದ ಬಳಿಕ ಮುಗುಮ್ಮಾಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.