Dharwad: ಶೂ ನಲ್ಲಿ ನಾಗರ ಹಾವಿನ ಮರಿ ಪತ್ತೆ; ಉರಗ ಪ್ರೇಮಿಯಿಂದ ರಕ್ಷಣೆ, ವಿಡಿಯೋ ವೈರಲ್

ನಗರದ ಹೊಸ ಯಲ್ಲಾಪುರ ನೇಕಾರ ಓಣಿಯಲ್ಲಿನ ನಂದಿತಾ ಶಿವನಗೌಡರ ಎಂಬುವವರ ಮನೆಯಲ್ಲಿ ನಾಗರ ಹಾವಿನ ಮರಿಯೊಂದು ಪತ್ತೆಯಾಗಿದ್ದು, ಉರಗ ಪ್ರೇಮಿಯೊಬ್ಬರು ಹಿಡಿದು ರಕ್ಷಣೆ ಮಾಡಿದ್ದಾರೆ.

Follow us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 29, 2023 | 2:59 PM

ಧಾರವಾಡ: ನಗರದ ಹೊಸ ಯಲ್ಲಾಪುರ(Yellapur) ನೇಕಾರ ಓಣಿಯಲ್ಲಿನ ನಂದಿತಾ ಶಿವನಗೌಡರ ಎಂಬುವವರ ಮನೆಯಲ್ಲಿ ನಾಗರ ಹಾವಿನ ಮರಿಯೊಂದು ಪತ್ತೆಯಾಗಿದೆ. ಮನೆ ಹೊರಗೆ ಕಳಚಿಟ್ಟಿದ್ದ ಶೂನಲ್ಲಿ ನಾಗರ ಹಾವಿನ ಮರಿಯೊಂದು ಸೇರಿಕೊಂಡಿತ್ತು. ಅದನ್ನು ಗಮನಿಸಿದ ಮನೆಯವರು, ಉರಗ ಪ್ರೇಮಿಯಾದ ಯಲ್ಲಪ್ಪ ಎಂಬುವವರಿಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅವರು ಮರಿಯನ್ನ ಹೊರಗೆ ತೆಗೆದು, ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಅದೃಷ್ಟವಶಾತ್​ ಮುಂದಾಗುವ ಅನಾಹುತ ತಪ್ಪಿದಂತಾಗಿದೆ. ಆದಷ್ಟು ಮನೆಯ ಹೊರಗಡೆ ಇಟ್ಟ ಶೂ ಗಳನ್ನ ಒಮ್ಮೆ ಗಮನಿಸಿ ಧರಿಸುವುದು ಒಳ್ಳೆಯದು.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ