ಕೊರೊನಾ ಅರಿವು ಮೂಡಿಸಲು ಸೆಲೆಬ್ರಿಟಿಗಳ ಮೊರೆ ಹೋದ BBMP

[lazy-load-videos-and-sticky-control id=”agDSFGiy1us”] ಬೆಂಗಳೂರು: ಕೊರೊನಾ ಸೋಂಕು ಇಡೀ ವಿಶ್ವಕ್ಕೆ ಹಬ್ಬಿದೆ. ದಿನದಿಂದ ದಿನಕ್ಕೆ ಕೊರೊನಾ ಅಟ್ಟಹಾಸ ಹೆಚ್ಚಾಗಿದೆ. ಲಾಕ್​ಡೌನ್, ಸೀಲ್​ಡೌನ್ ಅಸ್ತ್ರಗಳು ಕೊರೊನಾ ಮೇಲೆ ಪರಿಣಾಮ ಬೀರುತ್ತಿಲ್ಲ. ಜನರು ಸಾಮಾಜಿಕ ಅಂತರ ಮರೆತು, ಮಾಸ್ಕ್ ಧರಿಸದೆ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಹೀಗಾಗಿ ಜನರಲ್ಲಿ ಕೊರೊನಾ ಬಗ್ಗೆ ಅರಿವು ಮೂಡಿಸಲು BBMP ಹೊಸ ಪ್ಲಾನ್ ಮಾಡಿದೆ. BBMP ಇದೀಗ ಸೆಲೆಬ್ರಿಟಿಗಳ ಮೊರೆ ಹೋಗಿದೆ. ನಟ-ನಟಿಯರಿಂದ ಅರಿವು ಮೂಡಿಸಲು BBMP ಮುಂದಾಗಿದೆ. ಸಾರ್ವಜನಿಕರಿಗೆ ವೈರಸ್ ಬಗ್ಗೆ ಅರಿವು ಮೂಡಿಸಲು ರಾಯಭಾರಿಯಾಗಿ ಪುನೀತ್ ರಾಜ್ […]

ಕೊರೊನಾ ಅರಿವು ಮೂಡಿಸಲು ಸೆಲೆಬ್ರಿಟಿಗಳ ಮೊರೆ ಹೋದ BBMP
ಬಿಬಿಎಂಪಿ ಮುಖ್ಯ ಕಚೇರಿ
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Jul 20, 2020 | 2:40 PM

[lazy-load-videos-and-sticky-control id=”agDSFGiy1us”]
ಬೆಂಗಳೂರು: ಕೊರೊನಾ ಸೋಂಕು ಇಡೀ ವಿಶ್ವಕ್ಕೆ ಹಬ್ಬಿದೆ. ದಿನದಿಂದ ದಿನಕ್ಕೆ ಕೊರೊನಾ ಅಟ್ಟಹಾಸ ಹೆಚ್ಚಾಗಿದೆ. ಲಾಕ್​ಡೌನ್, ಸೀಲ್​ಡೌನ್ ಅಸ್ತ್ರಗಳು ಕೊರೊನಾ ಮೇಲೆ ಪರಿಣಾಮ ಬೀರುತ್ತಿಲ್ಲ. ಜನರು ಸಾಮಾಜಿಕ ಅಂತರ ಮರೆತು, ಮಾಸ್ಕ್ ಧರಿಸದೆ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಹೀಗಾಗಿ ಜನರಲ್ಲಿ ಕೊರೊನಾ ಬಗ್ಗೆ ಅರಿವು ಮೂಡಿಸಲು BBMP ಹೊಸ ಪ್ಲಾನ್ ಮಾಡಿದೆ.

BBMP ಇದೀಗ ಸೆಲೆಬ್ರಿಟಿಗಳ ಮೊರೆ ಹೋಗಿದೆ. ನಟ-ನಟಿಯರಿಂದ ಅರಿವು ಮೂಡಿಸಲು BBMP ಮುಂದಾಗಿದೆ. ಸಾರ್ವಜನಿಕರಿಗೆ ವೈರಸ್ ಬಗ್ಗೆ ಅರಿವು ಮೂಡಿಸಲು ರಾಯಭಾರಿಯಾಗಿ ಪುನೀತ್ ರಾಜ್ ಕುಮಾರ್, ಸುದೀಪ್, ರಚಿತಾರಾಮ್ ನೇಮಿಸಲು ಬಿಬಿಎಂಪಿ ಚಿಂತಿಸುತ್ತಿದೆ. ಸೆಲೆಬ್ರಿಟಿಗಳಿಂದ ನಗರದಲ್ಲಿ ವೈರಸ್ ಬಗ್ಗೆ ಜಾಗ್ರತೆ ಕಾರ್ಯಕ್ರಮ ನಡೆಸಿದರೆ ಜನ ವೈರಸ್ ವಿರುದ್ಧ ಹೋರಾಡಲು ಹೆಚ್ಚಿನ ಗಮನವಹಿಸುತ್ತಾರೆ ಎನ್ನಲಾಗುತ್ತಿದೆ.

ಕೊರೊನಾ ಜಾಗೃತಿಗೆ ರಾಯಭಾರಿಯಾದ ನಟ ರಮೇಶ್
ಬಿಬಿಎಂಪಿ ನಟ ರಮೇಶ್ ಅರವಿಂದ್​ರನ್ನ ರಾಯಭಾರಿಯಾಗಿ ನೇಮಕ ಮಾಡಿದೆ.

Published On - 12:44 pm, Mon, 20 July 20

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us