AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ 7 ಜನರ ಹತ್ಯೆ ಕೇಸ್​: ಆರೋಪಿ ಕುರಿತು ಶಾಕಿಂಗ್​​ ಹೇಳಿಕೆ ಕೊಟ್ಟ ಪೊಲೀಸ್​​ ಕಮಿಷನರ್​

ಬೆಂಗಳೂರಿನಲ್ಲಿ 7 ಜನರ ಹತ್ಯೆ ಕೇಸ್​: ಆರೋಪಿ ಕುರಿತು ಶಾಕಿಂಗ್​​ ಹೇಳಿಕೆ ಕೊಟ್ಟ ಪೊಲೀಸ್​​ ಕಮಿಷನರ್​

ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Nov 06, 2026 | 2:17 PM

Share

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಏಳು ಜನರ ಭೀಕರ ಕೊಲೆ ಪ್ರಕರಣ ಸಂಬಂಧ ನಗರ ಪೊಲೀಸ್​​ ಕಮಿಷನರ್​​ ಸೀಮಂತ್​​ ಕುಮಾರ್​​ ಸಿಂಗ್​​ ಹಲವು ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಆರೋಪಿಯು ತನ್ನ ಪತ್ನಿ ಸೇರಿ ಏಳು ಮಂದಿ ಸಂಬಂಧಿಕರನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ತನಿಖೆಗೆ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಒಂದು ಶವ ಪತ್ತೆಯಾಗಿದೆ. ಉಳಿದ ಆರು ಶವಗಳಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು, ನವೆಂಬರ್​​ 06: ಒಂದೇ ಕುಟುಂಬದ 7 ಜನರ ಕೊಲೆ ಪ್ರಕರಣ ಸಂಬಂಧ ಬೆಂಗಳೂರು ನಗರ ಪೊಲೀಸ್​​ ಕಮಿಷನರ್​​ ಸೀಮಂತ್​​ ಕುಮಾರ್​​ ಸಿಂಗ್​​ ಹಲವು ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಕೊಲೆಯಾದವರ ಪೈಕಿ ಒಂದು ಮೃತದೇಹ ಸಿಕ್ಕಿದೆ, ಇನ್ನೂ 6 ಮೃತದೇಹ ಸಿಗಬೇಕು. ವಿಶೇಷ ತಂಡ ರಚನೆ ಮಾಡಿ ಶವ ಎಸೆದ ಸ್ಥಳಕ್ಕೆ ಕಳಿಸುತ್ತಿದ್ದೇವೆ. ನ.3ರಂದು ಶ್ರೀರಾಮಪುರ ಠಾಣೆಯಲ್ಲಿ ಮಿಸ್ಸಿಂಗ್​ ಕೇಸ್​ ದಾಖಲಾಗಿತ್ತು. ತನಿಖೆ ವೇಳೆ ಆರೋಪಿ ಏಳು ಜನರನ್ನು ಕೊಲೆ ಮಾಡಿದ್ದಾಗಿ ಹೇಳಿದ್ದಾನೆ. ಸದ್ಯ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್​ ದಾಖಲಾಗಿದ್ದು, ಪತ್ನಿ ಸುನೀತಾ, ರೂಪಾವತಿ, ಶಿವಕುಮಾರ್​, ಶಂಕರ್​, ನಳಿನಿ ಸೇರಿ 7 ಜನರ ಕೊಲೆ ಮಾಡಿದ್ದೇನೆ ಎಂದು ಆರೋಪಿ ಹೇಳುತ್ತಿದ್ದಾನೆ. ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ನೇತೃತ್ವದಲ್ಲಿ ತನಿಖೆ ಆಗುತ್ತಿದ್ದು, ಯಾವ ಕಾರಣಕ್ಕೆ ಕೊಲೆ ಆಯ್ತು ಎಂದು ಪತ್ತೆ ಮಾಡ್ತೇವೆ. ಓರ್ವ ಅಪ್ರಾಪ್ತ ಬಾಲಕನ ಜೊತೆಗೆ ಆರೋಪಿ ಶೇಖರ್ ಸಿಕ್ಕಿದ್ದಾನೆ. ಆ ಬಾಲಕನ ಕೊಲೆಗೂ ತೀರ್ಮಾನಿಸಿದ್ದ ಎಂಬುದು ತಿಳಿದುಬಂದಿದೆ. ಸದ್ಯ ಬಾಲಕನನ್ನು ರಕ್ಷಣೆ ಮಾಡಲಾಗಿದೆ ಎಂದವರು ತಿಳಿಸಿದ್ದಾರೆ.

ಇನ್ನು ಆರೋಪಿ ಇಂದುಶೇಖರ್​​ಗೆ ಅಪ್ರಾಪ್ತ ಮಗಳು ಸಹ ಸಾಥ್​​ ನೀಡಿದ್ದಾಳೆ. ಆಕೆಯನ್ನೂ ವಿಚಾರಣೆ ನಡೆಸಲಾಗುತ್ತಿದೆ. ಕಳೆದ 15 ದಿನದಿಂದ 20 ದಿನದ ಅಂತರದಲ್ಲಿ ಕೊಲೆ ಮಾಡಲಾಗಿದ್ದು, ಮೊದಲೇ ದೂರು ನೀಡಿದ್ದರ ಬಗ್ಗೆ ನಾವು ಪರಿಶೀಲನೆ ಮಾಡ್ತಿದ್ದೇವೆ. ಈಗಿನ ಮಾಹಿತಿ ಪ್ರಕಾರ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಹಲವು ಕಡೆ ಮೃತದೇಹಗಳನ್ನು ಎಸೆದಿದ್ದಾನೆ. ಆತನ ಹೇಳಿಕೆ ಆಧರಿಸಿ ಈಗಾಗಲೇ ಆಯಾ ಜಿಲ್ಲಾ ಎಸ್​​ಪಿಗಳ ಮೂಲಕ ಪರಿಶೀಲನೆ ನಡೆಸಿದ್ದೇವೆ. ಆರೋಪಿ ಈ ಹಿಂದೆ ಕ್ಯಾಬ್​ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ. ಆತನ ವಿರುದ್ಧ ಮಾದನಾಯಕನಹಳ್ಳಿಯಲ್ಲಿ ಸರಗಳ್ಳತನ ಕೇಸ್ ಕೂಡ ಇತ್ತು ಎಂದು ಸೀಮಂತ್​ ಕುಮಾರ್ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಜ್ವಲ್​ ಕುಮಾರ್ ಎನ್​ ವೈ
ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More