AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಮಳೆ ಅವಾಂತರ: ಬನಶಂಕರಿ ಮೆಟ್ರೋ ನಿಲ್ದಾಣಕ್ಕೂ ನುಗ್ಗಿದ ನೀರು

ಬೆಂಗಳೂರು ಮಳೆ ಅವಾಂತರ: ಬನಶಂಕರಿ ಮೆಟ್ರೋ ನಿಲ್ದಾಣಕ್ಕೂ ನುಗ್ಗಿದ ನೀರು

ಅಕ್ಷಯ್​ ಪಲ್ಲಮಜಲು​​
|

Updated on: Apr 29, 2026 | 7:11 PM

Share

ಬೆಂಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಬನಶಂಕರಿ ಮೆಟ್ರೋ ನಿಲ್ದಾಣದೊಳಗೆ ನೀರು ನುಗ್ಗಿದೆ. ಟಿಕೆಟ್ ಕೌಂಟರ್, ಪ್ರಯಾಣಿಕರ ಓಡಾಟದ ಜಾಗಗಳಲ್ಲಿ ನೀರು ನಿಂತು, ಛಾವಣಿಯಿಂದ ತೊಟ್ಟಿಕ್ಕುತ್ತಿದೆ. ಇದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಮೆಟ್ರೋ ಸೇವೆ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ನಿಲ್ದಾಣದ ಸ್ವಚ್ಛತೆಗೂ ಧಕ್ಕೆಯಾಗಿದೆ.

ಬೆಂಗಳೂರು, ಏ.29: ರಾಜಧಾನಿಯಲ್ಲಿ ಮುಂದುವರಿದಿರುವ ಧಾರಾಕಾರ ಮಳೆಯು ಮೆಟ್ರೋ ನಿಲ್ದಾಣಗಳನ್ನೂ ಬಿಟ್ಟಿಲ್ಲ. ನಗರದ ಜನನಿಬಿಡ ಬನಶಂಕರಿ ಮೆಟ್ರೋ ನಿಲ್ದಾಣದ ಒಳಭಾಗಕ್ಕೆ ಮಳೆ ನೀರು ನುಗ್ಗಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ನಗರದಾದ್ಯಂತ ಗುಡುಗು ಸಹಿತ ಸುರಿಯುತ್ತಿರುವ ಅಬ್ಬರದ ಮಳೆಯಿಂದಾಗಿ ಬನಶಂಕರಿ ಮೆಟ್ರೋ ನಿಲ್ದಾಣದ ಒಳಗೆ ನೀರು ಹರಿದು ಬಂದಿದೆ. ನಿಲ್ದಾಣದ ಟಿಕೆಟ್ ಕೌಂಟರ್ ಪ್ರದೇಶ ಸೇರಿದಂತೆ ಪ್ರಯಾಣಿಕರು ಓಡಾಡುವ ಜಾಗಗಳಲ್ಲಿ ಮಳೆ ನೀರು ನಿಂತಿದೆ. ಛಾವಣಿಯಿಂದ ನೀರು ತೊಟ್ಟಿಕ್ಕುತ್ತಿರುವುದರಿಂದ ಮೆಟ್ರೋ ಏರಲು ಬಂದ ಜನರು ಅತ್ತ ಇತ್ತ ಚಲಿಸಲಾಗದೆ ಪರದಾಡುವಂತಾಯಿತು. ಮಳೆ ಹಾನಿಯಿಂದಾಗಿ ಮೆಟ್ರೋ ನಿಲ್ದಾಣದ ಆವರಣದ ಸ್ವಚ್ಛತೆಗೂ ಧಕ್ಕೆಯುಂಟಾಗಿದ್ದು, ಬಿಡುವುವಿಲ್ಲದೆ ಸುರಿಯುತ್ತಿರುವ ಮಳೆಯಿಂದಾಗಿ ಸಾರ್ವಜನಿಕರು ಮೆಟ್ರೋ ಸೇವೆ ಪಡೆಯಲು ಹರಸಾಹಸ ಪಡುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More